ಬಿಜೆಪಿ ಭದ್ರಕೋಟೆ ಛಿದ್ರ – ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ಗೆ ಗೆಲುವು
ಪಾಟ್ನಾ: ಬಂಕಿಪುರ ಉಪಚುನಾವಣೆ (Bankipur By-Election) ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ (BJP) ಭದ್ರಕೋಟೆಯಲ್ಲಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಐತಿಹಾಸಿಕ ಗೆಲುವು ದಾಖಲಿಸಿದೆ. ಜನ್ ಸುರಾಜ್ಗೆ (Jan Suraaj) ಇದು ಮೊದಲ ಗೆಲುವು. ಬಿಜೆಪಿ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರನ್ನು ಸೋಲಿಸಿ 19,000 ಕ್ಕೂ ಹೆಚ್ಚು ಮತಗ

ಪಾಟ್ನಾ: ಬಂಕಿಪುರ ಉಪಚುನಾವಣೆ (Bankipur By-Election) ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ (BJP) ಭದ್ರಕೋಟೆಯಲ್ಲಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಐತಿಹಾಸಿಕ ಗೆಲುವು ದಾಖಲಿಸಿದೆ. ಜನ್ ಸುರಾಜ್ಗೆ (Jan Suraaj) ಇದು ಮೊದಲ ಗೆಲುವು. ಬಿಜೆಪಿ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರನ್ನು ಸೋಲಿಸಿ 19,000 ಕ್ಕೂ ಹೆಚ್ಚು ಮತಗಳಿಂದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಜಯಗಳಿಸಿದ್ದಾರೆ. ಇದನ್ನೂ ಓದಿ: ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್ ಮುನ್ನಡೆ ಚುನಾವಣಾ ತಂತ್ರಜ್ಞ-ರಾಜಕಾರಣಿಯಾಗಿ ಅವರ ಗೆಲುವು, 1995 ರಿಂದ ಬಂಕಿಪುರ ಕ್ಷೇತ್ರದ ಮೇಲಿನ ಬಿಜೆಪಿಯ ಮೂರು ದಶಕಗಳ ಹಿಡಿತವನ್ನು ಕೊನೆಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಲವಾರು ಅವಧಿಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ನನ್ನ ಕಚೇರಿ ಬಾಗಿಲುಗಳು ಬಂಕಿಪುರದ ಜನರಿಗೆ ಮಾತ್ರವಲ್ಲ, ಇಡೀ ಬಿಹಾರಕ್ಕೂ ತೆರೆದಿವೆ. ನಾನು ಇಲ್ಲಿ ಅಸಾಧಾರಣವಾದದ್ದೇನೂ ಮಾಡಿಲ್ಲ. ಆದರೆ, ಕೇವಲ 30 ದಿನಗಳಲ್ಲಿ 30 ವರ್ಷಗಳ ಬಿಜೆಪಿಯ ಭದ್ರಕೋಟೆಯನ್ನು ಕೆಡವಿದ್ದೇನೆ ಎಂದು ಗೆಲುವಿನ ಬಳಿಕ ಪ್ರಶಾಂತ್ ಕಿಶೋರ್ ಮಾತನಾಡಿದರು. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆ ಬಂಕಿಪುರದ ಮತದಾರರಿಗೆ ಧನ್ಯವಾದ ಅರ್ಪಿಸಿದ ಅವರು, ಬಿಹಾರದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಕಿಶೋರ್ ಅವರ ಚುನಾವಣಾ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.