ಪ್ರವಾಸ ಕಥನ | ಸಿಂಗಪುರ: ಹಸಿರು, ಶಿಸ್ತು ಮತ್ತು ಅದ್ಭುತಗಳ ದೇಶ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದ್ವೀಪ ರಾಷ್ಟ್ರವಾದ ಸಿಂಗಪುರವು ಅನೇಕ ಆಕರ್ಷಣೆ ಹಾಗೂ ವಿಶೇಷತೆಗಳನ್ನು ಹೊಂದಿರುವ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿದೆ. ಮಲೇಷ್ಯಾದಿಂದ 1965ರಲ್ಲಿ ಸ್ವತಂತ್ರಗೊಂಡ ಈ ದೇಶ ಕ್ಷಿಪ್ರಗತಿಯಲ್ಲಿ ಬೆಳೆದು ಅನೇಕ ದೇಶಗಳ ನಡುವೆ ಮಿನುಗುತಾರೆಯಾಗಿ ಕಂಗೊಳಿಸುತ್ತಿದೆ. ಸುಮಾರು 744 ಚದರ ಕಿ.ಮೀ. ವಿಸ್ತೀರ್ಣ ಹಾಗೂ 61 ಲಕ್ಷ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದ್ವೀಪ ರಾಷ್ಟ್ರವಾದ ಸಿಂಗಪುರವು ಅನೇಕ ಆಕರ್ಷಣೆ ಹಾಗೂ ವಿಶೇಷತೆಗಳನ್ನು ಹೊಂದಿರುವ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿದೆ. ಮಲೇಷ್ಯಾದಿಂದ 1965ರಲ್ಲಿ ಸ್ವತಂತ್ರಗೊಂಡ ಈ ದೇಶ ಕ್ಷಿಪ್ರಗತಿಯಲ್ಲಿ ಬೆಳೆದು ಅನೇಕ ದೇಶಗಳ ನಡುವೆ ಮಿನುಗುತಾರೆಯಾಗಿ ಕಂಗೊಳಿಸುತ್ತಿದೆ. ಸುಮಾರು 744 ಚದರ ಕಿ.ಮೀ. ವಿಸ್ತೀರ್ಣ ಹಾಗೂ 61 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಶೇ 60ರಷ್ಟು ಸ್ಥಳೀಯರು ಹಾಗೂ ಉಳಿದವರು ಹೊರಗಿನ ದೇಶದವರು ಈ ದೇಶದ ನಿವಾಸಿಗಳಾಗಿದ್ದಾರೆ. ಜಪಾನ್ ಕನ್ನಡ ಸಂಘದ ಪಾಡ್ಕಾಸ್ಟ್ನಲ್ಲಿ ಚುನಾವಣಾ ಪ್ರಕ್ರಿಯೆ ಕುರಿತು ಉಪನ್ಯಾಸಚೀನಾ ಮೂಲದವರು ಶೇ 25,, ಮಲೇಷ್ಯಾ ಮೂಲದವರು ಶೇ 15, ಭಾರತೀಯರು ಶೇ 7.6 ಹಾಗೂ ಇತರೆ ದೇಶದವರು ಶೇ 2.4ರಷ್ಟಿದ್ದಾರೆ. ಸಿಂಗಪುರದಲ್ಲಿ ಪ್ರಮುಖವಾಗಿ ಇಂಗ್ಲಿಷ್, ಮ್ಯಾಂಡರಿನ್, ಮಲಯ ಹಾಗೂ ತಮಿಳು ಭಾಷೆಗಳನ್ನು ಅಧಿಕೃತವಾಗಿ ಬಳಸುತ್ತಾರೆ. ಆಡಳಿತ ಭಾಷೆಯಾಗಿ ಇಂಗ್ಲಿಷ್ ಬಳಕೆಯಲ್ಲಿದೆ. ಸಿಂಗಪುರ ಡಾಲರ್ ಅಲ್ಲಿನ ಚಲಾವಣೆಯಲ್ಲಿರುವ ಕರೆನ್ಸಿ. ಒಂದು ಡಾಲರ್ಗೆ ಸುಮಾರು 25 ಭಾರತದ ರೂಪಾಯಿ ಮೌಲ್ಯವಿದೆ. ಇಲ್ಲಿನ ತಾಪಮಾನ ಕನಿಷ್ಠ 24 ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ದಕ್ಷಿಣ ಕರ್ನಾಟಕದ ನಮಗೆ ತುಸು ಸೆಕೆ ಎನಿಸುತ್ತದೆ. ಆದರೆ ಎಲ್ಲೆಡೆ, ಅಂದರೆ ಬಸ್, ಮೆಟ್ರೋ ಹಾಗೂ ಕಟ್ಟಡಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರುವುದರಿಂದ ಅಷ್ಟೇನು ಅಸಹನೀಯ ಎನಿಸುವುದಿಲ್ಲ.ಗಾತ್ರ ಹಾಗೂ ಜನಸಂಖ್ಯೆಯಲ್ಲಿ ಪುಟ್ಟ ರಾಷ್ಟ್ರವಾಗಿದ್ದರೂ ಪ್ರಪಂಚದ ದೊಡ್ಡ ದೊಡ್ಡ ದೇಶಗಳ ಜನರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಈ ದೇಶವನ್ನು ಸುಂದರವಾಗಿಸಲು ದೂರದೃಷ್ಟಿಯ ನಾಯಕನೊಬ್ಬ ಕಾರಣರಾದರು. ಅವರೇ ಲೀ ಕ್ವಾನ್ ಯೂ. ದೇಶದ ಪ್ರಥಮ ಪ್ರಧಾನಿಯಾಗಿ ಸುಮಾರು ಮೂರು ದಶಕಗಳು ಆಡಳಿತ ನಡೆಸಿದ ಅವರು ಸಿಂಗಪುರವನ್ನು ಸಿಂಗರಿಸಿ ಜಗತ್ತಿನ ಜನರು ತಿರುಗಿ ನೋಡುವಂತೆ ಮಾಡಿದ್ದು ಕಡಿಮೆ ಸಾಧನೆಯಲ್ಲ.ಸಿಂಗಪುರ ಎಂದಾಕ್ಷಣ ಗಗನಚುಂಬಿ ಕಟ್ಟಡಗಳು, ಪ್ರತಿಷ್ಠಿತ ಬ್ಯಾಂಕ್ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹೆಸರುಗಳು ಕಣ್ಮುಂದೆ ಬರುವುದು ಸಹಜ. ಆದರೆ ಸಿಂಗಪುರದಲ್ಲಿ ಹಸಿರಿಗೂ ಅಷ್ಟೇ ಆದ್ಯತೆ ನೀಡಿರುವುದು ವಿಶೇಷ. ಅಪಾರ್ಟ್ಮೆಂಟ್ಗಳಿಗೆ ಹೊಂದಿಕೊಂಡಂತೆ ಕಿರು ಅರಣ್ಯ, ಕೆರೆ ಹಾಗೂ ಉದ್ಯಾನವನಗಳನ್ನು ನಿರ್ಮಿಸಿರುವುದು ನಿಜಕ್ಕೂ ಅಪೂರ್ವ ಎನಿಸುತ್ತದೆ. ಒಂದು ಯೋಜನೆಯನ್ನು ಕಾರ್ಯಗತಗೊಳಿಸಲು ಹತ್ತಾರು ವರ್ಷಗಳ ಚಿಂತನೆ, ಸಮಾಲೋಚನೆ ಹಾಗೂ ಕಾರ್ಯಯೋಜನೆ ರೂಪಿಸಲಾಗುತ್ತದೆ ಎಂದು ಸ್ಥಳೀಯರು ಹೇಳಿದ್ದು ಅಚ್ಚರಿ ಮೂಡಿಸಿತು.ಹೈದರಾಬಾದ್ ಕನ್ನಡಿಗ ಜಯಶ್ರೀನಿವಾಸ ಅವರ ಕವನ ಸಂಕಲನ ‘ಬುಧವಾರದ ಅತಿಥಿ’ ಪ್ರಕಟಸೆಂಟೊಸ ದ್ವೀಪದಲ್ಲಿ ರೋಪ್ ವೇಒಂದು ದೇಶದ ಅಭಿವೃದ್ಧಿ ಎಂದರೆ ಜಿಡಿಪಿ, ರಸ್ತೆಗಳು, ಮೂಲಸೌಕರ್ಯ, ವಿಮಾನ ನಿಲ್ದಾಣ, ರೈಲು ಹಾಗೂ ಬಸ್ ವ್ಯವಸ್ಥೆ ಮಾತ್ರವಲ್ಲ; ಆ ದೇಶದಲ್ಲಿ ವಾಸಿಸುವ ಜನರ ದೇಶಪ್ರೇಮ, ಕಾನೂನು ಪಾಲನೆ ಹಾಗೂ ಶಿಕ್ಷಣವೂ ಮುಖ್ಯವಾಗುತ್ತದೆ. ಅನೇಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸರ್ಕಾರಗಳು ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುತ್ತವೆ. ಆದರೆ ಅವುಗಳನ್ನು ಬಳಸುವ ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಕಂಡುಬರುತ್ತದೆ.ಸಿಂಗಪುರ ದೇಶದಲ್ಲಿ ಪ್ರವಾಸಿಗರನ್ನು ಮೊದಲಿಗೆ ಸೆಳೆಯುವುದು ಅಲ್ಲಿನ ಸಾರಿಗೆ ವ್ಯವಸ್ಥೆ. ಬಸ್, ಟ್ಯಾಕ್ಸಿ ವ್ಯವಸ್ಥೆಯ ಜೊತೆಗೆ ಎಲ್ಆರ್ಟಿ (ಲೈಟ್ ರೈಲ್ ಟ್ರಾನ್ಸಿಟ್) ಹಾಗೂ ಎಂಆರ್ಟಿ (ಮಾಸ್ ರ್ಯಾಪಿಡ್ ಟ್ರಾನ್ಸಿಟ್) ವ್ಯವಸ್ಥೆಗಳು ಆಧುನಿಕವಾಗಿದ್ದು ಪ್ರಯಾಣಿಕ ಸ್ನೇಹಿಯಾಗಿವೆ. ಅಲ್ಲಿನ ರಸ್ತೆ ನಿಯಮಗಳ ಪಾಲನೆ ವಿಶೇಷವಾಗಿ ಗಮನ ಸೆಳೆಯುತ್ತದೆ. ವಾಹನ ಚಾಲಕರಾಗಲಿ, ಪಾದಚಾರಿಗಳಾಗಲಿ ಎಲ್ಲರೂ ಕಟ್ಟುನಿಟ್ಟಾಗಿ ರಸ್ತೆ ನಿಯಮಗಳನ್ನು ಪಾಲಿಸುವುದು ಅಚ್ಚರಿ ಮೂಡಿಸುತ್ತದೆ. ನಾವು ಸಿಂಗಪುರದಲ್ಲಿ ಇದ್ದ ಆರು ದಿನಗಳಲ್ಲಿ ಅನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದೆವು. ಆ ದಿನಗಳಲ್ಲಿ ಒಂದೇ ಒಂದು ವಾಹನದ ಹಾರ್ನ್ ಶಬ್ದವೂ ಕೇಳಿಸಲಿಲ್ಲ. ಮಧ್ಯರಾತ್ರಿಯಲ್ಲೂ ನಾಗರಿಕರು ರಸ್ತೆ ನಿಯಮಗಳನ್ನು ಪಾಲಿಸುತ್ತಿದ್ದುದು ವಿಶಿಷ್ಟ ಎನಿಸಿತು. ಅಲ್ಲಿನ ಜನರ ಶಿಸ್ತು, ಸಂಯಮ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಗೌರವ ಅನುಕರಣೀಯ. ಎಲ್ಲಿಯೂ ಪೊಲೀಸ್ ಸಿಬ್ಬಂದಿಯನ್ನು ಕಾಣಲಿಲ್ಲ. ಇದಕ್ಕೆ ಕಾರಣ, ಇಡೀ ದೇಶವೇ ಸಿಸಿಟಿವಿ ಕಣ್ಗಾವಲಿನಲ್ಲಿರುವುದು. ಇಡೀ ನಗರವನ್ನು ಸಂಪರ್ಕಿಸುವ ಸುಸಜ್ಜಿತ ಮೆಟ್ರೊ ವ್ಯವಸ್ಥೆಯೂ ವಿಶೇಷವಾಗಿದೆ.ಹೊರನಾಡ ಕನ್ನಡಿಗರು: ಒಮಾನ್ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!ಸಿಂಗಪುರದೊಳಗೊಂದು ಪುಟ್ಟ ಭಾರತಸಿಂಗಪುರದಲ್ಲಿ ಪಾರಂಪರಿಕ ಕಟ್ಟಡಗಳನ್ನು ಒಳಗೊಂಡ ‘ಲಿಟಲ್ ಇಂಡಿಯಾ’ ಎಂಬ ಪ್ರದೇಶವಿದೆ. ಅಲ್ಲಿನ ರಸ್ತೆಗಳಲ್ಲಿ ನಡೆಯುತ್ತಿದ್ದರೆ ನಾವು ಭಾರತದಲ್ಲಿರುವಂತೆ, ಅದರಲ್ಲೂ ತಮಿಳುನಾಡಿನಲ್ಲಿರುವಂತೆ ಭಾಸವಾಗುತ್ತದೆ. ಎರಡು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಶ್ರೀ ವೆಂಕಟೇಶ್ವರ ಪೆರುಮಾಳ್ ದೇವಸ್ಥಾನ ಹಾಗೂ ಶ್ರೀ ವೀರಮಾಕಾಳಿಯಮ್ಮನ್ ದೇವಸ್ಥಾನ ಭಕ್ತಿಭಾವ ಮೂಡಿಸುತ್ತವೆ. ಹೆಚ್ಚು ತಮಿಳು ಭಾಷಿಕರೇ ಇರುವ ಈ ಪ್ರದೇಶವು ಭಾನುವಾರ ಭಾರತೀಯರಿಂದ ತುಂಬಿ ತುಳುಕುತ್ತದೆ.ಅಲ್ಲಿನ ಪಾರಂಪರಿಕ ಕಟ್ಟಡಗಳು, ಶಿವಂ ರೆಸ್ಟೋರೆಂಟ್, ಗ್ರೀನ್ ಲೀಫ್ ಕೆಫೆ, ಅರೋಮಾಸ್ ಆಫ್ ಇಂಡಿಯಾ ಹಾಗೂ ಎಂ.ಟಿ.ಆರ್. ಸೇರಿದಂತೆ ಅನೇಕ ಸಸ್ಯಾಹಾರಿ ರೆಸ್ಟೋರೆಂಟ್ಗಳು ಗಮನ ಸೆಳೆಯುತ್ತವೆ. ಇಲ್ಲಿ ಮೈಸೂರು ಪಾಕ್ ನೋಡಿ ಪುಳಕಿತರಾದೆವು. ಒಂದು ಪೀಸ್ ಮೈಸೂರುಪಾಕ್ಗೆ ಎರಡು ಡಾಲರ್, ಅಂದರೆ ಸುಮಾರು ₹ 150 ಎಂದು ತಿಳಿದು ಹೌಹಾರಿದೆವು. ಲಿಟಲ್ ಇಂಡಿಯಾದಲ್ಲಿ ಹೂವಿನ ಮಳಿಗೆಗಳು ವಿಶೇಷ ಆಕರ್ಷಣೆ. ಮೈಸೂರು ಮಲ್ಲಿಗೆ, ಗುಲಾಬಿ ಸೇರಿದಂತೆ ಹಲವು ಬಗೆಯ ಹೂವುಗಳು ದೊರೆಯುತ್ತವೆ. ಅಲ್ಲಿನ ಹಣ್ಣು ಹಾಗೂ ತರಕಾರಿ ಮಾರುಕಟ್ಟೆ ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆನಪಿಸುತ್ತಿತ್ತು.ಇಂಡಿಯನ್ ಹೆರಿಟೇಜ್ ಸೆಂಟರ್ ಒಂದು ಆಕರ್ಷಣೀಯ ಸ್ಥಳವಾಗಿದೆ. ನಾಲ್ಕು ಅಂತಸ್ತಿನ ಈ ಕೇಂದ್ರದಲ್ಲಿ ದಕ್ಷಿಣ ಏಷ್ಯಾ ಹಾಗೂ ಸಿಂಗಪುರದಲ್ಲಿ ನೆಲೆಸಿರುವ ಭಾರತೀಯರ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಉತ್ತಮ ಮಾಹಿತಿಯನ್ನು ನೀಡಲಾಗಿದೆ. ಲಿಟಲ್ ಇಂಡಿಯಾದಲ್ಲಿ 1953ರಲ್ಲಿ ಉದ್ಘಾಟನೆಗೊಂಡ ಗಾಂಧಿ ಸ್ಮಾರಕ ಭವನವನ್ನು ಕಂಡು ಮೈ ರೋಮಾಂಚನಗೊಂಡಿತು.ನ್ಯಾಷನಲ್ ಲೈಬ್ರೆರಿಕತಾರ್ ಉಪ ರಾಯಭಾರಿ ಸಂದೀಪ್ ಕುಮಾರ್ ಜೊತೆ ಕನ್ನಡ ಸಂಘದ ಪದಾಧಿಕಾರಿಗಳ ಚರ್ಚೆವೈವಿಧ್ಯಮಯ ಪ್ರವಾಸಿ ತಾಣಗಳುಸಿಂಗಪುರದಲ್ಲಿ ಅನೇಕ ಆಕರ್ಷಕ ಹಾಗೂ ಆಶ್ಚರ್ಯ ಹುಟ್ಟಿಸುವ ಪ್ರವಾಸಿ ತಾಣಗಳಿವೆ. ಪ್ರಕೃತಿ ನಿರ್ಮಿತ ತಾಣಗಳಿಗಿಂತ ಮಾನವ ನಿರ್ಮಿತ ತಾಣಗಳು ಹೆಚ್ಚು ಬೆರಗುಗೊಳಿಸುತ್ತವೆ. ಗಾರ್ಡನ್ಸ್ ಬೈ ದ ಬೇ, ಯುನಿವರ್ಸಲ್ ಸ್ಟುಡಿಯೋ, ಮೃಗಾಲಯ, ಮರೀನಾ ಬೇ, ಮರ್ಲಯನ್ ಪಾರ್ಕ್, ಬಟಾನಿಕಲ್ ಗಾರ್ಡನ್ ಹಾಗೂ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ಮನಮೋಹಕ ತಾಣಗಳಿವೆ. ಪ್ರವೇಶ ದರ ಸುಮಾರು ₹ 1 ಸಾವಿರದಿಂದ ₹ 6 ಸಾವಿರದವರೆಗೂ ಇರುತ್ತದೆ. ಮೃಗಾಲಯದಲ್ಲಿ ರಾತ್ರಿ ಸಫಾರಿಯ ವ್ಯವಸ್ಥೆಯೂ ಇದೆ.101 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಿರುವ ಕ್ಲೌಡ್ ಫಾರೆಸ್ಟ್ ವಿಶೇಷ ಆಕರ್ಷಣೆಯಾಗಿದೆ. ಫ್ಲವರ್ ಡೋಮ್, ಗ್ರೀನ್ಹೌಸ್ ಹಾಗೂ ಸೂಪರ್ ಟ್ರೀಸ್ ವಿಶಿಷ್ಟವಾಗಿ ನಿರ್ಮಾಣಗೊಂಡಿವೆ. ಮರ್ಲಯನ್ ಪಾರ್ಕ್ನಲ್ಲಿ ಮೀನಿನ ದೇಹ ಹಾಗೂ ಸಿಂಹದ ಮುಖದಿಂದ ನೀರು ಚಿಮ್ಮುವ ಪ್ರತಿಮೆ ಎಂತವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಸಿಂಗಪುರ ಎಂದರೆ ‘ಸಿಂಹನಗರ’ ಎಂಬುದಕ್ಕೆ ಸಾಕ್ಷಿಯಾಗಿ ಈ ಪ್ರತಿಮೆ ನಿರ್ಮಾಣಗೊಂಡಿದೆ.ಅದರ ಎದುರಿನ ಮರೀನಾ ಬೇ ಸ್ಯಾಂಡ್ಸ್ 679 ಅಡಿ ಎತ್ತರಕ್ಕೆ ನಿರ್ಮಾಣಗೊಂಡಿದ್ದು, ಮೇಲ್ಭಾಗದಲ್ಲಿ ಸ್ಕೈಪಾರ್ಕ್ ಇದೆ. ಇಲ್ಲಿಂದ ಇಡೀ ಸಿಂಗಪುರದ ವಿಹಂಗಮ ನೋಟವನ್ನು ನೋಡುವುದೇ ಒಂದು ವಿಶೇಷ ಅನುಭವ.ಸೆಂಟೋಸಾ ದ್ವೀಪದಲ್ಲಿ ಅನೇಕ ವಿಶೇಷಗಳಿವೆ. ಇಲ್ಲಿಗೆ ರೋಪ್ವೇನಲ್ಲಿ ಪಯಣಿಸುವುದೇ ಒಂದು ವಿಭಿನ್ನ ಅನುಭವ. ಮಕ್ಕಳಿಗೆ ಮುದ ನೀಡುವ ಸಮುದ್ರತೀರ, ಯುನಿವರ್ಸಲ್ ಸ್ಟುಡಿಯೋ, ಓಷನೇರಿಯಂ ಸೇರಿದಂತೆ ಹಲವು ಆಕರ್ಷಣೆಗಳಿವೆ. ಸ್ಕೂಬಾ ಡೈವಿಂಗ್ನಲ್ಲಿ ಸಮುದ್ರದೊಳಗೆ ಪ್ರವೇಶಿಸಿದ ಅನುಭವ ಉಂಟಾಗುತ್ತದೆ. ಅನೇಕ ಅಪರೂಪದ ಮೀನುಗಳು ಹಾಗೂ ಆಮೆಗಳ ಸಂಗ್ರಹ ಇಲ್ಲಿದೆ. ಸಣ್ಣ ಜೆಲ್ಲಿ ಫಿಶ್ನಿಂದ ಹಿಡಿದು ದೊಡ್ಡ ಶಾರ್ಕ್ಗಳು ಹಾಗೂ ಸ್ಟಿಂಗ್ ರೇ ಮೀನುಗಳು ಗಮನ ಸೆಳೆಯುತ್ತವೆ.ಆಹಾರದ ವಿಷಯಕ್ಕೆ ಬಂದರೆ ಮಾಂಸಾಹಾರಿಗಳಿಗೆ ವೈವಿಧ್ಯಮಯ ಖಾದ್ಯಗಳು ಸಿಗುತ್ತವೆ. ಆದರೆ ಸಸ್ಯಾಹಾರಿಗಳಿಗೆ ಕೆಲವೇ ಆಯ್ಕೆಗಳು ಲಭ್ಯ.ಸಿಂಗಪುರದಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿದ್ದು, ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಕ್ಷೇತ್ರಕ್ಕೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.ನನಗೆ ವೈಯಕ್ತಿಕವಾಗಿ ಹೆಚ್ಚು ಮೆಚ್ಚುಗೆಯಾಗಿದ್ದು ಅಲ್ಲಿನ ಗ್ರಂಥಾಲಯ. ಬಹುಮಹಡಿ ಕಟ್ಟಡದಲ್ಲಿರುವ ಈ ಗ್ರಂಥಾಲಯದಲ್ಲಿ ಸುಮಾರು 91 ಲಕ್ಷ ಪುಸ್ತಕಗಳಿದ್ದು, ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲರಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲಿನ ಆರೋಗ್ಯ ಸೇವೆಗಳೂ ಅತ್ಯುತ್ತಮ ಮಟ್ಟದಲ್ಲಿವೆ ಎಂದು ತಿಳಿದುಬಂತು.ಸಿಂಗಪುರ ದೇಶಕ್ಕೆ ಪಾದರ್ಪಣೆ ಮಾಡಿದ್ದು ಹಾಗೂ ಸಿಂಗಪುರಕ್ಕೆ ವಿದಾಯ ಹೇಳಿದ್ದು ಚಾಂಗಿ ವಿಮಾನ ನಿಲ್ದಾಣದ ಮೂಲಕ. ನಾಲ್ಕು ಟರ್ಮಿನಲ್ಗಳನ್ನು ಹೊಂದಿರುವ ಈ ವಿಶ್ವದರ್ಜೆಯ, ಪ್ರಶಸ್ತಿ ವಿಜೇತ ವಿಮಾನ ನಿಲ್ದಾಣದ ಸೌಂದರ್ಯ ವರ್ಣಿಸಲಾಗದು. ಇಲ್ಲಿನ ಜ್ಯುವೆಲ್ ರೇನ್ ವೊರ್ಟೆಕ್ಸ್ನಲ್ಲಿ ಸುಮಾರು 130 ಅಡಿ ಎತ್ತರದಿಂದ ಧುಮ್ಮಿಕ್ಕುವಂತೆ ನಿರ್ಮಿಸಿರುವ ಕೃತಕ ಜಲಪಾತ ಮೈಮನಗಳನ್ನು ಪುಳಕಿತಗೊಳಿಸುತ್ತದೆ.ಒಟ್ಟಿನಲ್ಲಿ, ಆರು ದಿನಗಳ ಕುಟುಂವ ಸಮೇತ ಸಮೇತ ಸಿಂಗಪುರ ದೇಶದ ದರ್ಶನ ಮಾಡಿದ್ದು, ಒಂದು ದೇಶದೊಳಗೆ ಹಲವು ಪ್ರಪಂಚಗಳನ್ನು ಕಂಡ ಅನುಭವವನ್ನು ನೀಡಿತು.ಮೆರ್ಲಯನ್ ಪಾರ್ಕ್ಕೊರಿಯಾದಲ್ಲಿ ಕನ್ನಡದ ಕಂಪು: ಒಂದೂವರೆ ದಶಕದ ಕೊರಿಯಾ ಕನ್ನಡ ಕೂಟದ ಪಯಣ