ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ತೀನಿ: ಮಂಕಾಳು ವೈದ್ಯ
– ಮೊದಲು ಲಿಸ್ಟ್ನಲ್ಲಿ ಹೆಸರು ಹಾಕಿ 2ನೇ ಲಿಸ್ಟ್ನಲ್ಲಿ ಕೈಬಿಟ್ಟಿದ್ದಾರೆ ಬೆಂಗಳೂರು: ಸಮಯ ಬಂದಾಗ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಮಂಕಾಳು ವೈದ್ಯ (Mankal Vaidya) ಹೇಳಿದ್ದಾರೆ. ಡಿಕೆ ಸಂಪುಟದಲ್ಲಿ (DK Shivakumar Cabinet) ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪಬ್ಲಿಕ್ ಟಿವಿಗೆ ಧನ್ಯವಾದ ಹ

– ಮೊದಲು ಲಿಸ್ಟ್ನಲ್ಲಿ ಹೆಸರು ಹಾಕಿ 2ನೇ ಲಿಸ್ಟ್ನಲ್ಲಿ ಕೈಬಿಟ್ಟಿದ್ದಾರೆ ಬೆಂಗಳೂರು: ಸಮಯ ಬಂದಾಗ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಮಂಕಾಳು ವೈದ್ಯ (Mankal Vaidya) ಹೇಳಿದ್ದಾರೆ. ಡಿಕೆ ಸಂಪುಟದಲ್ಲಿ (DK Shivakumar Cabinet) ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪಬ್ಲಿಕ್ ಟಿವಿಗೆ ಧನ್ಯವಾದ ಹೇಳುತ್ತೇನೆ. ಮೊದಲಿಂದ ಇಲ್ಲಿಯವರೆಗೂ ನನ್ನ ಜೊತೆ ನಿಂತಿದ್ದೀರಿ. ನಾನು ನನ್ನ ನಿರ್ಧಾರ ಏನು ಅಂತ ಹೇಳುತ್ತೇನೆ. ಸಮಯ ಬಂದಾಗ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾರ್ಯಕರ್ತರು, ಪಧಾದಿಕಾರಿಗಳು ಎಲ್ಲ ಬಂದಿದ್ದರು. ಬಹುತೇಕ ಮಂದಿ ಎಲ್ಲರೂ ಸ್ಟೇಟಸ್ ಹಾಕಿಕೊಂಡಿದ್ದರು. ಮೊದಲು ಲಿಸ್ಟ್ನಲ್ಲಿ ಹೆಸರು ಹಾಕಿ ಆ ಬಳಿಕ ಎರಡನೇ ಲಿಸ್ಟ್ನಲ್ಲಿ ಕೈಬಿಟ್ಟಿದ್ದಾರೆ. ಹೀಗಾಗಿ ಕ್ಷೇತ್ರದ ಜನ ಅಸಮಾಧಾನಗೊಂಡಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದ ಹಲವೆಡೆ ಅಬ್ಬರದ ಮಳೆ – ಭರ್ತಿ ಹಂತದಲ್ಲಿ ಜಲಾಶಯಗಳು, ಹಲವು ಸೇತುವೆಗಳು ಮುಳುಗಡೆ ಇದರ ಹಿಂದೆ ಯಾರಿದ್ದಾರೋ ಅವರ ಮೇಲೆ ಸಮಯ ಬಂದಾಗ ಪ್ರತೀಕಾರ ತೀರಿಸಿಕೊಳ್ಳಬೇಕು. ಅದನ್ನೇ ಕಾರ್ಯಕರ್ತರಿಗೆ ಹೇಳಿದ್ದೀನಿ. ನಾನಿನ್ನು ಯಾವುದನ್ನೂ ಅಪೇಕ್ಷೆ ಪಡೋದಿಲ್ಲ. ಸಮಯ ಬಂದಾಗ ನನ್ನ ನಿರ್ಧಾರ ಖಂಡಿತವಾಗಿ ಹೇಳುತ್ತೇನೆ ಎಂದು ತಿಳಿಸಿದರು. ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಸಿಕ್ಕವರು ಖುಷಿಯಲ್ಲಿದ್ದಾರೆ. ಸಿಗದವವರು ಸಹಜವಾಗಿ ಬೇಜಾರಾಗಿದ್ದಾರೆ. ಹೈಕಮಾಂಡ್ ಸರಿಪಡಿಸುತ್ತೆ ಎಂದು ಹೇಳಿದರು. ಇದನ್ನೂ ಓದಿ: ನೂತನ ಸಚಿವರಾಗಿ ರುದ್ರಪ್ಪ ಲಮಾಣಿ ಪ್ರಮಾಣ ವಚನ – ಬೊಮ್ಮಾಯಿ ಅಭಿನಂದನೆ ಇನ್ನು ಮಂಕಾಳು ವೈದ್ಯರ ಮುಂದೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು, ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ಗೆ ಪಾಠ ಕಲಿಸುವ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಯ ಬಂದಾಗ ತೀರ್ಮಾನ ಮಾಡೋಣ ಅಂತಾ ಮಂಕಾಳು ವೈದ್ಯ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ: ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು