ದಿನೇಶ್ ಗುಂಡೂರಾವ್ಗೆ ಕೈತಪ್ಪಿದ ಸಚಿವ ಸ್ಥಾನ – ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು
– ಎಂ ಕೃಷ್ಣಪ್ಪ, ಪ್ರಿಯಕೃಷ್ಣ ಬೆಂಬಲಿಗರಿಂದಲೂ ಪ್ರತಿಭಟನೆ ಬೆಂಗಳೂರು: ಡಿಕೆ ಶಿವಕುಮಾರ್ ಸಂಪುಟದಲ್ಲಿ (DK Shivakumar Cabinet) ದಿನೇಶ್ ಗುಂಡೂರಾವ್ಗೆ (Dinesh Gundu Rao) ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗಾಂಧಿನಗರ ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಕೆಪಿಸಿಸಿ ಕಚೇರಿಗೆ (KPCC Office) ಮುತ್ತಿಗೆ ಹಾಕಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ದಿನೇಶ

– ಎಂ ಕೃಷ್ಣಪ್ಪ, ಪ್ರಿಯಕೃಷ್ಣ ಬೆಂಬಲಿಗರಿಂದಲೂ ಪ್ರತಿಭಟನೆ ಬೆಂಗಳೂರು: ಡಿಕೆ ಶಿವಕುಮಾರ್ ಸಂಪುಟದಲ್ಲಿ (DK Shivakumar Cabinet) ದಿನೇಶ್ ಗುಂಡೂರಾವ್ಗೆ (Dinesh Gundu Rao) ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗಾಂಧಿನಗರ ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಕೆಪಿಸಿಸಿ ಕಚೇರಿಗೆ (KPCC Office) ಮುತ್ತಿಗೆ ಹಾಕಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ದಿನೇಶ್ ಗುಂಡೂರಾವ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. `ಜಸ್ಟೀಸ್ ಫಾರ್ ಲಾಯಲ್ಟಿ’ ಬೋರ್ಡ್ನಿಂದ ಬಂದಿರುವ ಗಾಂಧಿನಗರ ಕಾರ್ಯಕರ್ತರು ಅವಕಾಶ ನೀಡದ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ದಿನೇಶ್ ಗುಂಡೂರಾವ್ ಅಭಿಮಾನಿಗಳು ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್ ಅರೆಸ್ಟ್ ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ಕೂಡಲೇ ಸಚಿವ ಸ್ಥಾನ ಘೋಷಣೆ ಮಾಡಿ, ಇಲ್ಲ ನಮ್ಮ ರಾಜೀನಾಮೆಯನ್ನು ಪಡೆಯಿರಿ. ಸಚಿವ ಸ್ಥಾನ ಕೊಡಲ್ಲ ಅಂತ ಮೊದಲೇ ಹೇಳಬೇಕಿತ್ತು. ಯಾವ ಕಪ್ಪು ಚುಕ್ಕೆ ಇದೆ. ಪಾರದರ್ಶಕ ಆಡಳಿತ ನೀಡಿದ್ರು ಅನ್ಯಾಯ ಯಾಕೆ? ಎಂದು ಘೋಷಣೆ ಕೂಗಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬ್ಯಾರಿಕೇಡ್ ಹಾರಿ ಕಚೇರಿಗೆ ಕಾರ್ಯಕರ್ತರು ನುಗ್ಗಿದ್ದಾರೆ. ಕಚೇರಿಗೆ ಏಕಾಏಕಿ ಕಾರ್ಯಕರ್ತರು ನುಗ್ಗಿದ ಪರಿಣಾಮ ತಳ್ಳಾಟ ನಡೆದಿದೆ. ಇದನ್ನೂ ಓದಿ: ಪಾಕ್ನಲ್ಲಿ ಅನಾಮಿಕ ವ್ಯಕ್ತಿಯ ಗುಂಡೇಟಿಗೆ 30ಕ್ಕೂ ಹೆಚ್ಚು ಉಗ್ರರ ಹತ್ಯೆ – ಒಪ್ಪಿಕೊಂಡ ಲಷ್ಕರ್ ಉಗ್ರ ಇನ್ನು ಅರ್ಚಕರ ಸಂಘದವರೂ ದಿನೇಶ್ ಗುಂಡೂರಾವ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಬಾರಿ ಒಂದೇ ಒಂದು ಸ್ಥಾನ ಬ್ರಾಹ್ಮಣ ಸಮುದಾಯಕ್ಕೆ ಕೊಟ್ಟಿಲ್ಲ. ಯಾರಾದ್ರು ಒಬ್ಬ ಶಾಸಕರಿಗಾದರೂ ಅವಕಾಶ ಕೊಡಬೇಕಿತ್ತು. ಇದರಿಂದ ಸಮುದಾಯಕ್ಕೆ ಬೇಸರ ಆಗಿದೆ. ಇದೇ ಕಾರಣಕ್ಕೆ ಇಂದು ಕೆಪಿಸಿಸಿ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಮನವಿ ಸಲ್ಲಿಸಲು ಬಂದಿದ್ದೇವೆ. `ಬೇಕೆ ಬೇಕು ನ್ಯಾಯ ಬೇಕು, ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡಿ’ ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯರಿಗೂ ಅಸಮಾಧಾನ ಇದೆ: ರಾಜೇಂದ್ರ ರಾಜಣ್ಣ ಇನ್ನು ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಎಂ.ಕೃಷ್ಣಪ್ಪ ಅಭಿಮಾನಿಗಳು ಕೂಡ ಕೆಪಿಸಿಸಿ ಮುಂಭಾಗ ಜಮಾಯಿಸಿದ್ದಾರೆ. ಕೆಲ ವಿಜಯನಗರ ಭಾಗದ ಬೆಂಬಲಿಗರು ಹಾಗೂ ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಬೆಂಬಲಿಗರು ಆಗಮಿಸಿ ಧರಣಿ ನಡೆಸುತ್ತಿದ್ದಾರೆ. ಬ್ಲಾಕ್ ಅಧ್ಯಕ್ಷರು ಕಪ್ಪು ಪಟ್ಟಿ ಧರಿಸಿ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಸರಣಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಶಾಲೆಯ ಒಳಗಡೆ 30 ಸೆಕೆಂಡ್ನಲ್ಲಿ 34 ಬಾರಿ ಶಿಕ್ಷಕಿಯನ್ನು ಇರಿದು ಕೊಂದ