ಬಿಜೆಪಿ ಸೋಲಿಗೆ ‘ಜೆನ್ ಝೀ’ ಪ್ರತಿಭಟನೆಯೂ ಕಾರಣವಿರಬಹುದು: ಪ್ರಶಾಂತ್ ಕಿಶೋರ್
ಪಟ್ನಾ: ಬಾಂಕೀಪುರ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳ ಅಸಮಾಧಾನಿತ ಬೆಂಬಲಿಗರು ಹಾಗೂ ಜೆನ್ ಝೀ ಯುವಕರ ಪ್ರತಿಭಟನೆಗಳು ಪ್ರಮುಖ ಕಾರಣ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಬಿಜೆಪಿಯ ನೀರಜ್ ಸಿನ್ಹಾ ಅವರನ್ನು 19,324 ಮತಗಳ ಅಂತರದಿಂ

ಪಟ್ನಾ: ಬಾಂಕೀಪುರ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳ ಅಸಮಾಧಾನಿತ ಬೆಂಬಲಿಗರು ಹಾಗೂ ಜೆನ್ ಝೀ ಯುವಕರ ಪ್ರತಿಭಟನೆಗಳು ಪ್ರಮುಖ ಕಾರಣ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಬಿಜೆಪಿಯ ನೀರಜ್ ಸಿನ್ಹಾ ಅವರನ್ನು 19,324 ಮತಗಳ ಅಂತರದಿಂದ ಸೋಲಿಸಿದ್ದಾರೆ.ಈ ಬಳಿಕ ಮಾತನಾಡಿದ ಅವರು, ಬಿಜೆಪಿಯ ಭದ್ರಕೋಟೆಯಾಗಿದ್ದ ಬಾಂಕೀಪುರ ಕ್ಷೇತ್ರದಲ್ಲಿನ ಗೆಲುವು ಜನಾದೇಶವಾಗಿದೆ. ಇದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ವಿರುದ್ಧದ ಆಕ್ರೋಶವಾಗಿದೆ ಎಂದು ಬಣ್ಣಿಸಿದ್ದಾರೆ.ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಹಾರದ ಜನರೊಂದಿಗೆ ಮಾತ್ರ ನಮ್ಮ ಮೈತ್ರಿ ಎಂದು ಎಂದು ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ.ಈ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇತ್ತೀಚೆಗೆ ನಡೆದ ಜೆನ್ ಝೀ ಯುವಕರ ಪ್ರತಿಭಟನೆಯು ಈ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಂಕೀಪುರ ಉಪಚುನಾವಣೆ ಫಲಿತಾಂಶದ ಕುರಿತು ಆತ್ಮಾವಲೋಕನ: ನಿತಿನ್ ನವೀನ್