ಹಾಸನದಲ್ಲಿ ವರುಣನ ಅಬ್ಬರ – ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸಕಲೇಶಪುರ (Sakleshpura) ತಾಲೂಕಿನಲ್ಲಿ ಬಾರಿ ಮಳೆಯಾಗುತ್ತಿದ್ದರೆ ಆಲೂರು, ಬೇಲೂರು, ಹಾಸನದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವ (Rain) ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ (Hemavathi Re

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸಕಲೇಶಪುರ (Sakleshpura) ತಾಲೂಕಿನಲ್ಲಿ ಬಾರಿ ಮಳೆಯಾಗುತ್ತಿದ್ದರೆ ಆಲೂರು, ಬೇಲೂರು, ಹಾಸನದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವ (Rain) ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ (Hemavathi Reservoir) ಒಳಹರಿವು ಹೆಚ್ಚಳವಾಗಿದೆ. ಹಾಸನ ತಾಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಎರಡೇ ದಿನದಲ್ಲಿ 2.042 ಟಿಎಂಸಿ ನೀರು ಹರಿದು ಬಂದಿದೆ. ಹೇಮಾವತಿ ಜಲಾಶಯಕ್ಕೆ 12,859 ಕ್ಯೂಸೆಕ್ ಒಳಹರಿವಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಡ್ಯಾಂನಲ್ಲಿ ಸದ್ಯ 28.022 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆ ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿಗಳಾಗಿದ್ದು, ಸದ್ಯ 2911.75 ಅಡಿಗಳಷ್ಟು ನೀರಿದೆ. ಹೇಮಾವತಿ ನದಿಯಿಂದ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದನ್ನೂ ಓದಿ: ರಾಮನಗರದಲ್ಲಿ ಅದ್ಧೂರಿ ಕರಗ ಮಹೋತ್ಸವ – ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ ಇಕ್ಬಾಲ್ ಹುಸೇನ್