ಸವದತ್ತಿ: ಹಂಚಿನಾಳದಲ್ಲಿ ಮಳೆಗಾಲದಲ್ಲೂ ಹನಿ ನೀರಿಗೂ ಹಾಹಾಕಾರ
ಸವದತ್ತಿ: ತಾಲ್ಲೂಕಿನ ಹಂಚಿನಾಳದಲ್ಲಿ ಮಳೆಗಾಲದಲ್ಲೇ ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮ ಪ್ರವೇಶಿಸುತ್ತಿದ್ದಂತೆ ಖಾಲಿ ಕೊಡಗಳದ್ದೇ ದರ್ಶನವಾಗುತ್ತಿದೆ. ಬರ ಪರಿಸ್ಥಿತಿಯಿಂದ ದುಡಿಯಲು ಕೆಲಸವಿಲ್ಲದೆ ಪರದಾಡುತ್ತಿರುವ ಜನ ಕುಡಿಯುವ ನೀರು ಸಂಗ್ರಹಿಸಲು ಇಡೀದಿನ ಕಾಯುವ ಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆಯಲ್ಲೂ ಇಲ್ಲಿ ಜಲಬವಣೆ ತಲೆದೋರಿತ್ತು. ಆಗ

ಸವದತ್ತಿ: ತಾಲ್ಲೂಕಿನ ಹಂಚಿನಾಳದಲ್ಲಿ ಮಳೆಗಾಲದಲ್ಲೇ ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮ ಪ್ರವೇಶಿಸುತ್ತಿದ್ದಂತೆ ಖಾಲಿ ಕೊಡಗಳದ್ದೇ ದರ್ಶನವಾಗುತ್ತಿದೆ. ಬರ ಪರಿಸ್ಥಿತಿಯಿಂದ ದುಡಿಯಲು ಕೆಲಸವಿಲ್ಲದೆ ಪರದಾಡುತ್ತಿರುವ ಜನ ಕುಡಿಯುವ ನೀರು ಸಂಗ್ರಹಿಸಲು ಇಡೀದಿನ ಕಾಯುವ ಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆಯಲ್ಲೂ ಇಲ್ಲಿ ಜಲಬವಣೆ ತಲೆದೋರಿತ್ತು. ಆಗ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ವಿಶ್ವಾಸ ವೈದ್ಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ನೀಡಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಆದರೂ, ಅಧಿಕಾರಿಗಳು ಗಮನಹರಿಸಲಿಲ್ಲ. ಈಗ ಮಳೆಗಾಲದಲ್ಲೂ ಅಧಿಕಾರಿಗಳು ಇತ್ತ ಕಣ್ಣೆತ್ತಿ ನೋಡದ್ದರಿಂದ ಜಲಸಂಕಷ್ಟ ತಲೆದೋರಿದೆ.ಕೊಡ ನೀರಿಗಾಗಿ ಮಹಿಳೆಯರು, ವೃದ್ಧರು, ಮಕ್ಕಳು ತಳ್ಳುವ ಗಾಡಿ ನೂಕುತ್ತ ಅಲೆದಾಡುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿವೆ. ಮನೆ–ಮನೆಗೆ ಪೂರೈಕೆಯಾಗಬೇಕಿದ್ದ ಜಲಜೀವನ ಮಿಷನ್ ಯೋಜನೆ ನೀರು ಸ್ಥಗಿತಗೊಂಡು ಹಲವಾರು ದಿನಗಳಾಗಿವೆ.10 ದಿನಗಳಿಂದ ನಲ್ಲಿಗಳಲ್ಲಿ ನೀರಿಲ್ಲ!‘ಹಂಚಿನಾಳ ಗ್ರಾಮಕ್ಕೆ ಕಳೆದ 10 ದಿನಗಳಿಂದ ನೀರಿನ ಪೂರೈಕೆಯಾಗಿಲ್ಲ. ಐದು ಕಡೆ ಸಾರ್ವಜನಿಕ ನಲ್ಲಿಗಳಿವೆ. ಎಲ್ಲಿಯೂ ನೀರು ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.‘ನಮಗೆ ಹೆಚ್ಚುವರಿ ಸೌಲಭ್ಯ ಬೇಡ. ನಿಗದಿತ ಸಮಯಕ್ಕೆ ಕುಡಿಯುವ ನೀರು ನೀಡಿ’ ಎಂದು ಗ್ರಾಮಸ್ಥರಾದ ಬಸನಗೌಡ ಪಾಟೀಲ ಹಾಗೂ ಮಂಜುನಾಥ ಜಟ್ಟೆನ್ನವರ ಆಗ್ರಹಿಸಿದರು. ‘ಕೆರೆ ನೀರು ಕಲುಷಿತವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಬಂದ್ ಆಗಿದೆ. ಹಾಗಾಗಿ ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ. ಸರ್ಕಾರದ ಯೋಜನೆಗಳು ಕಾಗದದಲ್ಲಷ್ಟೇ ಇವೆ’ ಎಂದು ಗ್ರಾಮಸ್ಥ ಸಿದ್ದಪ್ಪ ರುದ್ರಪ್ಪ ಹುಲಗನ್ನವರ ಆಕ್ರೋಶ ವ್ಯಕ್ತಪಡಿಸಿದರು.ಯಾರು ಏನಂತಾರೆ...?ಪ್ರೇಮ ರಾಠೋಡ, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಹಂಚಿನಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಈಗ ನಡೆದ ಕಾಮಗಾರಿ ಪೂರ್ಣಗೊಳ್ಳಲು 15 ದಿನ ಬೇಕಾಗಬಹುದು. ಅದಾದ ನಂತರ ಸಮಸ್ಯೆ ಬಗೆಹರಿಯುತ್ತದೆಆನಂದ ಬಡಕುಂದ್ರಿ, ಇಒ ತಾಲ್ಲೂಕು ಪಂಚಾಯಿತಿಐಟಿಐ ಕಾಲೇಜು ಮಾರ್ಗದಲ್ಲಿ ತಾತ್ಕಾಲಿಕವಾಗಿ ಪೈಪ್ಲೈನ್ ಅಳವಡಿಸಿ, ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆಜಿ.ವಿ. ಅಗಡಿ, ಗ್ರಾಮಸ್ಥನೀರಿನ ಸಮಸ್ಯೆ ಪರಿಹಾರಕ್ಕಾಗಿ ಶಾಸಕರು ಅನುದಾನ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಸಮನ್ವಯದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆಕಾರ್ಯನಿರ್ವಹಿಸದ ಎಂವಿಸ್ಹಂಚಿನಾಳ ಸೇರಿ 14 ಹಳ್ಳಿಗಳ ಜನರ ದಾಹ ನೀಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಎಂವಿಎಸ್) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಿರೇಕುಂಬಿ ಮತ್ತು ಚಿಕ್ಕುಂಬಿ ಭಾಗದಲ್ಲಿ ಪೈಪ್ಲೈನ್ ಸೋರಿಕೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.ಮೂರು ಘಟಕ ಬಂದ್ಊರಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ ಮೂರು ಬಂದ್ ಆಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜತೆಗೆ, ಕೆರೆ ನೀರು ಕಲುಷಿತವಾಗಿದೆ. ಕೆರೆ ನೀರು ಕುಡಿದು ಗ್ರಾಮಸ್ಥರ ಅನಾರೋಗ್ಯ ಹಾಳಾಗಿದೆ. ಕೂಡಲೇ ಕೆರೆಯಲ್ಲಿರುವ ಹೂಳು ತೆಗೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260803-21-185611775