ಹೊಳೆಹೊನ್ನೂರಿನಲ್ಲಿ ಕೌಟುಂಬಿಕ ಕಲಹ: ಮಗನಿಂದಲೇ ತಂದೆಯ ಕೊಲೆ
ಹೊಳೆಹೊನ್ನೂರು: ಕೌಟುಂಬಿಕ ಕಲಹದಿಂದ ಮಗನೇ ಅಪ್ಪನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲ್ಲೂಕಿನ ಅರಶಿನಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಶಿವಾಗನಾಯ್ಕ (55) ಕೊಲೆಯಾದವರು. ಆರೋಪಿ ಮಂಜುನಾಥ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ಹಿನ್ನೆಲೆ: ಎರಡು ವರ್ಷಗಳ ಹಿಂದೆ ಹೊಸ ಮನೆ ಕಟ್ಟಿಸಿದ್ದ ಶಿವಾಗನಾಯ್ಕ ತನ್ನ ಇಬ್ಬರು ಪುತ್ರರು, ಸ

ಹೊಳೆಹೊನ್ನೂರು: ಕೌಟುಂಬಿಕ ಕಲಹದಿಂದ ಮಗನೇ ಅಪ್ಪನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲ್ಲೂಕಿನ ಅರಶಿನಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಶಿವಾಗನಾಯ್ಕ (55) ಕೊಲೆಯಾದವರು. ಆರೋಪಿ ಮಂಜುನಾಥ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ಹಿನ್ನೆಲೆ: ಎರಡು ವರ್ಷಗಳ ಹಿಂದೆ ಹೊಸ ಮನೆ ಕಟ್ಟಿಸಿದ್ದ ಶಿವಾಗನಾಯ್ಕ ತನ್ನ ಇಬ್ಬರು ಪುತ್ರರು, ಸೊಸೆಯಂದಿರು ಮತ್ತು ಪತ್ನಿಯೊಂದಿಗೆ ಅಲ್ಲಿ ವಾಸವಾಗಿದ್ದರು. ಮನೆ ಕಟ್ಟಲು ಮತ್ತು ಇಬ್ಬರು ಮಕ್ಕಳ ಮದುವೆ ಮಾಡಲು ತುಂಬಾ ಸಾಲ ಮಾಡಿಕೊಂದಿದ್ದರು. ಇದರ ವಿಚಾರವಾಗಿ ಎಲ್ಲರೊಂದಿಗೂ ಪದೇಪದೇ ಜಗಳವಾಗುತ್ತಿತ್ತು. ನಂತರ ಇಬ್ಬರೂ ಮಕ್ಕಳನ್ನು ಹಳೆಯ ಮನೆಯಲ್ಲಿ ಇರುವಂತೆ ಹೇಳಿದ ಶಿವಾಗ ನಾಯ್ಕ ಎಲ್ಲರನ್ನೂ ಮನೆಯಿಂದ ಹೊರಹಾಕಿ ಹೊಸ ಮನೆಯಲ್ಲಿ ಒಬ್ಬರೇ ಇದ್ದರು.‘ಭಾನುವಾರ ರಾತ್ರಿ ಕುಡಿದು ಬಂದಿದ್ದ ಶಿವಾಗನಾಯ್ಕ ಹಳೆಯ ಮನೆಯಲ್ಲಿದ್ದ ಹೆಂಡತಿಯೊಂದಿಗೆ ಜಗಳವಾಡುತ್ತ ಹೊಡೆಯುು ಮುಂದಾದರು. ಮಧ್ಯ ಪ್ರವೇಶಿಸಿದ ಹಿರಿಯ ಮಗ ಮಂಜುನಾಥ ನಾಯ್ಕ ತಂದೆಯೊಂದಿಗೆ ವಾಗ್ವಾದ ನಡೆಸುತ್ತಾ ಕೈ–ಕೈ ಮಿಲಾಯಿಸಿ ಕೆಳಗೆ ಬಿದ್ದಾಗ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಇದರಿಂದ ಶಿವಾಗ ನಾಯ್ಕ ಉಸಿರುಕಟ್ಟಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.