ತಕ್ಷಣವೇ ಬನ್ನಿ: ಇರಾನ್ ವಿದೇಶಾಂಗ ಸಚಿವರಿಗೆ ಪಾಕ್ ಆಹ್ವಾನ
ಲಾಹೋರ್: ‘ತಕ್ಷಣವೇ ಪಾಕಿಸ್ತಾನಕ್ಕೆ ಬನ್ನಿ’ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಿಗೆ ಪಾಕ್ನ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಆಹ್ವಾನ ನೀಡಿದ್ದಾರೆ.ಪಶ್ಚಿಮ ಏಷ್ಯಾ ಯುದ್ಧ ನಿಲ್ಲಿಸಲು ಇರಾನ್, ಅಮೆರಿಕ ನಡುವೆ ಮಾತುಕತೆ ಚುರುಕುಗೊಳಿಸುವ ಉದ್ದೇಶದಿಂದ ಈ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾ

ಲಾಹೋರ್: ‘ತಕ್ಷಣವೇ ಪಾಕಿಸ್ತಾನಕ್ಕೆ ಬನ್ನಿ’ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಿಗೆ ಪಾಕ್ನ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಆಹ್ವಾನ ನೀಡಿದ್ದಾರೆ.ಪಶ್ಚಿಮ ಏಷ್ಯಾ ಯುದ್ಧ ನಿಲ್ಲಿಸಲು ಇರಾನ್, ಅಮೆರಿಕ ನಡುವೆ ಮಾತುಕತೆ ಚುರುಕುಗೊಳಿಸುವ ಉದ್ದೇಶದಿಂದ ಈ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಅವರನ್ನೂ ಪಾಕಿಸ್ತಾನದ ಸಂಸತ್ತಿನ ಸ್ಪೀಕರ್ ಅಯಾಜ್ ಸಾದಿಕ್ ಅವರು ಪಾಕ್ಗೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಪಾಕ್ನ ವಿದೇಶಾಂಗ ಸಚಿವಾಲಯ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಕುರಿತು ಇರಾನ್ ಪ್ರತಿಕ್ರಿಯೆ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
Read the complete story at Prajavani