ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡ್ತೀವಿ: ಸಿಎಂ ಡಿಕೆಶಿ
– ನಾಳೆಯಿಂದ ಜಿಲ್ಲಾ ಪ್ರವಾಸ ಮಾಡಲು ಸಚಿವರಿಗೆ ತಿಳಿಸಿದ್ದೇವೆ ಎಂದ ಸಿಎಂ ಬೆಂಗಳೂರು: ತಮಿಳುನಾಡಿಗೆ ಮಂಗಳವಾರ 3,000 ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ನೂತನ ಸಚಿವರ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಮಲೆನಾಡು ಭಾಗದಲ್ಲಿ ಮಳೆಯಾಗ್ತಿದೆ. ಕೆಲವು ಭಾಗದಲ್ಲಿ ಭಾರೀ ಮಳೆ, ಅನಾಹುತಗಳು ಆಗಿವೆ. ಎಲ್ಲೆಲ್ಲಿ ಪರಿಹಾರ ಕ

– ನಾಳೆಯಿಂದ ಜಿಲ್ಲಾ ಪ್ರವಾಸ ಮಾಡಲು ಸಚಿವರಿಗೆ ತಿಳಿಸಿದ್ದೇವೆ ಎಂದ ಸಿಎಂ ಬೆಂಗಳೂರು: ತಮಿಳುನಾಡಿಗೆ ಮಂಗಳವಾರ 3,000 ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ನೂತನ ಸಚಿವರ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಮಲೆನಾಡು ಭಾಗದಲ್ಲಿ ಮಳೆಯಾಗ್ತಿದೆ. ಕೆಲವು ಭಾಗದಲ್ಲಿ ಭಾರೀ ಮಳೆ, ಅನಾಹುತಗಳು ಆಗಿವೆ. ಎಲ್ಲೆಲ್ಲಿ ಪರಿಹಾರ ಕೊಡಬೇಕು, ವರದಿ ತರಿಸಿಕೊಂಡು ಮಾಡ್ತೀವಿ ಎಂದರು. ಸಭೆಯಲ್ಲಿ ಎರಡು ಗಂಟೆ ಎಲ್ಲ ಸಚಿವರಿಗೆ ಹೇಳಿದ್ದೇನೆ. ಯರ್ಯಾರಿಗೆ ಏನು ಜವಾಬ್ದಾರಿ ಕೊಡ್ತೀವಿ, ನಿರ್ವಹಿಸಬೇಕು ಅಂದಿದ್ದೇನೆ. ಜಿಲ್ಲೆಗಳಿಗೆ ಭೇಟಿ ಕೊಟ್ಟು ಫೀಲ್ಡ್ ವಿಸಿಟ್ ಮಾಡಲು ಹೇಳಿದ್ದೇನೆ ಎಂದು ತಿಳಿಸಿದರು. ನಾಳೆಯಿಂದ ಜಿಲ್ಲಾ ಪ್ರವಾಸ ಶುರು ಮಾಡಲು ಹೇಳಿದ್ದೇನೆ. ಜಿಲ್ಲಾ ಅಧಿಕಾರಿಗಳು ಕೂಡ ಹೋಗಬೇಕು. ಎಲ್ಲರನ್ನ ಕರೆದುಕೊಂಡು ಹೋಗಬೇಕು. ಬರೀ ಕಾಂಗ್ರೆಸ್ನವರು ಮಾತ್ರವಲ್ಲ, ಆ ಕ್ಷೇತ್ರದ ಜನಪ್ರತಿನಿಧಿಗಳನ್ನ ಕರೆದುಕೊಂಡು ಹೋಗಲು ಸೂಚಿಸಿದ್ದೇನೆ. ಎಲ್ಲರೂ ತಾಳ್ಮೆಯಿಂದ ಇರಿ ಎಂದು ನೂತನ ಸಚಿವರಿಗೆ ತಾಳ್ಮೆಯಿಂದ ಇರುವಂತೆ ಸಿಎಂ ಸೂಚಿಸಿದರು.
Read the complete story at Public TV Kannada