ಡೀಲ್ or ಸಂಪೂರ್ಣ ಶರಣಾಗತಿ: ಇರಾನ್ ಮುಂದಿರೋದು ಎರಡೇ ಆಯ್ಕೆ ಎಂದ ಟ್ರಂಪ್
ವಾಷಿಂಗ್ಟನ್: ಒಪ್ಪಂದ ಅಥವಾ ಸಂಪೂರ್ಣ ಶರಣಾಗತಿ. ಇರಾನ್ ಮುಂದಿರೋದು ಎರಡೇ ಆಯ್ಕೆಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಮಾತುಗಳನ್ನಾಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ನಲ್ಲಿ ಟ್ರಂಪ್ ಅವರು ದೀರ್ಘವಾದ ವಾಗ್ದಾಳಿ ನಡೆಸಿದ್ದಾರೆ. ಇರಾನ್ ದ್ವಂದ್ವ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ಇರಾನ್ ಒಪ್ಪಿಕೊಳ್ಳ

ವಾಷಿಂಗ್ಟನ್: ಒಪ್ಪಂದ ಅಥವಾ ಸಂಪೂರ್ಣ ಶರಣಾಗತಿ. ಇರಾನ್ ಮುಂದಿರೋದು ಎರಡೇ ಆಯ್ಕೆಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಮಾತುಗಳನ್ನಾಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ನಲ್ಲಿ ಟ್ರಂಪ್ ಅವರು ದೀರ್ಘವಾದ ವಾಗ್ದಾಳಿ ನಡೆಸಿದ್ದಾರೆ. ಇರಾನ್ ದ್ವಂದ್ವ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ಇರಾನ್ ಒಪ್ಪಿಕೊಳ್ಳಲು ಬಯಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ದಶಕಗಳಿಂದ ಅವರು ಉಂಟುಮಾಡುತ್ತಿರುವ ಸಮಸ್ಯೆಗೆ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಪ್ರಮುಖ ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ನಿಯಂತ್ರಣದ ಬಗ್ಗೆ ಇರಾನಿನ ಹೇಳಿಕೆಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ಹಾರ್ಮುಜ್ ಅನ್ನು ಯುಎಸ್ ನೌಕಾಪಡೆ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದು ಹೇಳಿದ್ದಾರೆ.
Read the complete story at Public TV Kannada