ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ
ನವದೆಹಲಿ: ಒಲಿಂಪಿಯನ್ ನೀರಜ್ ಚೋಪ್ರಾ ಅವರು ಇದೇ 21ರಂದು ಲೂಸಾನ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಅಥ್ಲೆಟಿಕ್ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಈಚೆಗೆ ನಡೆದ ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಬೆಳ್ಳಿ ಪದಕ ಗಳಿಸಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಶ್ರೀಲಂಕಾದ ರುಮೇಶ್ ಪಥಿರಗೆ ಅವರು ಇಲ್ಲಿಯೂ ಕಣಕ್ಕಿಳಿಯುವರು. ಕಾಮನ್ವೆಲ್ತ್ ಕೂಟದಲ್ಲ

ನವದೆಹಲಿ: ಒಲಿಂಪಿಯನ್ ನೀರಜ್ ಚೋಪ್ರಾ ಅವರು ಇದೇ 21ರಂದು ಲೂಸಾನ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಅಥ್ಲೆಟಿಕ್ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಈಚೆಗೆ ನಡೆದ ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಬೆಳ್ಳಿ ಪದಕ ಗಳಿಸಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಶ್ರೀಲಂಕಾದ ರುಮೇಶ್ ಪಥಿರಗೆ ಅವರು ಇಲ್ಲಿಯೂ ಕಣಕ್ಕಿಳಿಯುವರು. ಕಾಮನ್ವೆಲ್ತ್ ಕೂಟದಲ್ಲಿ ರುಮೇಶ್ ಚಿನ್ನದ ಪದಕ ಗೆದ್ದಿದ್ದರು. ಡೈಮಂಡ್ ಲೀಗ್ನಲ್ಲಿ ಐವರು ಸ್ಪರ್ಧಿಗಳು ಇರುವರು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಜೆಕ್ ಗಣರಾಜ್ಯದ ಯಾಕೂಬ್ ವಾಡ್ಲೆಚ್, ಜರ್ಮನಿಯ ಜೂಲಿಯನ್ ವೇಬರ್, ಸ್ವಿಟ್ಜರ್ಲೆಂಡ್ನ ಸಿಮೊನ್ ವೀಲ್ಯಾಂಡ್ ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ ಅವರು ಕೂಡ ಸ್ಪರ್ಧಿಸುವರು. ‘ಕಳೆದ ನಾಲ್ಕು ಒಲಿಂಪಿಕ್ಸ್ ಹಾಗೂ ವಿಶ್ವಕಪ್ ಕೂಟಗಳಲ್ಲಿ ಪದಕಗಳನ್ನು ಗೆದ್ದಿರುವ ಐವರು ತಾರೆಯರು ಇಲ್ಲಿ ಪೈಪೋಟಿ ನಡೆಸುವರು. ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ನೀರಜ್ ಅವರು ಭಾಗವಹಿಸುತ್ತಿರುವ ಮೂರನೇ ಪ್ರಮುಖ ಕೂಟ ಇದಾಗಲಿದೆ. 28 ವರ್ಷದ ನೀರಜ್ ಅವರು ಜೂನ್ನಲ್ಲಿ ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್ನಲ್ಲಿ 85.69 ಮೀಟರ್ಸ್ ಸಾಧನೆ ಮಾಡಿದರು. ಗ್ಲಾಸ್ಗೊ ಕಾಮನ್ವೆಲ್ತ್ ಕೂಟದಲ್ಲಿ ಅವರು 85.83 ಮೀಟರ್ಸ್ ದೂರ ಜಾವೆಲಿನ್ ಥ್ರೋ ಮಾಡಿ ಬೆಳ್ಳಿ ಜಯಿಸಿದ್ದರು. ಎರಡು ವರ್ಷಗಳ ಹಿಂದೆ ಲೂಸಾನ್ನಲ್ಲಿ ನಡೆದಿದ್ದ ಡೈಮಂಡ್ ಲೀಗ್ನಲ್ಲಿ ಚೋಪ್ರಾ ರನ್ನರ್ ಅಪ್ ಆಗಿದ್ದರು. ತಮ್ಮ ವೃತ್ತಿಜೀವನದ ನಾಲ್ಕನೇ ಶ್ರೇಷ್ಠ ಥ್ರೋ (89.49 ಮೀ) ದಾಖಲಿಸಿದ್ದರು.