ಕುಟುಂಬಗಳ ಉಳಿತಾಯ ಹೆಚ್ಚಳ: ಕೇಂದ್ರ
ನವದೆಹಲಿ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಜೊತೆ ಹೋಲಿಸಿದರೆ ದೇಶದ ಕುಟುಂಬಗಳ ಉಳಿತಾಯದ ಪ್ರಮಾಣವು 2024–25ರಲ್ಲಿ ಶೇ 21.7ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ತಿಳಿಸಿದೆ. ಈ ಪ್ರಮಾಣವು 2022–23ರಲ್ಲಿ ಶೇ 20ರ ಮಟ್ಟದಲ್ಲಿತ್ತು.ಜನರ ಆದಾಯದ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಕೈಗೊಂಡ ಕ್ರಮಗಳಿಂದಾಗಿ
ನವದೆಹಲಿ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಜೊತೆ ಹೋಲಿಸಿದರೆ ದೇಶದ ಕುಟುಂಬಗಳ ಉಳಿತಾಯದ ಪ್ರಮಾಣವು 2024–25ರಲ್ಲಿ ಶೇ 21.7ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ತಿಳಿಸಿದೆ. ಈ ಪ್ರಮಾಣವು 2022–23ರಲ್ಲಿ ಶೇ 20ರ ಮಟ್ಟದಲ್ಲಿತ್ತು.ಜನರ ಆದಾಯದ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಕೈಗೊಂಡ ಕ್ರಮಗಳಿಂದಾಗಿ ಹೀಗಾಗಿದೆ ಎಂದು ಸರ್ಕಾರ ತಿಳಿಸಿದೆ.‘ಜಿಡಿಪಿ ಅಂದಾಜಿಸಲು ಬಳಕೆಯಾಗುವ ಹೊಸ ಸರಣಿಯ ಪ್ರಕಾರ, ಕುಟುಂಬಗಳ ಉಳಿತಾಯದ ಮೊತ್ತವು 2022–23ರಲ್ಲಿ ₹52.25 ಲಕ್ಷ ಕೋಟಿ ಇದ್ದಿದ್ದು, 2024–25ರಲ್ಲಿ ₹69.01 ಲಕ್ಷ ಕೋಟಿಗೆ ಹೆಚ್ಚಳ ಕಂಡಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಆದಾಯ ತೆರಿಗೆ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸಿರುವುದರ ಪರಿಣಾಮವಾಗಿ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಿದೆ, ಉಳಿತಾಯವನ್ನು ಹೆಚ್ಚು ಮಾಡಿದೆ ಹಾಗೂ ಆಸ್ತಿ ಸೃಷ್ಟಿಸಲು ನೆರವಾಗಿದೆ ಎಂದು ಸಚಿವರು ಹೇಳಿದ್ದಾರೆ. ಜಿಎಸ್ಟಿ ದರ ಪರಿಷ್ಕರಣೆ ಕ್ರಮವು ಅತಿಸಣ್ಣ ಹಾಗೂ ಸಣ್ಣ ಪ್ರಮಾಣದ ಉದ್ದಿಮೆಗಳ ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ, ಈ ಮೂಲಕ ಆ ವರ್ಗದ ಉದ್ದಿಮೆಗಳ ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.