ಮೊದಲು ಹೊರ್ಮುಜ್ ಮುಕ್ತ, ಬಳಿಕ ಇರಾನ್ ಪರಮಾಣು ನಿಶ್ಶಸ್ತ್ರೀಕರಣ: ಟ್ರಂಪ್
ವಾಷಿಂಗ್ಟನ್: 'ಇರಾನ್ ಜೊತೆ ನಡೆಯಲಿರುವ ಮಾತುಕತೆಯ ಮೊದಲ ಹಂತದ ಭಾಗವಾಗಿ 'ಹೊರ್ಮುಜ್ ಜಲಸಂಧಿ'ಯನ್ನು ನಾಳೆಯೊಳಗೆ ಸಂಪೂರ್ಣವಾಗಿ ತೆರೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. 'ಮಾತುಕತೆಯ ಮುಂದಿನ ಹಂತವು ಇರಾನ್ ಪರಮಾಣು ನಿಶ್ಶಸ್ತ್ರೀಕರಣದ ಮೇಲೆ ಕೇಂದ್ರೀಕೃತವಾಗಿರಲಿದೆ' ಎಂದು ಅವರು ಸ್ಪಷ್ಟಪಡಿಸಿದ್

ವಾಷಿಂಗ್ಟನ್: 'ಇರಾನ್ ಜೊತೆ ನಡೆಯಲಿರುವ ಮಾತುಕತೆಯ ಮೊದಲ ಹಂತದ ಭಾಗವಾಗಿ 'ಹೊರ್ಮುಜ್ ಜಲಸಂಧಿ'ಯನ್ನು ನಾಳೆಯೊಳಗೆ ಸಂಪೂರ್ಣವಾಗಿ ತೆರೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. 'ಮಾತುಕತೆಯ ಮುಂದಿನ ಹಂತವು ಇರಾನ್ ಪರಮಾಣು ನಿಶ್ಶಸ್ತ್ರೀಕರಣದ ಮೇಲೆ ಕೇಂದ್ರೀಕೃತವಾಗಿರಲಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ' ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.'ಇರಾನ್ಗೆ ಒಪ್ಪಂದಕ್ಕೆ ಬರಲು ಇದು ಕೊನೆಯ ಅವಕಾಶವಾಗಿದೆ. ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಸ್ವತಃ ಇರಾನ್ ವಿನಂತಿಸಿದ್ದರಿಂದ ಅಮೆರಿಕ ಯೋಜಿಸಿದ್ದ ಬೃಹತ್ ಸೇನಾ ದಾಳಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ' ಎಂದಿದ್ದಾರೆ.ಮತ್ತೊಂದೆಡೆ ಅಮೆರಿಕದ ವಾದವನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ. ಅಮೆರಿಕದೊಂದಿಗೆ ಯಾವುದೇ ನೇರ ಅಥವಾ ಪರೋಕ್ಷ ಮಾತುಕತೆ ನಡೆಯುತ್ತಿಲ್ಲ ಎಂದಿದೆ.VIDEO | Washington DC: US President Donald Trump says, "We are talking right now, at the request of Iran, backed by Saudi Arabia, backed by the UAE, and backed by Qatar in particular, but others also. Many countries called... this is the last chance for them to sign a good… pic.twitter.com/JOHaURc59u— Press Trust of India (@PTI_News) August 3, 2026 ಇರಾನ್ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ: ಟ್ರಂಪ್ ಘೋಷಣೆಗಾಜಾದಲ್ಲಿ ಸಂಪೂರ್ಣ ನಿಶಸ್ತ್ರೀಕರಣ, ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ