ಧಾರವಾಡದಲ್ಲಿ ಆಗಸ್ಟ್ 22ರಿಂದ ಚಲನಚಿತ್ರೋತ್ಸವ: ಪ್ರವೇಶಕ್ಕೆ ಆಹ್ವಾನ
ಕಲ್ಯಾಣ ಕರ್ನಾಟಕದ ಧಾರವಾಡದಲ್ಲಿ ಆಗಸ್ಟ್ 22, 23ರಂದು ಚಲನಚಿತ್ರೋತ್ಸವ ಆಯೋಜಿಸಿರುವ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅದಕ್ಕಾಗಿ ಪ್ರವೇಶಗಳನ್ನು ಆಹ್ವಾನಿಸಿದೆ.2014ರಲ್ಲಿ ಆರಂಭವಾದ ಮಂಡಳಿ ಹಿಂದೆ 2022ರಲ್ಲಿ ಚಿತ್ರೋತ್ಸವವನ್ನು ಆಯೋಜಿಸಿತ್ತು.ಮಂಡಳಿಯ ಅಧ್ಯಕ್ಷ ಮಂಜುನಾಥ್ ಎಲ್ ಹಗೇದಾರ, ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿ ಫಿಲಂ, ಆಲ್ಬಂ

ಕಲ್ಯಾಣ ಕರ್ನಾಟಕದ ಧಾರವಾಡದಲ್ಲಿ ಆಗಸ್ಟ್ 22, 23ರಂದು ಚಲನಚಿತ್ರೋತ್ಸವ ಆಯೋಜಿಸಿರುವ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅದಕ್ಕಾಗಿ ಪ್ರವೇಶಗಳನ್ನು ಆಹ್ವಾನಿಸಿದೆ.2014ರಲ್ಲಿ ಆರಂಭವಾದ ಮಂಡಳಿ ಹಿಂದೆ 2022ರಲ್ಲಿ ಚಿತ್ರೋತ್ಸವವನ್ನು ಆಯೋಜಿಸಿತ್ತು.ಮಂಡಳಿಯ ಅಧ್ಯಕ್ಷ ಮಂಜುನಾಥ್ ಎಲ್ ಹಗೇದಾರ, ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿ ಫಿಲಂ, ಆಲ್ಬಂ ಸಾಂಗ್ ವಿಭಾಗದಲ್ಲಿ ಪ್ರವೇಶ ಆಹ್ವಾನಿಸಿದ್ದು, ಕಳುಹಿಸಲು ಆ.5 ಕಡೇ ದಿನವಾಗಿದೆ ಎಂದರು.ತೀರ್ಪುಗಾರರ ತಂಡವು ಬಹುಮಾನಿತ ಚಿತ್ರಗಳನ್ನು ಆಯ್ಕೆ ಮಾಡಲಿದ್ದು ನಗದು ಬಹುಮಾನ, ಪಾರಿತೋಷಕ ನೀಡಲಾಗುತ್ತದೆ. 2020–2026ರ ಅವಧಿಯಲ್ಲಿ ನಿರ್ಮಾಣವಾದ ಚಿತ್ರಗಳನ್ನು ಪರಿಗಣಿಸಲಾಗುವುದು ಎಂದರು.ಪ್ರವೇಶ ಸಲ್ಲಿಸಲು https://forms.gle/nSb1UTdHPrLviwDr5 ಲಿಂಕ್ ಬಳಸಬಹುದು. ವಿವರಗಳಿಗೆ ಮೊಬೈಲ್ 6361892782 ಸಂಪರ್ಕಿಸಬಹುದು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260803-51-1717213154