ಲಿಂಗನಮಕ್ಕಿ ಜಲಾಶಯಕ್ಕೆ ತಿಂಗಳಲ್ಲಿ 47 ಟಿಎಂಸಿ ನೀರು, ಒಳಹರಿವಿನಲ್ಲಿ ಏರಿಕೆ
ಬೆಂಗಳೂರು: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ.ಒಂದು ತಿಂಗಳ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ 47 ಟಿಎಂಸಿ ನೀರು ಹರಿದು ಬಂದಿದೆ. ಆದರೂ ಜಲಾಶಯ ಇನ್ನೂ ಭರ್ತಿಯಾಗಲು ಹೆಚ್ಚಿನ ನೀರು ಬೇಕಿದೆ. ಸದ್ಯ ಶೇ 41ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ.

ಬೆಂಗಳೂರು: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ.ಒಂದು ತಿಂಗಳ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ 47 ಟಿಎಂಸಿ ನೀರು ಹರಿದು ಬಂದಿದೆ. ಆದರೂ ಜಲಾಶಯ ಇನ್ನೂ ಭರ್ತಿಯಾಗಲು ಹೆಚ್ಚಿನ ನೀರು ಬೇಕಿದೆ. ಸದ್ಯ ಶೇ 41ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ.ರಾಜ್ಯದಲ್ಲಿಯೇ ಅತಿ ದೊಡ್ಡ ಜಲಾಶಯಗಳಲ್ಲಿ ಲಿಂಗನಮಕ್ಕಿಗೆ ಮೊದಲ ಸ್ಥಾನ. ಈ ಜಲಾಶಯದಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಈಗ ಜಲಾಶಯದಲ್ಲಿ 62.88 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 127.67 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದರಿಂದ ನದಿ ಮೂಲಕ ಹೊರ ಬಿಡಲಾಗಿತ್ತು.ಲಿಂಗನಮಕ್ಕಿ ಜಲಾಶಯದಲ್ಲಿ 1819.12 ಅಡಿ ನೀರು ಸಂಗ್ರಹಿಸಬಹುದು. ಸದ್ಯ 1784.70 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 1811.50 ಅಡಿ ನೀರು ಸಂಗ್ರಹವಿತ್ತು.ಸದ್ಯ ಜಲಾಶಯಕ್ಕೆ 59,203 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 761 ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗುತ್ತಿದೆ.ಜುಲೈ 2ರಂದು ಜಲಾಶಯದಲ್ಲಿ 15.83 ಟಿಎಂಸಿ ನೀರು ಸಂಗ್ರಹವಿತ್ತು. ಶೇ 10ರಷ್ಟು ಮಾತ್ರ ಭರ್ತಿಯಾಗಿತ್ತು. ಈಗ ಶೇ 41ಕ್ಕೆ ನೀರಿನ ಪ್ರಮಾಣ ಏರಿಕೆಯಾಗಿದೆ.