ಬೆಳಗಾವಿ ಜೋಡಿ ಜಲಾಶಯಗಳಿಗೂ ಕಳೆ; ಕೃಷ್ಣಾ ಕೊಳ್ಳದಲ್ಲಿ ಎಷ್ಟಿದೆ ನೀರಿನ ಪ್ರಮಾಣ?
ಬೆಂಗಳೂರು: ಮಹಾರಾಷ್ಟ್ರದ ಜತೆಗೆ ಬೆಳಗಾವಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೂ ಜೀವ ಕಳೆ ಬಂದಿದೆ.ಕೃಷ್ಣಾ ಕಣಿವೆಯ ಪ್ರಮುಖ ಆರು ಜಲಾಶಯಗಳಲ್ಲಿ ಸದ್ಯ 287.40 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ 68ರಷ್ಟು ನೀರು ಲಭ್ಯವಿದೆ. ಈ ಆರು ಜಲಾಶಯಗಳಲ್ಲಿ 422.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಕಳೆದ ವರ್ಷ ದಿನ 363. 45

ಬೆಂಗಳೂರು: ಮಹಾರಾಷ್ಟ್ರದ ಜತೆಗೆ ಬೆಳಗಾವಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೂ ಜೀವ ಕಳೆ ಬಂದಿದೆ.ಕೃಷ್ಣಾ ಕಣಿವೆಯ ಪ್ರಮುಖ ಆರು ಜಲಾಶಯಗಳಲ್ಲಿ ಸದ್ಯ 287.40 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ 68ರಷ್ಟು ನೀರು ಲಭ್ಯವಿದೆ. ಈ ಆರು ಜಲಾಶಯಗಳಲ್ಲಿ 422.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಕಳೆದ ವರ್ಷ ದಿನ 363. 45 ಟಿಎಂಸಿ ನೀರು ಸಂಗ್ರಹವಿತ್ತು.ಬೆಳಗಾವಿ ಜಿಲ್ಲೆ ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಗಳಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ ನೀರು ಸಂಗ್ರಹವಿದ್ದರೂ, ಒಂದು ತಿಂಗಳಲ್ಲಿಯೇ ಹೆಚ್ಚಿನ ನೀರು ಹರಿದು ಬಂದಿದೆ.ಘಟಪ್ರಭಾ ಜಲಾಶಯದಲ್ಲಿ ಈಗ 38.42 ಟಿಎಂಸಿ ನೀರು ಸಂಗ್ರಹವಿದ್ದು, ಶೇ75ರಷ್ಟು ಭರ್ತಿಯಾಗಿದೆ. ಇಲ್ಲಿ 51ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯವಿದೆ. ಕಳೆದ ವರ್ಷ ಇಲ್ಲಿ 47.96 ಟಿಎಂಸಿ ನೀರಿತ್ತು. ಸದ್ಯ ಜಲಾಶಯಕ್ಕೆ 20782 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1765 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.ಮಲಪ್ರಭಾ ಜಲಾಶಯದಲ್ಲಿ ಸದ್ಯ 17.08 ಟಿಎಂಸಿ ನೀರು ಸಂಗ್ರಹವಿದ್ದು, ಶೇ 45ರಷ್ಟು ಭರ್ತಿಯಾಗಿದೆ. ಇಲ್ಲಿ 37.73 ಟಿಎಂಸಿ ನೀರು ಸಂಗ್ರಹಿಸಬಹುದು. ಕಳೆದ ವರ್ಷ ಜಲಾಶಯದಲ್ಲಿ 21.89 ಟಿಎಂಸಿ ನೀರಿತ್ತು. ಸದ್ಯ ಜಲಾಶಯಕ್ಕೆ 11,703 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1194 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.ಈಗಾಗಲೇ ಭರ್ತಿಯಾಗಿರುವ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಒಳಹರಿವು 1 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿದೆ.ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಈಗ 1,25,855 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 1,28,783 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 111.97 ಟಿಎಂಸಿ ನೀರು ಸಂಗ್ರಹವಿದ್ದು, ಶೇ 91ರಷ್ಟು ಭರ್ತಿಯಾಗಿದೆ. ಜಲಾಶಯದಲ್ಲಿ ಗರಿಷ್ಠ123.08 ಟಿಎಂಸಿ ನೀರು ಸಂಗ್ರಹಿಸಬಹುದು.ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಈಗಲೂ 1,28,954 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಲ್ಲಿಂದ 1,29,935 ಕ್ಯೂಸೆಕ್ ನೀರು ಹೊರಹರಿಸಲಾಗುತ್ತಿದೆ. ಜಲಾಶಯದಲ್ಲಿ ಈಗ 29.89 ಟಿಎಂಸಿ ನೀರಿದ್ದು, ಶೇ 89ರಷ್ಟು ಜಲಾಶಯ ಭರ್ತಿಯಾಗಿದೆ. ಜಲಾಶಯದಲ್ಲಿ 33.31 ಟಿಎಂಸಿ ನೀರು ಸಂಗ್ರಹಿಸಬಹುದು. ಕಳೆದ ವರ್ಷ ಇದೇ ದಿನ 32.05 ಟಿಎಂಸಿ ನೀರು ಸಂಗ್ರಹವಿತ್ತು.ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟವೂ ಗಣನೀಯವಾಗಿ ಏರಿಕೆಯಾಗಿದೆ. ಜಲಾಶಯಕ್ಕೆ ಈಗಲೂ 40705 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 1390 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 44.81 ಟಿಎಂಸಿ ನೀರು ಅಂದರೆ ಶೇ42ರಷ್ಟು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 80 ಟಿಎಂಸಿ ನೀರಿತ್ತು. ಇಲ್ಲಿ 105. 79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಮಲೆನಾಡಿನ ಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿ ನೀರಿನ ಮಟ್ಟ ಏರಿಕೆ ಕಂಡಿದೆ. ಜಲಾಶಯಕ್ಕೆ ಸದ್ಯ 36,102 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 189 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 46.25 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 65 ಟಿಎಂಸಿ ನೀರಿತ್ತು. ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸಬಹುದು.,ಭದ್ರಾಕ್ಕೂ ಜಲ ಬಲಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಮುಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧಾರKarnataka Dams: ನಾರಾಯಣಪುರ ಜಲಾಶಯ ಭರ್ತಿ; ಆಲಮಟ್ಟಿ, ಹಾರಂಗಿಯಲ್ಲಿ ಅಧಿಕ ನೀರುನಾರಾಯಣಪುರ ನಾಲೆಗೆ ನೀರು: ಭರದಿಂದ ಸಾಗಿದ ಭತ್ತ ನಾಟಿ