ಭಾರತೀಯ ನಾವಿಕನ ಪತ್ತೆಗೆ ರಾಜತಾಂತ್ರಿಕ ಮಾರ್ಗ ಅನುಸರಿಸಿ: ಎಂಇಎಗೆ SC ನಿರ್ದೇಶನ
ನವದೆಹಲಿ: ಜುಲೈ 25ರಂದು ಕಪ್ಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯ ಬಳಿಕ ನಾಪತ್ತೆಯಾಗಿರುವ ಭಾರತೀಯ ನಾವಿಕನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪತ್ತೆಹಚ್ಚುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.ಉಕ್ರೇನ್ನ ಒಡೆಸಾ ಬಂದರಿನಲ್ಲಿ ನಾಲ್ವರು ಭಾರತೀಯರಿದ್ದ ‘ಎಂವಿ ಎಜಿಎನ್ ರಾಗ್ನರ್’ ಎಂಬ

ನವದೆಹಲಿ: ಜುಲೈ 25ರಂದು ಕಪ್ಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯ ಬಳಿಕ ನಾಪತ್ತೆಯಾಗಿರುವ ಭಾರತೀಯ ನಾವಿಕನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪತ್ತೆಹಚ್ಚುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.ಉಕ್ರೇನ್ನ ಒಡೆಸಾ ಬಂದರಿನಲ್ಲಿ ನಾಲ್ವರು ಭಾರತೀಯರಿದ್ದ ‘ಎಂವಿ ಎಜಿಎನ್ ರಾಗ್ನರ್’ ಎಂಬ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿತ್ತು. ಈ ವೇಳೆ ದೀಪಕ್ ಕುಮಾರ್ ಗುಪ್ತಾ ನಾಪತ್ತೆಯಾಗಿದ್ದರು. ಉಕ್ರೇನ್ ಹಾಗೂ ರೊಮೇನಿಯಾದ ಬುಕಾರೆಸ್ಟ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಂದ ಮಾಹಿತಿ ಪಡೆದು ದೀಪಕ್ ಕುಮಾರ್ ಗುಪ್ತಾ ಅವರನ್ನು ಪತ್ತೆ ಹಚ್ಚುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ. ಅಲ್ಲದೇ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಲಾಗಿದೆ.ನಾಪತ್ತೆಯಾದ ನಾವಿಕನ ಹಿರಿಯ ಸಹೋದರ ಸಂದೀಪ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಉಕ್ರೇನ್ ಮತ್ತು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.ಕೇಂದ್ರ ಸರ್ಕಾರ ಹಾಗೂ ಎರಡೂ ದೇಶಗಳ(ಉಕ್ರೇನ್ ಮತ್ತು ರೊಮೇನಿ) ಭಾರತೀಯ ರಾಯಭಾರ ಕಚೇರಿಗಳಿಗೆ ಕುಟುಂಬಸ್ಥರು ನಿರಂತರವಾಗಿ ಮಾಡಿದ ಮನವಿಗಳಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು. ಉಕ್ರೇನ್ನಲ್ಲಿ ನಾಲ್ವರು ಭಾರತೀಯರಿದ್ದ ಹಡಗಿನ ಮೇಲೆ ದಾಳಿ: ಇಬ್ಬರು ಸುರಕ್ಷಿತ