ಸಂಪುಟ ವಿಸ್ತರಣೆ: ಅಸಮಾಧಾನ ಸ್ಫೋಟ, ಶಾಸಕರ ರಾಜೀನಾಮೆ ಬೆದರಿಕೆ
ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೆ, ‘ಕೈ’ ಪಾಳಯದಲ್ಲಿ ಅಸಮಾಧಾನದ ಬಿರುಗಾಳಿ ಎದ್ದಿದೆ. ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರ, ಅವರ ಬೆಂಬಲಿಗರ ಆಕ್ರೋಶ ಸ್ಫೋಟಗೊಂಡಿದೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದು ಸರಿಯಾಗಿ ಎರಡು ತಿಂಗಳ ಬಳಿಕ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಆಗಿದೆ. ಲೋಕಭವನದ ಗಾಜ

ಬೆಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೆ, ‘ಕೈ’ ಪಾಳಯದಲ್ಲಿ ಅಸಮಾಧಾನದ ಬಿರುಗಾಳಿ ಎದ್ದಿದೆ. ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರ, ಅವರ ಬೆಂಬಲಿಗರ ಆಕ್ರೋಶ ಸ್ಫೋಟಗೊಂಡಿದೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದು ಸರಿಯಾಗಿ ಎರಡು ತಿಂಗಳ ಬಳಿಕ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಆಗಿದೆ. ಲೋಕಭವನದ ಗಾಜಿನ ಮನೆಯಲ್ಲಿ 19 ಶಾಸಕರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸೋಮವಾರ ಸಂಜೆ ಪ್ರಮಾಣ ವಚನ ಬೋಧಿಸಿದರು.ಸಂಪುಟ ಸೇರಲಿರುವ ಶಾಸಕರ ಪಟ್ಟಿ ಸೋಮವಾರ ಬೆಳಿಗ್ಗೆ ಬಹಿರಂಗವಾಗುತ್ತಿದ್ದಂತೆಯೇ ಪಟ್ಟಿಯಲ್ಲಿ ಹೆಸರು ಇಲ್ಲದ ಸಚಿವ ಸ್ಥಾನ ಆಕಾಂಕ್ಷಿಗಳು ಆಕ್ರೋಶವನ್ನು ಹೊರಹಾಕಿದ್ದಾರೆ. ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ನಾಲ್ಕೈದು ಶಾಸಕರು ಮಂಗಳವಾರ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಂಡಾಯ ತೀವ್ರಗೊಳ್ಳುವ ಲಕ್ಷಣ ಕಾಣಿಸಿದೆ.ಪಟ್ಟಿ ಅದಲು–ಬದಲುಮೊದಲು ಬಿಡುಗಡೆ ಮಾಡಿದ್ದ 20 ಶಾಸಕರ ಪಟ್ಟಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಹೆಸರು ಇರಲಿಲ್ಲ. ಆದರೆ, ಕೆಲವೇ ಹೊತ್ತಿನಲ್ಲಿ ಪಟ್ಟಿಯಲ್ಲಿದ್ದ ಮಂಕಾಳ ವೈದ್ಯ ಹೆಸರನ್ನು ಕೈಬಿಟ್ಟು, ಮಲ್ಲಿಕಾರ್ಜುನ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿ ಹೊಸ ಪಟ್ಟಿ ರವಾನಿಸಿತ್ತು. ಇನ್ನು ಪಟ್ಟಿಯಲ್ಲಿದ್ದ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೆಸರನ್ನು ಸಚಿವರಾಗಿ ಪ್ರಮಾಣವಚನಕ್ಕೆ ಲೋಕಭವನಕ್ಕೆ ಕಳುಹಿಸಿದ್ದ ಪಟ್ಟಿಯಿಂದ ಹೊರಗಿಡಲಾಯಿತು.ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ರಾಜೀನಾಮೆಯ ಅಸ್ತ್ರ ಪ್ರಯೋಗಿಸಲು ಕೆಲವು ಶಾಸಕರು ಮುಂದಾಗಿರುವುದು ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ಗೆ ಹೊಸ ಸವಾಲಾಗಿದೆ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವೆಂದು ಗೊತ್ತಾಗುತ್ತಿದ್ದಂತೆಯೇ ಸಿಡಿಮಿಡಿಗೊಂಡ ಯಶವಂತರಾಯಗೌಡ ಪಾಟೀಲ, ಹಂಗಾಮಿ ಸಭಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.ಬೇಳೂರು ಗೋಪಾಲಕೃಷ್ಣ, ಟಿ.ಬಿ. ಜಯಚಂದ್ರ, ಬಿ.ಕೆ. ಸಂಗಮೇಶ್ವರ, ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದು, ಮಂಗಳವಾರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಇನ್ನು ಪ್ರಸಾದ್ ಅಬ್ಬಯ್ಯ, ಬಸವರಾಜ ಶಿವಣ್ಣನವರ, ತನ್ವೀರ್ ಸೇಠ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ ಸೇರಿದಂತೆ ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿ.ಬಿ. ಜಯಚಂದ್ರ ನಿವಾಸದಲ್ಲಿ ಒಂದಾದ ಅಪ್ಪಾಜಿ ನಾಡಗೌಡ, ಎನ್.ವೈ. ಗೋಪಾಲಕೃಷ್ಣ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.ವಿವಿಧೆಡೆ ಪ್ರತಿಭಟನೆ: ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಆಕ್ರೋಶಗೊಂಡ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದನ್ನು ಕಂಡು ರೊಚ್ಚಿಗೆದ್ದ ಬೆಂಬಲಿಗರು ರಸ್ತೆತಡೆ ನಡೆಸಿದರು. ಸೇಠ್ ಅಭಿಮಾನಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ಹಿರೇಬಾಗೇವಾಡಿಯ ಟೋಲ್ ನಾಕಾ ಮತ್ತು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆದರು. ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಬೆಂಬಲಿಗರು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಕಲ್ಲು ತೂರಿದರು.ವಿಜಯನಗರದಲ್ಲಿ ಎಂ. ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪಕ್ಷದ ಪದಾಧಿಕಾರಿಗಳು ಹುದ್ದೆಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವುದಾಗಿ ಬೆದರಿಕೆ ಹಾಕಿದರು.ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಬೆಂಬಲಿಗರೂ ಪ್ರತಿಭಟನೆ ನಡೆಸಿದರು. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಬೆಂಬಲಿಗರು ಟೈರ್ಗಳನ್ನು ಸುಟ್ಟು ತಮ್ಮ ನಾಯಕನ ಪರ ಘೋಷಣೆ ಕೂಗಿದರು. ಅಲ್ಲದೆ, ಬುಧವಾರ (ಆ. 5) ಬಾಗೇಪಲ್ಲಿ ಬಂದ್ಗೆ ಕರೆ ನೀಡಿದ್ದಾರೆ.ಮಹಿಳೆಯರಿಲ್ಲದ ಮೊದಲ ‘ಸಂಪುಟ’ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಮಹಿಳೆಗೂ ಅವಕಾಶ ನೀಡದ ಸಚಿವ ಸಂಪುಟ ಇದಾಗಿದೆ. ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ನಾಲ್ವರು ಮಹಿಳೆಯರಿಗೆ ಅವಕಾಶ ಸಿಕ್ಕಿತ್ತು. ಆ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಸರ್ಕಾರದಲ್ಲಿ ಕನಿಷ್ಠ ಒಬ್ಬರಾದರೂ ಮಹಿಳೆಯರು ಇರುತ್ತಿದ್ದರು. ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ವಾಧ್ರಾ ಮುನ್ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಒಬ್ಬರಿಗೂ ಪ್ರಾತಿನಿಧ್ಯ ನೀಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡರ ಹೆಸರಿತ್ತಾದರೂ ಅವರ ಪ್ರಮಾಣವಚನ ಸ್ವೀಕಾರಕ್ಕೆ ಕೊನೆಗಳಿಗೆಯಲ್ಲಿ ತಡೆಬಿದ್ದಿದೆ. ಹೀಗಾಗಿ, 34 ಸದಸ್ಯ ಬಲದ ಸಚಿವ ಸಂಪುಟದಲ್ಲಿ 33 ಸ್ಥಾನ ಭರ್ತಿಯಾಗಿದ್ದರೂ ಮತದಾರರಲ್ಲಿ ಶೇ 50ರಷ್ಟಿರುವ ಮಹಿಳಾ ಸಮುದಾಯಕ್ಕೆ ಕಾಂಗ್ರೆಸ್ ಆದ್ಯತೆಯನ್ನೇ ನೀಡಿಲ್ಲದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯ ಅಸಮಾಧಾನಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗದ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದರಾಮಯ್ಯನವರು ತಮ್ಮ ನಿವಾಸ ‘ಕಾವೇರಿ’ಯಲ್ಲೇ ಉಳಿದುಕೊಂಡಿದ್ದರು.‘ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೆಸರನ್ನು ಕೈಬಿಟ್ಟು, ತಮ್ಮ ಸಮುದಾಯದ ಗಾಯತ್ರಿ ಶಾಂತೇಗೌಡರ ಹೆಸರನ್ನು ಕೊನೆಗಳಿಗೆಯಲ್ಲಿ ಸೇರಿಸಿರುವುದು’ ಅವರ ಅಸಮಾಧಾನಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.ಮರು ಮತ ಎಣಿಕೆಯಲ್ಲಿ ಗೆದ್ದಿದ್ದ ಗಾಯತ್ರಿ ಅವರು, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಉಪ ಸಭಾಪತಿ ಹುದ್ದೆ ಕೊಡಿಸುವಂತೆ ಬೇಡಿಕೆ ಇಟ್ಟಿದ್ದರು. ಆ ಲೆಕ್ಕಾಚಾರದಲ್ಲಿಯೇ ಸಿದ್ದರಾಮಯ್ಯ ಇದ್ದರು. ಆದರೆ, ಬೆಳಿಗ್ಗೆ ಸಚಿವರ ಪಟ್ಟಿ ಬರುತ್ತಿದ್ದಂತೆ ಸಿದ್ದರಾಮಯ್ಯ ಅಸಮಾಧಾನಗೊಂಡರು. ಪರಿಷತ್ತಿನಿಂದ ತಮ್ಮ ಪುತ್ರ ಯತೀಂದ್ರ ಸಚಿವರಾಗಿದ್ದು, ಪರಿಷತ್ತಿನಿಂದ ಗಾಯತ್ರಿ ಅವರನ್ನು ಸಚಿವರಾಗಿ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ಪ್ರಕ್ರಿಯೆಗೆ ತಡೆ ಒಡ್ಡಿದರು ಎಂದು ಗೊತ್ತಾಗಿದೆ.ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವರಾಗುವುದನ್ನು ತಡೆಯಲು ಅವರ ಬದಲಿಗೆ ಗಾಯತ್ರಿ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವುದರ ಹಿಂದಿರುವ ಲೆಕ್ಕಾಚಾರದ ಬಗ್ಗೆ ಸಿದ್ದರಾಮಯ್ಯ ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ. ಪ್ರಮಾಣವಚನ ಸ್ವೀಕರಿಸಿದವರುಪಿ.ಎಂ.ನರೇಂದ್ರಸ್ವಾಮಿಶಿವರಾಜ ತಂಗಡಗಿರುದ್ರಪ್ಪ ಲಮಾಣಿಕೆ.ಎಸ್. ಬಸವಂತಪ್ಪಬಿ. ನಾಗೇಂದ್ರಟಿ. ರಘುಮೂರ್ತಿಜಮೀರ್ ಅಹಮದ್ ಖಾನ್ರಿಜ್ವಾನ್ ಅರ್ಷದ್ಸಂತೋಷ್ ಲಾಡ್ಮಧು ಬಂಗಾರಪ್ಪಪುಟ್ಟರಂಗಶೆಟ್ಟಿಎಸ್.ಎಸ್. ಮಲ್ಲಿಕಾರ್ಜುನಅಜಯ್ ಸಿಂಗ್ಎನ್. ಚಲುವರಾಯಸ್ವಾಮಿಕೆ.ಎಂ. ಶಿವಲಿಂಗೇಗೌಡಎಚ್.ಸಿ. ಬಾಲಕೃಷ್ಣಬಸವರಾಜ ರಾಯರಡ್ಡಿವಿಜಯಾನಂದ ಕಾಶಪ್ಪನವರ್ಲಕ್ಷ್ಮಣ ಸವದಿ