ರಶ್ಮಿಕಾ ಮಂದಣ್ಣ ನಟನೆಯ ಕಾಕ್ಟೇಲ್ 2 ಒಟಿಟಿಗೆ; ಯಾವಾಗ ಬಿಡುಗಡೆ?
ಬಿಡುಗಡೆಗೂ ಮುನ್ನ ಸುದ್ದಿಯಲ್ಲಿದ್ದ ಕಾಕ್ಟೇಲ್ 2 ಸಿನಿಮಾ ಜೂನ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದೀಗ ಒಟಿಟಿ ವೇದಿಕೆಗೆ ಕಾಲಿಡುತ್ತಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಇಲ್ಲಿ ನೋಡಬಹುದಾಗಿದೆ. ನಟ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ನಟಿಸಿರುವ ಕಾ
ಬಿಡುಗಡೆಗೂ ಮುನ್ನ ಸುದ್ದಿಯಲ್ಲಿದ್ದ ಕಾಕ್ಟೇಲ್ 2 ಸಿನಿಮಾ ಜೂನ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದೀಗ ಒಟಿಟಿ ವೇದಿಕೆಗೆ ಕಾಲಿಡುತ್ತಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಇಲ್ಲಿ ನೋಡಬಹುದಾಗಿದೆ. ನಟ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ನಟಿಸಿರುವ ಕಾಕ್ಟೇಲ್ 2 ಚಿತ್ರವನ್ನು ಹೋಮಿ ಅದಜಾನಿಯಾ ಅವರು ನಿರ್ದೇಶಿಸಿದ್ದಾರೆ. ಇದು ಹಾಸ್ಯ ಭರಿತ ಪ್ರಣಯ ಸಿನಿಮಾವಾಗಿದ್ದು, ಇದೇ ಆಗಸ್ಟ್ 14ರಂದು ನೆಟ್ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ.OTT RELEASE: ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು...OTT, ಮಲ್ಟಿಪ್ಲೆಕ್ಸ್,ದುಬಾರಿ ಸಂಭಾವನೆ ಚಿತ್ರರಂಗದ ಅವನತಿಗೆ ದಾರಿ: ಕೆ.ಎಂ.ಚೈತನ್ಯಸಿನಿ ಸಮ್ಮಾನ 2026: OTT ಯುಗದಲ್ಲಿ ಕನ್ನಡ ಸಿನಿಮಾ: ಚಿತ್ರಮಂದಿರಗಳ ಭವಿಷ್ಯ ಏನು?OTT: ಧನ್ವೀರ್ ನಟನೆಯ ಕ್ರೈಮ್–ಥ್ರಿಲ್ಲರ್ ‘ಹಯಗ್ರೀವ’ ಒಟಿಟಿಗೆ2026ರಿಂದ ಈವರೆಗೆ, ಬಾಲಿವುಡ್ನಲ್ಲಿ ಬಿಡುಗಡೆಗೊಂಡು ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಕಾಕ್ಟೇಲ್ 2 6ನೇ ಸ್ಥಾನದಲ್ಲಿದೆ. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಕಾಕ್ಟೇಲ್ 2, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ ಡಿಜಿಟಲ್ ವೇದಿಕೆಯಲ್ಲಿಯೂ ಜನಪ್ರಿಯವಾಗುವ ನಿರೀಕ್ಷೆ ಇದೆ ಎಂದು ಚಿತ್ರತಂಡ ಹೇಳಿದೆ.ಸಿನಿಮಾದ ಚಿತ್ರಕಥೆ ಹೀಗಿದೆ...ಕುನಾಲ್ ಮತ್ತು ದಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿರುತ್ತಾರೆ. ಅವರು ಮದುವೆಯಾಗಲು ನಿರ್ಧರಿಸುತ್ತಾರೆ. ಇದೇ ವೇಳೆ ಇವರ ವೈವಾಹಿಕ ಜೀವನಕ್ಕೆ ಹಳೆಯ ಸ್ನೇಹಿತೆ ಆಲಿ ಪ್ರವೇಶಿಸುತ್ತಾಳೆ. ಆಲಿಯ ಆಗಮನ ಇಬ್ಬರ ನಡುವೆ ಹೊಸ ಬದಲಾವಣೆ ತರುತ್ತದೆ. ಆಗ ಕುನಾಲ್ ಆಲಿಯತ್ತ ಆಕರ್ಷಿತನಾಗಲು ಪ್ರಾರಂಭಿಸುತ್ತಾನೆ. ಇದು ಮೂವರ ನಡುವೆ ಗೊಂದಲ ಮತ್ತು ಭಾವನಾತ್ಮಕ ಸಂಘರ್ಷವನ್ನು ಸೃಷ್ಟಿಸುತ್ತದೆ.