ಅದೃಷ್ಟವಲ್ಲ, ನಿರ್ಧಾರಗಳು ಕೈಯಲ್ಲಿವೆ: ಹೊಸ ಮನೆ ನಿರ್ಮಾಣ ಸಂಭ್ರಮದಲ್ಲಿ ನಟಿ ತಾರಾ
ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧಾ ಅವರು ಹೊಸ ಮನೆ ನಿರ್ಮಾಣದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ನಟಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಟಿ ತಾರಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹೊಸ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. View this post on Instagram A post shared by Tharaanooradha (@dr.tharan

ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧಾ ಅವರು ಹೊಸ ಮನೆ ನಿರ್ಮಾಣದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ನಟಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನಟಿ ತಾರಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹೊಸ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. View this post on Instagram A post shared by Tharaanooradha (@dr.tharanooradha_official) ತಮ್ಮ ಕನಸಿನ ಮನೆ ನಿರ್ಮಾಣದ ಸಂಭ್ರಮದಲ್ಲಿರುವ ನಟಿ ತಾರಾ, ಅದೃಷ್ಟದ ಕುರಿತು ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಅದರೊಂದಿಗೆ ‘ಅದೃಷ್ಟವು ನಮ್ಮ ಕೈಯಲ್ಲಿಲ್ಲ. ಆದರೆ ನಿರ್ಧಾರಗಳು ನಮ್ಮ ಕೈಯಲ್ಲಿವೆ. ನಮ್ಮ ಸರಿಯಾದ ನಿರ್ಧಾರಗಳು ನಮ್ಮ ಅದೃಷ್ಟವನ್ನು ನಿರ್ಮಿಸಬಹುದು. ಆದರೆ ಅದೃಷ್ಟವು ಎಂದಿಗೂ ನಮ್ಮೆಲ್ಲರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಮಹಿಳಾ ವಿವಿಯಿಂದ ಗೌರವ ಡಾಕ್ಟರೇಟ್ಬಲಿಜ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ನಟಿ ತಾರಾ ಅನುರಾಧತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿರುವ ತಾರಾ ಅವರ ಹೊಸ ಮನೆ ನಿರ್ಮಾಣಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.