ತಂದೆ ಮೊಬೈಲ್ ಕೊಡಿಸದಿದ್ದಕ್ಕೆ 13 ವರ್ಷದ ಮಗ ಆತ್ಮಹತ್ಯೆ
ಹಾಸನ: ತಂದೆ ಮೊಬೈಲ್ (Mobile) ಕೊಡಿಸಲಿಲ್ಲ ಅಂತ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಹೊರವಲಯದ ಯಡಿಯೂರು (Yediyur) ಗ್ರಾಮದಲ್ಲಿ ನಡೆದಿದೆ. ಪ್ರೀತಂ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಪ್ರೀತಂ ಚಿತ್ರದುರ್ಗದ ಶ್ರೀನಿವಾಸ್-ಗೌರಮ್ಮ ದಂಪತಿ ಪುತ್ರನಾಗಿದ್ದು, ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮ

ಹಾಸನ: ತಂದೆ ಮೊಬೈಲ್ (Mobile) ಕೊಡಿಸಲಿಲ್ಲ ಅಂತ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಹೊರವಲಯದ ಯಡಿಯೂರು (Yediyur) ಗ್ರಾಮದಲ್ಲಿ ನಡೆದಿದೆ. ಪ್ರೀತಂ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಪ್ರೀತಂ ಚಿತ್ರದುರ್ಗದ ಶ್ರೀನಿವಾಸ್-ಗೌರಮ್ಮ ದಂಪತಿ ಪುತ್ರನಾಗಿದ್ದು, ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್ನಲ್ಲಿ ಕೆಲಸ ಮಾಡಲು ಬಂದಿದ್ದರು. ಇದನ್ನೂ ಓದಿ: ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ತನ್ವೀರ್ ಸೇಠ್ ಅಸಮಾಧಾನ ಪ್ರೀತಂ ಚಿತ್ರದುರ್ಗದಲ್ಲಿ ಏಳನೇ ತರಗತಿ ಓದುತ್ತಿದ್ದು, ಶನಿವಾರ ಯಡಿಯೂರಿಗೆ ಬಂದಿದ್ದ. ದಂಪತಿ ಲೇಔಟ್ನಲ್ಲೇ ಶೆಡ್ನೊಳಗೆ ವಾಸವಿದ್ದರು. ಪ್ರೀತಂ ಮೊಬೈಲ್ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಆದರೆ ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆ ಇದರಿಂದ ಮನನೊಂದು ಶೆಡ್ನೊಳಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾತ್ರೋರಾತ್ರಿ ಲೇಡಿಸ್ ಪಿಜಿಗೆ ನುಗ್ಗಿದ ಕಳ್ಳ; ಲ್ಯಾಪ್ಟಾಪ್, ಸ್ಮಾರ್ಟ್ವಾಚ್ ಕದ್ದು ಪರಾರಿ