ನೀಟ್ ಯುಜಿ ಕೌನ್ಸೆಲಿಂಗ್ ನಾಳೆಯಿಂದ ಆರಂಭ: ಸೆ. 8ರಿಂದ ಶೈಕ್ಷಣಿಕ ಅವಧಿ ಪ್ರಾರಂಭ
ನವದೆಹಲಿ: ಅಖಿಲ ಭಾರತ ಕೋಟಾದ ಅಡಿಯಲ್ಲಿ ಎಂಬಿಬಿಎಸ್ ಮತ್ತು ಇತರೆ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆಗಸ್ಟ್ 4ರಂದು ಪ್ರಾರಂಭವಾಗಲಿದ್ದು, 2026–27ನೇ ಶೈಕ್ಷಣಿಕ ಅವಧಿ ಸೆಪ್ಟೆಂಬರ್ 8ರಂದು ಪ್ರಾರಂಭವಾಗಲಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ತಿಳಿಸಿದೆ.ಸಮಿತಿ ಬಿಡುಗಡೆ ಮಾಡಿದ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕ

ನವದೆಹಲಿ: ಅಖಿಲ ಭಾರತ ಕೋಟಾದ ಅಡಿಯಲ್ಲಿ ಎಂಬಿಬಿಎಸ್ ಮತ್ತು ಇತರೆ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆಗಸ್ಟ್ 4ರಂದು ಪ್ರಾರಂಭವಾಗಲಿದ್ದು, 2026–27ನೇ ಶೈಕ್ಷಣಿಕ ಅವಧಿ ಸೆಪ್ಟೆಂಬರ್ 8ರಂದು ಪ್ರಾರಂಭವಾಗಲಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ತಿಳಿಸಿದೆ.ಸಮಿತಿ ಬಿಡುಗಡೆ ಮಾಡಿದ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಾರ, ಡೀಮ್ಡ್ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಮೊದಲ ಸುತ್ತಿನ ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್ ಆಗಸ್ಟ್ 4ರಿಂದ ಆ.17ರವರೆಗೆ ನಡೆಯಲಿದೆ. ಕೋರ್ಸ್ಗೆ ಸೇರಲು ಆಗಸ್ಟ್ 22 ಕೊನೆಯ ದಿನ ಆಗಿರುತ್ತದೆ. ಎರಡನೆಯ ಸುತ್ತಿನ ಕೌನ್ಸೆಲಿಂಗ್ ಆ.24ರಿಂದ ಸೆಪ್ಟೆಂಬರ್ 2ರವರೆಗೆ ಹಾಗೂ ಮೂರನೆಯ ಸುತ್ತಿನ ಕೌನ್ಸೆಲಿಂಗ್ ಸೆ.10ರಿಂದ 18ರವರೆಗೆ ನಡೆಯಲಿದೆ. ಖಾಲಿ ಉಳಿದ ಸೀಟುಗಳ ಭರ್ತಿಯ ಸುತ್ತಿಗೆ ಸೆ.28ರಿಂದ ಅಕ್ಟೋಬರ್ 3ರವರೆಗೆ ಕೌನ್ಸೆಲಿಂಗ್ ನಿಗದಿಪಡಿಸಲಾಗಿದೆ. ಖಾಲಿ ಸೀಟುಗಳ ಭರ್ತಿ ಸುತ್ತಿನ ನಂತರ ಸೇರಲು ಕೊನೆಯ ದಿನಾಂಕ ಅಕ್ಟೋಬರ್ 10 ಆಗಿದೆ.ರಾಜ್ಯ ಕೋಟಾದ ಸೀಟುಗಳಿಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಆ.13ರಿಂದ ಆ.22ರವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ಆ.28ರೊಳಗೆ ಸೇರಿಕೊಳ್ಳಬೇಕು. ಎರಡನೇ ಸುತ್ತಿನ ಕೌನ್ಸೆಲಿಂಗ್ ಆ.31ರಿಂದ ಸೆಪ್ಟೆಂಬರ್ 8ರವರೆಗೆ ಹಾಗೂ ಮೂರನೆಯ ಸುತ್ತಿನ ಕೌನ್ಸೆಲಿಂಗ್ ಸೆ.16ರಿಂದ ಸೆ.26ರವರೆಗೆ ನಡೆಯಲಿದೆ. ಖಾಲಿ ಸೀಟುಗಳ ಭರ್ತಿಗೆ ಅಕ್ಟೋಬರ್ 3ರಿಂದ ಅ.5ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.ಎಂಸಿಸಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ವೈದ್ಯಕೀಯ ಪದವಿ ಕೋರ್ಸ್ಗಳ ಶೈಕ್ಷಣಿಕ ಅವಧಿ ಸೆಪ್ಟೆಂಬರ್ 8ರಂದು ಪ್ರಾರಂಭವಾಗಲಿದ್ದು, ನಂತರವೂ ಖಾಲಿ ಸೀಟುಗಳ ಭರ್ತಿಗೆ ಕೌನ್ಸೆಲಿಂಗ್ ಮುಂದುವರಿಯಲಿದೆ. ‘ವಿದ್ಯಾರ್ಥಿ ಸ್ನೇಹಿ ಕ್ರಮ’ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಎಂಸಿಸಿ ನೀಟ್–ಯುಜಿ 2026 ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ಪರಿಚಯಿಸಿದೆ. ಸೀಟು ಅಪ್ಗ್ರೇಡ್ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡುವುದೂ ಸೇರಿದಂತೆ ಹೆಚ್ಚು ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅಭ್ಯರ್ಥಿಗಳು ಎಂಸಿಸಿ ಕೌನ್ಸೆಲಿಂಗ್ ಪೋರ್ಟಲ್ ಮೂಲಕ ತಮಗೆ ಹಂಚಿಕೆಯಾದ ಸೀಟಿಗೆ ರಾಜೀನಾಮೆ ಸಲ್ಲಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.