ಅನ್ನದ ಬಟ್ಟಲು: ಉಪ ಕಸುಬಗಳೆಂಬ ಬರ ನಿರೋಧಕ ಜಾಣ್ಮೆ
ಮಳೆ ಹೋಯ್ತ. ಬರ ಬಂತು. ಹಾಗೆಂದು ರೈತರು ಧೃತಿಗೆಡುವ ಅಗತ್ಯವಿಲ್ಲ. ಸ್ವಲ್ಪ ಮನಸ್ಸು ಮಾಡಿ, ಉಪ ಕಸುಬುಗಳನ್ನು ಅಳವಡಿಸಿಕೊಳ್ಳವತ್ತ ಯೋಚಿಸಿದರೆ, ಈಗ ಬಂದಿರುವ ಬರವನ್ನು ತಕ್ಕಮಟ್ಟಿಗೆ ಎದುರಿಸಬಹುದು. ‘ನೂರು ವರ್ಷಗಳಲ್ಲಿ 70 ವರ್ಷ ಬರಗಾಲ ಕಂಡಿರುವ ಜಿಲ್ಲೆ ನಮ್ಮದು. ಬರಗಾಲ ಇಲ್ಲಿಗೆ ಹೊಸದಲ್ಲ. ಆದರೂ ಇಲ್ಲಿನ ರೈತರು ಗುಳೆ ಹೋಗುವುದು ತೀರಾ ಕಡಿಮೆ, ಗೊತ್ತಾ…
ಮಳೆ ಹೋಯ್ತ. ಬರ ಬಂತು. ಹಾಗೆಂದು ರೈತರು ಧೃತಿಗೆಡುವ ಅಗತ್ಯವಿಲ್ಲ. ಸ್ವಲ್ಪ ಮನಸ್ಸು ಮಾಡಿ, ಉಪ ಕಸುಬುಗಳನ್ನು ಅಳವಡಿಸಿಕೊಳ್ಳವತ್ತ ಯೋಚಿಸಿದರೆ, ಈಗ ಬಂದಿರುವ ಬರವನ್ನು ತಕ್ಕಮಟ್ಟಿಗೆ ಎದುರಿಸಬಹುದು. ‘ನೂರು ವರ್ಷಗಳಲ್ಲಿ 70 ವರ್ಷ ಬರಗಾಲ ಕಂಡಿರುವ ಜಿಲ್ಲೆ ನಮ್ಮದು. ಬರಗಾಲ ಇಲ್ಲಿಗೆ ಹೊಸದಲ್ಲ. ಆದರೂ ಇಲ್ಲಿನ ರೈತರು ಗುಳೆ ಹೋಗುವುದು ತೀರಾ ಕಡಿಮೆ, ಗೊತ್ತಾ…’ ಮಳೆ ಕೊರತೆಯಾದಾಗಲೆಲ್ಲ ಚಿತ್ರದುರ್ಗ ಜಿಲ್ಲೆಯ ಕೃಷಿಕರ ಲೋಕಾರೂಢಿ ಮಾತು ಇದು.ಅಷ್ಟು ವರ್ಷ ಬರಗಾಲ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಮಾತು ಆಲಿಸುವಾಗಲೆಲ್ಲ ‘ಆ ಬರಗಾಲದ ವರ್ಷಗಳಲ್ಲಿ ಕೃಷಿಕರು ಜೀವನಕ್ಕೆ ಏನು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು ?’ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಇದೇ ಪ್ರಶ್ನೆಯನ್ನು ಅಲ್ಲಿನ ಭೂ ರಹಿತರು, ಸಣ್ಣ ರೈತರಿಂದ ಹಿಡಿದು ದೊಡ್ಡ ಹಿಡುವಳಿದಾರರವರೆಗೂ ಕೇಳುತ್ತಿದ್ದೆ. ಆಗ ಉತ್ತರಿಸಿದವರೆಲ್ಲ, ಕೋಳಿ ಸಾಕಣೆ, ಕುರಿ – ಮೇಕೆ ಸಾಕಣೆ, ಹೈನುಗಾರಿಕೆಯತ್ತ ಬೊಟ್ಟು ಮಾಡಿ ‘ಇವೇ ನಮ್ಮನ್ನು ಬರಗಾಲದಲ್ಲಿ ಬದುಕಿಸುತ್ತಿದ್ದು’ ಎಂದು ಹೇಳುತ್ತಿದ್ದರು. ಮಳೆ ನೆರಳಿನ ಪ್ರದೇಶವಾದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬರ ಅಧ್ಯಯನಕ್ಕಾಗಿ ಒಂದಷ್ಟು ಊರುಗಳನ್ನು ಸುತ್ತಾಡುವಾಗ ಬರಗಾಲ ಎದುರಿಸಲು ಕೃಷಿಕರ ಮಾತುಗಳಿಗೆ ಸಾಕ್ಷಿ ಸಿಗುತ್ತಿದ್ದವು. ಈ ಭಾಗದ ಹಳ್ಳಿಗಳ ಮನೆಯ ಎದುರಿನ ಮರದ ಕೆಳಗೆ ಕುರಿ, ಮೇಕೆಗಳನ್ನು ಕಟ್ಟಿ, ಮರದ ಕೊಂಬೆಗೆ ಮೇವಿನ ಗಿಡದ ಕೊನೆಯನ್ನು ತೂಗು ಹಾಕಿರುತ್ತಿದ್ದರು. ಪಕ್ಕದಲ್ಲಿ ಸಣ್ಣ ಜಾಗದಲ್ಲಿ ಪರದೆ ಕಟ್ಟಿ ಕೋಳಿಗಳನ್ನು ಬಿಟ್ಟು ಕಾಳು ಚೆಲ್ಲಿರುತ್ತಿದ್ದರು. ಇವುಗಳ ಸಾಕಣೆ ಹಿಂದಿನ ಉದ್ದೇಶ ಕುರಿತು ಅವರನ್ನು ಮಾತಿಗೆಳೆದರೆ, ಪುಟ್ಟ ಉಪ ಕಸುಬಿನ ಸರಾಸರಿ ಎಕನಾಮಿಕ್ಸ್ ಅನ್ನು ತೆರೆದಿಡುತ್ತಿದ್ದರು. ಅದರಲ್ಲಿ ‘ಒಂದು ಎಕರೆ ಬೆದ್ಲು ಜಮೀನಿನಾಗೆ ಬೆಳೆ ಕೈಕೊಟ್ಟರೂ, ಈ ಕೋಳಿ, ಮೊಟ್ಟೆ ಮಾರಾಟದಾಗೆ ಅಷ್ಟು ದುಡ್ಡು ಸಿಗ್ತೈತೆ ಸ್ವಾಮಿ’ ಎಂದು ಮಹಿಳೆಯೊಬ್ಬರು ಹೇಳಿದ ಮಾತು ಈಗಲೂ ನೆನಪಿದೆ. ಕೋಳಿ ಸಾಕಣಿಕೆ- ವ್ಯಾಪಾರದಲ್ಲಿ ಹಣ ಹರಿದಾಡುತ್ತದೆ. ಅದಕ್ಕೊಂದು ಉದಾಹರಣೆ ನೆನಪಾಗುತ್ತದೆ. ಬೆಂಗಳೂರಿನ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಯೋಜನೆ ಯೊಂದರ ಭಾಗವಾಗಿ ನೆಲಮಂಗಲ ಸಮೀಪದ ಬೀರಾವರದ ಅಶೋಕ- ಕಸ್ತೂರಿ ದಂಪತಿಗೆ 30 ಕೋಳಿ ಮರಿಗಳನ್ನು ಕೊಡಿಸಿತ್ತು. ಅವರು ತಮ್ಮ ಪುಟ್ಟ ತೋಟದ ಆವರಣದಲ್ಲಿ ಈ ಕೋಳಿ ಮರಿಗಳನ್ನು ಬೆಳೆಸಿದರು. ವರ್ಷ ಕಳೆಯುವ ಹೊತ್ತಿಗೆ ಈ ಸಂಖ್ಯೆ ದುಪ್ಪಟ್ಟಾಯಿತು.. ನಾಟಿ ಕೋಳಿ ಮೊಟ್ಟೆಗೆ ತುಂಬಾ ಬೇಡಿಕೆ ಬಂತು. ₹15 ರಿಂದ ₹18 ಬೆಲೆಯಲ್ಲಿ ಮೊಟ್ಟೆ ಮಾರಾಟ ಮಾಡಿದರು. ಕೋಳಿ ಮತ್ತು ಕೋಳಿ ಮರಿ ಎರಡೂ ಮಾರಾಟದಲ್ಲಿ ಉತ್ತಮ ಲಾಭ ಸಿಕ್ಕಿತು. ಈಗ ಅವರು ನಾಟಿ ಕೋಳಿಗಳ ಫಾರಂ ಮಾಡುವ ಯೋಜನೆ ಅವರದ್ದು’ ಎನ್ನುತ್ತಾರೆ ಸಂಸ್ಥೆಯ ಯೋಜನಾ ನಿರ್ದೇಶಕ ರವಿ. ಕೆ.ಮಳೆ ಕೈಕೊಟ್ಟು ಬಿತ್ತಿದ ಬೀಜ ಹುಟ್ಟದಿರುವ ಈ ಕಾಲದಲ್ಲಿ ಸಣ್ಣ ಹಿಡುವಳಿದಾರರಿಗೆ ನಾಟಿ ಕೋಳಿ ಸಾಕಣೆ ಒಂದು ಉತ್ತಮ ಉಪ ಕಸುಬಾಗುತ್ತದೆ. ಐದು ಕೋಳಿಯಿಂದ ಆರಂಭಿಸಿದರೂ ಸಾಕು. ಸೀಮಿತ ಆದಾಯ ಖಚಿತ. ಈ ಉಪ ಕಸುಬಿಗೆ ಹೆಚ್ಚು ನೀರು ಬೇಕಿಲ್ಲ, ವಿಪರೀತ ಮೇವಿನ ಅಗತ್ಯವಿಲ್ಲ. ಮನೆ ಮುಂಭಾಗ, ಪಕ್ಕದಲ್ಲಿರುವ ಹೊಲ, ಹಿತ್ತಿಲ, ಅಂಗಳ.. ಎಲ್ಲಾದರೂ ಬಿಟ್ಟರೆ ತಾನಾಗೆ ಮೇಯ್ದುಕೊಂಡಿರುತ್ತವೆ. ಅವುಗಳ ಸುರಕ್ಷತೆ ಬಗ್ಗೆ ಗಮನ ಕೊಟ್ಟರೆ ಸಾಕು. ಕೋಳಿ ಸಾಕಣೆ ಹಣವನ್ನಷ್ಟೇ ಅಲ್ಲದೇ ಮನೆಗೆ ಅಗತ್ಯವಾದ ‘ಪೌಷ್ಟಿಕ ಆಹಾರ’ವನ್ನೂ (ಮಾಂಸಹಾರಿಗಳಾಗಿದ್ದರೆ) ಪೂರೈಸುತ್ತದೆ. ಇದೊಂದು ರೀತಿ ಮನೆ ಖರ್ಚು ಉಳಿಸುತ್ತದೆ.ಅನ್ನದ ಬಟ್ಟಲು: ಹಣಕೊಡುವ ಶ್ರೀಗಂಧಕ್ಕೆ ‘ಶಕ್ತಿ’ ನೀಡುವ ಸಂಗಾತಿಗಳುಅನ್ನದ ಬಟ್ಟಲು: ಕೆಂಪು ಸುಂದರಿ ಈ ಬಾರ್ಬಡೋಸ್ ಚೆರ್ರಿ ! ಮೇಕೆ – ಕುರಿ ಸಾಕಣೆ ‘ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುವವರು, ಜತೆಗೆ ನಾಲ್ಕೈದು ಮೇಕೆಗಳನ್ನು ತಾವು ಕೆಲಸ ಮಾಡುವ ಜಾಗಕ್ಕೆ ಕರೆದೊಯ್ಯುತ್ತಾರೆ. ಕೆಲಸ ಮಾಡುತ್ತಾ, ಸುತ್ತಲಿನ ಜಾಗದಲ್ಲಿ ಅವುಗಳನ್ನು ಮೇಯಲು ಬಿಡುತ್ತಾರೆ. ಸಂಜೆ ಮನೆಗೆ ಬರುವಾಗ ಕರೆದೊಯ್ಯುತ್ತಾರೆ. ವರ್ಷಕ್ಕೆ ಮೇಕೆ ಮತ್ತು ಮರಿಗಳ ಮಾರಾಟದಿಂದ ಸಣ್ಣದೊಂದು ಉಪ ಆದಾಯವೂ ಬರುತ್ತದೆ’– ಮೊಳಕಾಲ್ಮುರು ತಾಲ್ಲೂಕಿನಲ್ಲಿ ತಾನು ಗಮನಿಸಿದ ಭೂರಹಿತರು, ಕೂಲಿ ಕಾರ್ಮಿಕರು ಅನುಸರಿಸುವ ಮೇಕೆ–ಕುರಿ ಸಾಕಣೆ ವಿಧಾನವನ್ನು ಅದೇ ಭಾಗದ ರೈತ ಮಿತ್ರರೊಬ್ಬರು ವಿವರಿಸಿದ ಬಗೆ. ನಾನು ಗಮನಿಸಿದಂತೆ, ಚಳ್ಳಕೆರೆ ಭಾಗದಲ್ಲಿ ಬಹುತೇಕ ಸಣ್ಣ ರೈತರು ಮೇಕೆ–ಕುರಿ ಸಾಕಣೆ ಮಾಡುತ್ತಾರೆ. ಅವರಿಗೆ ಇದು ನಷ್ಟವಾಗದ ಉಪ ಕಸುಬು. ಇಲ್ಲಿ ನಾಲ್ಕೈದು ಮೇಕೆ, ಐದಾರು ಕುರಿ ಮರಿಗಳೊಂದಿಗೆ ಸಾಕಣೆ ಆರಂಭಿಸುವವರು ಬೇಲಿ, ಕಾಡಿನಲ್ಲಿ ಬೆಳೆಯುವ ಮೇವಿನ ಮರಗಳ ಸೊಪ್ಪನ್ನೇ ಇವುಗಳಿಗೆ ಆಹಾರವಾಗಿ ಕೊಟ್ಟು ಬೆಳೆಸುತ್ತಾರೆ. ಹಾಗಾಗಿ, ಸಾಕಣಿಕೆ ಖರ್ಚು ಕಡಿಮೆ. ‘ಮೇಕೆ–ಕುರಿ ಸಾಕಣೆಗೆ ಬೇಕಾದ ಮೇವು ಬೆಳೆಯಲು ಇತ್ತೀಚೆಗೆ ಸಾಕಷ್ಟು ಹೈಟೆಕ್ ವಿಧಾನಗಳು ಚಾಲ್ತಿಯಲ್ಲಿವೆ. ಇರುವ ಜಾಗದಲ್ಲೇ ಸಣ್ಣ ಪ್ರಮಾಣದಲ್ಲಿ ಉಪಕಸುಬು ಮಾಡಬಹುದು' ಎನ್ನುತ್ತಾರೆ ಸ್ವಯಂ ಸೇವಾ ಸಂಸ್ಥೆಗಳ ಯೋಜನಾ ಸಲಹೆಗಾರ ಮಲ್ಲಿಕಾರ್ಜುನ ಹೊಸಪಾಳ್ಯ.ಮೇಕೆ- ಕುರಿಗಳಿಗೆ ವರ್ಷಪೂರ್ತಿ ಬೇಡಿಕೆ ಇರುತ್ತದೆ. ಮಾರ್ನವಮಿ, ವರ್ಷತೊಡಕು, ಬಕ್ರಿದ್, ರಂಜಾನ್ನಂತಹ ಹಬ್ಬಗಳಲ್ಲಿ ಇವುಗಳಿಗೆ ಬೇಡಿಕೆ ದುಪ್ಪಟ್ಟಾಗುತ್ತದೆ. ಮನೆ ಬಳಿಯೇ ಮಾರ್ಕೆಟ್ ಬರುತ್ತದೆ. ಮಾರುಕಟ್ಟೆ ಕುಸಿಯುವ. ಭಯವಿಲ್ಲ. ಹಾಗಾಗಿಯೇ ಹಲವು ಸ್ವಯಂ ಸೇವಾ ಸಂಸ್ಥೆಗಳ ಯೋಜನೆಗಳಲ್ಲಿ ‘ಆದಾಯ ಹೆಚ್ಚಿಸುವ' ಕಾರ್ಯಕ್ರಮವಾಗಿ ಕುರಿ-ಮೇಕೆ ವಿತರಿಸುತ್ತಿದ್ದರು.ಅನ್ನದ ಬಟ್ಟಲು: ಮಣ್ಣು – ನೀರಿನ ಆಪ್ತರಕ್ಷಕ ಲಾವಂಚಅನ್ನದ ಬಟ್ಟಲು: ‘ಪಿಎಂಡಿಎಸ್’ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರಸಾಲುಗಳ ಹೂವಿನ ಕೃಷಿ2015–16ರಲ್ಲಿ ಇದೇ ರೀತಿ ಬರಗಾಲ. ಮಾತಿಗೆ ಸಿಕ್ಕ ಹಿರಿಯೂರು ಸಮೀಪದ ಬುರಜನರೊಪ್ಪದ ರೈತರೊಬ್ಬರಿಗೆ, ‘ಬರಗಾಲ ಇದೆಯಲ್ಲಾ, ಏನ್ಮಾಡ್ತೀರಿ’ ಎಂದು ಕೇಳಿದೆ. ಅದಕ್ಕವರು ‘ಬರಗಾಲ ಐತೆ. ಬೋರ್ನಾಗೆ ಒಂದಿಂಚು ನೀರಿತ್ತು. 10 ಸಾಲು ಹೂವಿನ ಗಿಡಗಳನ್ನು ಹಾಕಿದ್ದೇನೆ. ಮಧ್ಯೆ ಖಾಲಿ ಜಾಗದಲ್ಲಿ ಸೊಪ್ಪಿನ ಬೆಳೆ ಹಾಕಿದ್ದೇನೆ. ಒಂದೇ ನೀರು ಎರಡು ಬೆಳೆಗೆ ಕೊಡುತ್ತೇನೆ. ನಾಲ್ಕೈದು ತಿಂಗಳಲ್ಲೇ ಹೂವು ಕೊಯ್ಲಾಗಿ ದುಡ್ಡು ಸಿಗುತ್ತದೆ’ ಎಂದ ವಿವರಿಸಿದರು. ಜತೆಗೆ ಶ್ರಾವಣಕ್ಕೆ ಬರೋ ಹಾಗೆ ಹೂವು ಹಾಕಿದ್ದು, ಆಗ ಇಂತಿಷ್ಟೇ ಕೆ.ಜಿ. ಹೂವು ಬಂದಿದ್ದು, ಅದನ್ನು ಮಾರಿದ್ದು, ಅದರಿಂದ ಬಂದ ಆದಾಯ.. ಹೀಗೆ ಎಲ್ಲವನ್ನೂ ವಿವರಿಸಿದ್ದರು. ಆದರೆ, ಅಂಕಿ ಅಂಶಗಳು ನೆನಪಿಲ್ಲ. ಒಂದೇ ಹನಿ ನೀರನ್ನು ಒಂದೇ ಕಾಲದಲ್ಲಿ ಎರಡು ಬೆಳೆ ಹಂಚಿ, ಬೆಳೆ ಬೆಳೆಯುವ ಅವರ ‘ಬರ ನಿರೋಧಕ ಜಾಣ್ಮೆ’ ಅಚ್ಚರಿ ಮೂಡಿಸುತ್ತಿತ್ತು. ತೋಟಗಾರಿಕೆ ವಿಜ್ಞಾನಿ ಬಿ.ಎಸ್. ಹರೀಶ್, ‘ಬರ ಎದುರಿಸಲು ಕನಕಾಂಬರದಂತಹ ಪುಷ್ಪ ಕೃಷಿ ಮಾಡಬಹುದು ಎಂದು ದೂರದರ್ಶನ ಕಾರ್ಯಕ್ರಮ ವೊಂದರಲ್ಲಿ ಸಲಹೆ ನೀಡುತ್ತಿದ್ದರು. ಅದಕ್ಕೆ ಮೈಸೂರು ಜಿಲ್ಲೆಯ ರೈತ ಮಹಿಳೆಯೊಬ್ಬರ ಯಶೋಗಾಥೆಯನ್ನು ಉದಾಹರಿಸಿದ್ದರು.ಮನೆ ಸುತ್ತ ಮುತ್ತಲಿನಲ್ಲಿ ಇಂಥ ಹೂವಿನ ಕೃಷಿಯ ಪ್ರಯತ್ನ ಮಾಡಬಹುದು. ಏಕೆಂದರೆ, ಹಬ್ಬಗಳ ಸಾಲಿನಲ್ಲಿ ಹೂವಿಗೆ ಬೇಡಿಕೆ ಖಚಿತವಾಗಿರುತ್ತದೆ. ಆದರೂ ಸುತ್ತಲಿನ ಪುಷ್ಪ ಮಾರುಕಟ್ಟೆಯನ್ನು ಒಮ್ಮೆ ಗಮನಿಸಿ, ಬೇಡಿಕೆ ನೋಡಿಕೊಂಡು, ಈ ಮಾದರಿಗಳಲ್ಲಿ ಸಣ್ಣದಾಗಿ ಹೂವಿನ ಕೃಷಿಯನ್ನೂ ಮಾಡುವುದು ಒಳ್ಳೆಯದು.ಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ ‘ಮಧುಮೇಹ’ ನಿಯಂತ್ರಣದ ಗುಟ್ಟುಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅಲಂಕಾರಿಕ ಮೀನು ಸಾಕಾಣಿಕೆದಶಕದ ಹಿಂದಿನ ಘಟನೆ. ಸಖರಾಯಪಟ್ಟಣ ಸಮೀಪದ ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ಆ ಊರಿನ ಪುಷ್ಪಾ ಎಂಬುವವರು, ಮನೆಯ ಮುಂದಿದ್ದ ಹೊಂಡಕ್ಕೆ ಪ್ಲಾಸ್ಟಿಕ್ ಹೊದಿಸಿ, ಮಳೆ ನೀರು ತುಂಬಿಸಿ, ಅದರಲ್ಲಿ ಅಲಂಕಾರಿಕ ಮೀನುಗಳನ್ನು ಸಾಕುತ್ತಿದ್ದರು. ಅಚ್ಚರಿಯಾಯಿತು. ‘ಮನೆಯೊಳಗೆ ಅಕ್ವೇರಿಯಂನಲ್ಲಿ ಬಣ್ಣದ ಮೀನುಗಳಿರುವುದನ್ನು ನೋಡಿದ್ದೆ. ಇಲ್ಲಿ ಯಾವ ಅಲಂಕಾರಕ್ಕೆ ಹೀಗೆ ’ ಎಂದು ಅವರನ್ನು ಕೇಳಿದೆ. ಅದಕ್ಕವರು, ‘ಈ ಬಣ್ಣದ ಮೀನುಗಳನ್ನು ಈ ಹೊಂಡದಲ್ಲಿ ಸಾಕಿ, ಬೆಳೆಸಿ, ಮಾರಾಟ ಮಾಡುತ್ತೇನೆ. ಇದಕ್ಕೆ ನಗರಗಳಲ್ಲಿ ಬಹಳ ಬೇಡಿಕೆ ಇದೆ’ ಎಂದರು.ಕೃಷಿ ಹೊಂಡದಲ್ಲಿ ಆಹಾರಕ್ಕಾಗಿ ಮೀನು ಸಾಕಣಿಕೆ ಮಾಡುವುದಷ್ಟೇ ಅಲ್ಲ, ಮನೆ ಎದುರಿನ ಸಣ್ಣ ಹೊಂಡ, ತೊಟ್ಟಿಗಳಲ್ಲೂ ಹೀಗೆ ಅಲಂಕಾರಿಕ ಮೀನು ಸಾಕಣೆ ಮಾಡಿ ಮಾರಾಟ ಮಾಡಬಹುದು. ಸಣ್ಣ ಕೃಷಿಕರು ವಿಶೇಷವಾಗಿ ಕೃಷಿ ಮಹಿಳೆಯರು ಈ ಅಲಂಕಾರಿಕ ಮೀನು ಸಾಕಣೆಯಂತಹ ಕೆಲಸಗಳನ್ನು ಉಪಕಸುಬಾಗಿ ಮಾಡಿಕೊಳ್ಳಬಹುದು.ವೈಜ್ಞಾನಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆ: ಆದಾಯ ಹೆಚ್ಚುಮೀನು ಸಾಕಾಣಿಕೆ: ಮನ್ ಕಿ ಬಾತ್ನಲ್ಲಿ ಬೋಡಕ್ಯಾನಟ್ಟಿ ರೈತನ ಸಾಧನೆ ಪ್ರಸ್ತಾಪ‘ಕೈ ಒಂದೆಕ್ರೆಯಲ್ಲೇ ಜೀವನ’- ರುದ್ರಾರಾಧ್ಯರ ನೆನಪುಬರ ಎದುರಿಸಲು ಅಗತ್ಯವಾದ ಕೃಷಿ ಮತ್ತು ಕೃಷಿಯೇತರ ಉಪಕಸುಬುಗಳ ಬಗ್ಗೆ ಮಾತನಾಡುವಾಗ 22 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಾವಿಕೆರೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಜ್ಞಾನಿ ದಿ.ರುದ್ರಾರಾಧ್ಯರು ಸಣ್ಣ ರೈತರಿಗಾಗಿ ‘ಒಂದು ಎಕರೆ’ಯಲ್ಲಿ ರೂಪಿಸಿದ್ದ ಕೃಷಿ ಮಾದರಿ ನೆನಪಾಗುತ್ತದೆ. ಮಳೆಯ ಆಧಾರದಲ್ಲಿ ಒಂದು ಎಕರೆಯಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಒಂದು ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯ, ಬೇಳೆ ಕಾಳು, ಎಣ್ಣೆ, ಹಣ್ಣು ತರಕಾರಿ, ಜತೆಗೆ ಪಶುಪಾಲನೆ, ಕೋಳಿ, ಮೀನು, ಕುರಿ ಸಾಕಣೆ ಮಾಡುವಂತಹ ಮಾದರಿಯನ್ನು ರೂಪಿಸಿದ್ದರು ರುದ್ರಾರಾಧ್ಯರು. ಮಳೆ ನೀರು ಸಂಗ್ರಹಕ್ಕೆ ಕೃಷಿ ಹೊಂಡ, ಅದರಲ್ಲಿ ಮೀನು ಸಾಕಣೆ. ಹೊಂಡದ ಮೇಲೆ ಕೋಳಿ ಸಾಕಣೆ ಗೂಡು, ಕೋಳಿ ಹಾಕುವ ಹಿಕ್ಕೆ ಹೊಂಡಗಳಲ್ಲಿರುವ ಮೀನುಗಳಿಗೆ ಆಹಾರ.. ಹೈನು- ಮೀನು- ಜೇನು ಎಲ್ಲವನ್ನೂ ಕೊಂಡಿಯಾಗಿಸಿದ್ದರು. ಕೆಲ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಈ ಮಾದರಿ ಈಗಲೂ ಇರಬಹುದು. ಆದರೂ ಸಣ್ಣ ರೈತರಿಗೆ ಅಷ್ಟಾಗಿ ತಲುಪಿದೆ ಎಂದು ಅನ್ನಿಸಿಲ್ಲ. ಬರಗಾಲ ಎದುರಾಗಿರುವ ಈ ಹೊತ್ತಲ್ಲಿ ರುದ್ರಾರಾಧ್ಯರ ಮಾದರಿಯನ್ನು ಪರಿಚಯಿಸಬೇಕಿದೆ. ಅಂದ ಹಾಗೆ, ಈವರೆಗೆ ಬರ ಎದುರಿಸಲು ಏನೆಲ್ಲ ಮಾಡಬಹುದೆಂಬ ಮಾದರಿಗಳ ಬಗ್ಗೆ ಓದಿದಿರಿ. ಇವು ಉದಾಹರಣೆಗಳಷ್ಟೇ. ಹಾಗೆಯೇ ಸಾಂಪ್ರದಾಯಿಕ ಹಳೇ ಮಾದರಿಗಳು. ಇಂತಹ ಹತ್ತಾರರು ಕೌಶಲ ಆಧಾರಿತ ಮಾದರಿಗಳು ನಮ್ಮ ನಡುವೆ ಇವೆ. ಅನ್ನದ ಬಟ್ಟಲು: ಉಣ್ಣುವ ಅನ್ನವೇ ವಿಷವಾಗುತ್ತಿರುವಾಗ…ಮುಂದಿನವಾರದ ಅಂಕಣದಲ್ಲಿ ಅವುಗಳನ್ನು ಚರ್ಚಿಸೋಣ. ಅಲ್ಲಿವರೆಗೂ ನೀವು ಇನ್ನೂ ಎಂಥ ಮಾದರಿಗಳನ್ನು ನೋಡಿದ್ದೀರಿ ಅಥವಾ ಅಳವಡಿಸಿಕೊಂಡಿದ್ದೀರಿ. ಈ ಬಗ್ಗೆ ಬರೆದು ತಿಳಿಸಿ.ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳಅನ್ನದ ಬಟ್ಟಲು: ದೇವೇಂದ್ರರ ‘ದೇಸಿ ಭತ್ತದ ತಳಿ’ ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ ‘ಹಣ್ಣಿನ ತೋಟ’ ಅರಳಿದ್ದು ಹೇಗೆ?