ದೇವರೇ ನೀಡಿರುವ ಬಲವಂತದ ರಜೆ; ಪೆಟ್ಟಾಗಿರುವ ಬಗ್ಗೆ ನಟಿ ರಶ್ಮಿಕಾ ಹೇಳಿದ್ದಿಷ್ಟು..
ಇತ್ತೀಚೆಗೆ ‘ಮೈಸಾ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಹೀಗಾಗಿ 6 ವಾರಗಳವರೆಗೂ ವಿಶ್ರಾಂತಿ ಪಡೆಯಲು ವೈದ್ಯರ ತಂಡ ಸೂಚನೆ ನೀಡಿತ್ತು. ಗಾಯದ ಕಾರಣದಿಂದ ವಿಶ್ರಾಂತಿ ಪಡೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಈ ಕುರಿತು ನಟಿ ರಶ್ಮಿಕಾ ಸಾಮಾಜಿಕ ಮಾಧ್ಯಮ

ಇತ್ತೀಚೆಗೆ ‘ಮೈಸಾ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಹೀಗಾಗಿ 6 ವಾರಗಳವರೆಗೂ ವಿಶ್ರಾಂತಿ ಪಡೆಯಲು ವೈದ್ಯರ ತಂಡ ಸೂಚನೆ ನೀಡಿತ್ತು. ಗಾಯದ ಕಾರಣದಿಂದ ವಿಶ್ರಾಂತಿ ಪಡೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಈ ಕುರಿತು ನಟಿ ರಶ್ಮಿಕಾ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ‘ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ನಾನು ಭಾವಿಸಿದ್ದೆ, ಆದರೆ ಈಗ ಚೇತರಿಸಿಕೊಳ್ಳುತ್ತಿರುವುದಾಗಿ’ ತಿಳಿಸಿದ್ದಾರೆ.ಚಿತ್ರೀಕರಣ ವೇಳೆ ನಟಿ ರಶ್ಮಿಕಾಗೆ ಗಂಭೀರ ಗಾಯ: 6 ವಾರ ವಿಶ್ರಾಂತಿಗೆ ವೈದ್ಯರ ಸೂಚನೆನೀರಿನಾಳದಲ್ಲಿ ಶೂಟಿಂಗ್: ‘ಮೈಸಾ’ಗಾಗಿ ನಟಿ ರಶ್ಮಿಕಾ ಮಂದಣ್ಣ ಹೊಸ ಸಾಹಸ View this post on Instagram ನಟಿ ರಶ್ಮಿಕಾ ಪೋಸ್ಟ್ನಲ್ಲಿ ಹೇಳಿದ್ದೇನು? ‘ಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯ ಯಾರಿಗೂ ತಿಳಿಯಬಾರದು ಎಂದು ಭಾವಿಸಿದ್ದೆ. ಆದರೆ ಚಿತ್ರೀಕರಣದಿಂದ ದೂರವಾಗಿದ್ದಕ್ಕೆ ಕ್ಷಮೆ ಇರಲಿ’ ಎಂದಿದ್ದಾರೆ.‘ಈ ಘಟನೆ ಸಂಭವಿಸಿ ಕೆಲವು ದಿನಗಳಾಗಿವೆ. ಇದು ನನಗೆ ಸತತವಾಗಿ ಆಗುತ್ತಿರುವ 3ನೇ ಗಾಯ. ನನ್ನ ದೇಹವನ್ನು ಕೇವಲ ಒಂದು ಯಂತ್ರದಂತೆ ನೋಡದೆ, ಅದನ್ನೂ ಒಬ್ಬ ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು’ ಎಂದರು. ‘ನನ್ನ ಬಲಗಡೆಯ ಸೊಂಟದ ಸ್ನಾಯು ತುಂಡಾಗಿದೆ. ನಾನು ಕಾಲನ್ನು ಎತ್ತಲು ಆಗುತ್ತಿಲ್ಲ. ಅದು ಮತ್ತೆ ಸರಿಯಾಗಿ ಜೋಡಣೆಯಾಗಬೇಕಿದೆ. ಮೈಸಾ ಸಿನಿಮಾದ ಡ್ಯಾನ್ಸಿಂಗ್ ಚಿತ್ರೀಕರಣದ ವೇಳೆ ಈ ಘಟನೆ ನಡೆಯಿತು. ಇದು ನಾನು ಮಾಡುತ್ತಿರುವ ಅತ್ಯಂತ ಸವಾಲಿನ ಸಿನಿಮಾವಾಗಿದೆ’ ಎಂದಿದ್ದಾರೆ.‘ಆದರೆ ನೀವೇನೂ ಚಿಂತಿಸಬೇಡಿ.. ನೋವಿದೆಯಾದರೂ ತಡೆಯಲಾಗದಷ್ಟು ಏನೂ ಇಲ್ಲ.. ನಾನಾಗಿಯೇ ವಿಶ್ರಾಂತಿ ಪಡೆಯುವುದಿಲ್ಲವೆಂದು ದೇವರೇ ನನಗೆ ಈ ಬಲವಂತದ ವಿರಾಮ ನೀಡಿದ್ದಾನೆ ಎನಿಸುತ್ತಿದೆ. ನನಗೆ ಉಂಟಾದ ಈ ಎಲ್ಲ ಗಾಯಗಳೂ ಆಕಸ್ಮಿಕವಾಗಿ ಸಂಭವಿಸಿವೆ. ಸದ್ಯಕ್ಕೆ ಇದೊಂದು ಬಲವಂತದ ರಜೆ. ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಕಠಿಣವಾಗಿ ವರ್ಕೌಟ್ ಮಾಡುತ್ತಿದ್ದೆ, ಅದು ನನ್ನನ್ನು ಫಿಟ್ ಆಗಿಡುತ್ತಿತ್ತು. ಆದರೆ ಈಗ ಕೆಲವು ದಿನ ವರ್ಕೌಟ್ ಮಾಡಲು ಸಾಧ್ಯವಿಲ್ಲ. ಮತ್ತೇನಾದರೂ ಅಪ್ಡೇಟ್ಗಳಿದ್ದರೆ ಶೀಘ್ರದಲ್ಲೇ ತಿಳಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಅವರ ಈ ಸಕಾರಾತ್ಮಕ ಪೋಸ್ಟ್ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.