ರಾಜ್ಯದ ಹಲವೆಡೆ ಅಬ್ಬರದ ಮಳೆ – ಭರ್ತಿ ಹಂತದಲ್ಲಿ ಜಲಾಶಯಗಳು, ಹಲವು ಸೇತುವೆಗಳು ಮುಳುಗಡೆ
ಬೆಂಗಳೂರು: ರಾಜ್ಯದ ಹಲವೆಡೆ ಅಬ್ಬರದ ಮಳೆಯಾಗುತ್ತಿದೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಭರ್ತಿ ಹಂತಕ್ಕೆ ತಲುಪಿವೆ. ಇತ್ತ ನದಿಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗದ (Shivamogga) ಶಿಕಾರಿಪುರದಲ್ಲಿರುವ ಕುಮುದ್ವತಿ ನದಿ ಆರ್ಭಟಿಸ್ತಿದೆ. ಇದರಿಂದಾಗಿ 21 ಅಡಿ ಎತ್ತರದ 1.82 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ

ಬೆಂಗಳೂರು: ರಾಜ್ಯದ ಹಲವೆಡೆ ಅಬ್ಬರದ ಮಳೆಯಾಗುತ್ತಿದೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಭರ್ತಿ ಹಂತಕ್ಕೆ ತಲುಪಿವೆ. ಇತ್ತ ನದಿಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗದ (Shivamogga) ಶಿಕಾರಿಪುರದಲ್ಲಿರುವ ಕುಮುದ್ವತಿ ನದಿ ಆರ್ಭಟಿಸ್ತಿದೆ. ಇದರಿಂದಾಗಿ 21 ಅಡಿ ಎತ್ತರದ 1.82 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಹಾಸನ (Hassan) ಜಿಲ್ಲೆ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಎರಡೇ ದಿನದಲ್ಲಿ 2.042 ಟಿಎಂಸಿ ನೀರು ಹರಿದು ಬಂದಿದೆ. ಹೇಮಾವತಿ ಜಲಾಶಯಕ್ಕೆ 12,859 ಕ್ಯೂಸೆಕ್ ಒಳಹರಿವಿದ್ದು, 500 ಕ್ಯೂಸೆಕ್ ಹೊರಬಿಡಲಾಗಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಡ್ಯಾಂನಲ್ಲಿ ಸದ್ಯ 28.022 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಹಾಸನದಲ್ಲಿ ವರುಣನ ಅಬ್ಬರ – ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ ಸಕಲೇಶಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಎಡಕುಮಾರಿ-ಶಿರವಾಗಿಲು ಬಳಿ ರೈಲ್ವೇ ಹಳಿ ಮೇಲೆ ಕುಸಿದಿದ್ದ ಮಣ್ಣಿನ ತೆರವು ಕಾರ್ಯಾಚರಣೆ ಮುಂದುವರಿದಿದೆ. ಮಳೆ ನಿಲ್ಲದ ಕಾರಣ ರೈಲು ಹಳಿ ತುಂಬೆಲ್ಲಾ ಕೆಸರು ನಿಂತಿದೆ. ಮರಳಿನ ಮೂಟೆ ಜೋಡಿಸಿ ಮಣ್ಣು ಕುಸಿಯದಂತೆ ರೈಲ್ವೆ ಇಲಾಖೆ ಕಾರ್ಮಿಕರು ತಡೆಗೋಡೆ ನಿರ್ಮಿಸುತ್ತಿದ್ದಾರೆ. ಇಂದು ಕೂಡ ಈ ಮಾರ್ಗದ ಕೆಲವು ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಭೋರ್ಗರೆಯುವ ಹಳ್ಳದಲ್ಲಿ ಪ್ರವಾಸಿಗರ ಹುಚ್ಚಾಟ ಮೆರೆದಿದ್ದಾರೆ. ಕುದುರೆಮುಖದಿಂದ ನೇತ್ರಾವತಿ ಪೀಕ್ ಹೋಗುವ ಮಾರ್ಗಮಧ್ಯೆಯ ಹಳ್ಳದಲ್ಲಿ ಹಗ್ಗದ ಮೇಲೆ ನಡೆದು ಹೋಗ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಮೂಲಕ ಹಾದು ಹೋಗುವ ತುಂಗಾಭದ್ರ ನದಿಯ ಮೈತುಂಬಿ ಹರಿಯುತ್ತಿದ್ದು, ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನಲೆ ಶ್ರೀ ಕ್ಷೇತ್ರ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆಗಳು ಕೂಡ ಮುಳುಗಡೆಯಾಗಿವೆ.ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆಯಬ್ಬರ – ಪೊನ್ನೋಲ ಸಾಸ್ಥಾವು ದೇವಾಲಯದ ಮುಂಭಾಗ ಭೂಕುಸಿತ ಹಾವೇರಿಯ ಸವಣೂರು ತಾಲ್ಲೂಕಿನಲ್ಲಿ ವರದಾ ನದಿ ಅಬ್ಬರಿಸ್ತಿದ್ದು, ಕಳಸೂರು ಗ್ರಾಮದ ಬಳಿ ಇರುವ ಬ್ರಿಜ್ಡ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮಳೆಯಿಂದಾಗಿ ಶಿವಗಂಗಾಫಾಲ್ಸ್, ಉಂಚಳ್ಳಿ ಫಾಲ್ಸ್ಗಳು ಭೋರ್ಗರೆದು ಧುಮ್ಮಿಕ್ಕುತ್ತಿವೆ. ದಾಂಡೇಲಿಯಲ್ಲಿ ಮಳೆಯ ಅಬ್ಬರಕ್ಕೆ ಮನೆಯ ಗೋಡೆ ಕುಸಿದು ಮನೆಯಲ್ಲಿ ಇದ್ದ ಇಬ್ಬರು ವೃದ್ದೆಯರಿಗೆ ಗಾಯವಾಗಿದೆ. ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಸರಳೆಬೈಲಿನ ಅಗಸೂರು ಬಳಿ ಹೆದ್ದಾರಿ ತೀರಾ ಹದಗೆಟ್ಟ ಹಿನ್ನೆಲೆ ಗ್ರಾಮದ ಜನ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಬೃಹತ್ ಹೊಂಡಗಳಿಗೆ ಗಿಡ ನಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಾರ್ಕಂಡೇಯ ನದಿ ಅಪಾಯಮಟ್ಟ ಮೀರಿ ಹರೀತಿದೆ. ಕಡೋಲಿ, ಅಂಬೇವಾಡಿ ಭಾಗದ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಖಾನಾಪುರ-ಮಂತುರ್ಗಾ ಸೇತುವೆ ಮುಳುಗಡೆಯಾಗಿದೆ. ಮಹಾರಾಷ್ಟ್ರ ಕೊಯ್ನಾ ಡ್ಯಾಮ್ನಿಂದ ಕೃಷ್ಣಾ ನದಿಗೆ 1 ಲಕ್ಷ 23 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಮುಲ್ಲಾನಕಿ ಗ್ರಾಮದಲ್ಲಿರುವ ದೂದಗಂಗಾ ನದಿಯಿಂದಾಗಿ ಮನ್ಸೂರ ಶಾ ಅಲಿ ದರ್ಗಾ ಸಂಪೂರ್ಣ ಮುಳುಗಿದೆ. ರಾಯಭಾಗ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ ಸೇತುವೆ ಮೇಲೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.ಇದನ್ನೂ ಓದಿ: ಶತಕ ಬಾರಿಸಿದ KRS – ಮಳೆ ಮುಂದುವರಿದರೆ ಈ ಬಾರಿಯೂ ಭರ್ತಿ