ಮತ್ತೆ ಶುರು ಮಾಡೋಣವಾ... ಪ್ರೋಮೊದಲ್ಲಿ ಅಬ್ಬರಿಸಿದ ಕಿಚ್ಚ ಸುದೀಪ್ ಹೇಳಿದ್ದಿಷ್ಟು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 13’ ಸೆಪ್ಟೆಂಬರ್ ಮೊದಲ ವಾರದಲ್ಲೇ ಆರಂಭವಾಗುತ್ತಿದೆ. ಇಷ್ಟು ದಿನ ಕಿಚ್ಚ ಸುದೀಪ್ ಅವರಿರುವ ಪ್ರೋಮೊಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ನಿನ್ನೆ (ಆ.2) ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು ಸ್ಟ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 13’ ಸೆಪ್ಟೆಂಬರ್ ಮೊದಲ ವಾರದಲ್ಲೇ ಆರಂಭವಾಗುತ್ತಿದೆ. ಇಷ್ಟು ದಿನ ಕಿಚ್ಚ ಸುದೀಪ್ ಅವರಿರುವ ಪ್ರೋಮೊಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ನಿನ್ನೆ (ಆ.2) ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು ಸ್ಟೈಲಿಶ್ ಲುಕ್ನಲ್ಲಿ ಕಂಗೊಳಿಸಿದ್ದಾರೆ. ನೂರಾರು ಜನರ ಮಧ್ಯೆ ಕಿಚ್ಚ ಸುದೀಪ್ ಅವರ ಆಗಮನವಾಗಿದೆ. ಅದರಲ್ಲಿ ಸುದೀಪ್, ‘ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆಯಲ್ಲಿಯೇ ಇಲ್ಲ. ಆದರೆ, ವರ್ಷಕ್ಕೆ ಒಂದು ಸಲ ಕಾಯುತ್ತಾರೆ ಅಂತ ಅಂದ್ರೆ…’ ಎಂದು ಹೇಳಿದ್ದಾರೆ. BBK13: ಬಿಗ್ಬಾಸ್ ಆಫರ್ ನಿರಾಕರಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್BBK13: ಎಲ್ಲೆಲ್ಲೂ ಬಿಗ್ಬಾಸ್ ಸದ್ದು.. ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಯಾರು? View this post on Instagram ಬಳಿಕ ‘ಒಂದು ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣವಾ?’ ಎಂದು ಕಿಚ್ಚ ಸುದೀಪ್ ಅವರು ಪ್ರೋಮೊದಲ್ಲಿ ಹೇಳಿದ್ದಾರೆ. ಅದ್ದೂರಿಯಾಗಿ ಮೂಡಿಬಂದ ಪ್ರೋಮೊದಲ್ಲಿ ಸುದೀಪ್ ಕಪ್ಪು ಬಣ್ಣದ ಔಟ್ಫಿಟ್, ಕೂಲಿಂಗ್ ಗ್ಲಾಸ್ ಧರಿಸಿ ಮಿಂಚಿದ್ದಾರೆ. ಇತ್ತ ವೇದಿಕೆಯ ಮುಂಭಾಗದಲ್ಲಿದ್ದ ಅಭಿಮಾನಿಗಳ ಕೈಯಲ್ಲಿ ಸುದೀಪ್ ಅವರ ಫೋಟೊಗಳು ರಾರಾಜಿಸುತ್ತಿದ್ದವು. ಈಗಾಗಲೇ ಈ ಬಾರಿಯ ಬಿಗ್ಬಾಸ್ ಸೀಸನ್ 13ಕ್ಕೆ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಎಂಬುವುದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೇ ಆ ನಟಿ ಹೋಗುತ್ತಾರೆ, ಈ ನಟ ಬಿಗ್ಬಾಸ್ ಮನೆಗೆ ಹೋಗೋದು ಖಚಿತ ಎಂಬಂತಹ ಪೋಸ್ಟರ್ಗಳು ಹರಿದಾಡುತ್ತಿವೆ. ಹಾಗೇ ಬಿಗ್ಬಾಸ್ ಮನೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು, ಕ್ರೀಡಾಪಟುಗಳನ್ನು, ಸಿನಿಮಾ ತಾರೆಯರನ್ನು ಹಾಗೂ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿದವರನ್ನು ಕರೆಸಲಾಗುತ್ತದೆ.ಈ ಬಾರಿಯ ವಿಶೇಷತೆ ಏನೆಂದರೆ ಜನ ಸಾಮಾನ್ಯರು ಬಿಗ್ಬಾಸ್ ಮನೆಗೆ ಹೋಗುವ ಅವಕಾಶ ಪಡೆದುಕೊಂಡಿದ್ದಾರೆ. ಸದ್ಯ ಅಧಿಕೃತವಾಗಿ ಬಿಗ್ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂದು ಕಾರ್ಯಕ್ರಮದ ಆರಂಭದಲ್ಲಿ ತಿಳಿಯಲಿದೆ.‘ಬಿಗ್ ಬಾಸ್’ ಸ್ಟುಡಿಯೊ ಮುಂದೆ ಜಮಾಯಿಸಿದ ಅಭಿಮಾನಿಗಳು: ಗಿಲ್ಲಿ–ಕಾವ್ಯ ಕಟೌಟ್!‘ಬಾಬಿ’ ಧಾರಾವಾಹಿ ಖ್ಯಾತಿಯ ಗೌರವ್ ಖನ್ನಾ ಬಿಗ್ ಬಾಸ್ ಹಿಂದಿ–19ರ ವಿನ್ನರ್