ಇತಿಹಾಸ ಪ್ರಸಿದ್ಧ ತಾಜ್ ಮಹಲ್ನಲ್ಲಿ 'ಗಂಗಾ ಜಲಾಭಿಷೇಕ'ಕ್ಕೆ ಹಿಂದೂ ಮಹಾಸಭಾ ಯತ್ನ!
ಆಗ್ರಾ (ಉತ್ತರ ಪ್ರದೇಶ): ಶ್ರಾವಣ ಮಾಸದ ಮೊದಲ ಸೋಮವಾರದಂದು ಇತಿಹಾಸ ಪ್ರಸಿದ್ಧ ತಾಜ್ ಮಹಲ್ನಲ್ಲಿ ‘ಗಂಗಾ ಜಲಾಭಿಷೇಕ’ ಮಾಡಲು ಮುಂದಾಗಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪದಾಧಿಕಾರಿಗಳ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಹಿಂದೂ ಮಹಾಸಭಾ ಆಗ್ರಾ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ನೇತೃತ್ವದ ಸದಸ್ಯರು ಹಾಗೂ ಬೆಳಿಗ್ಗೆ 7

ಆಗ್ರಾ (ಉತ್ತರ ಪ್ರದೇಶ): ಶ್ರಾವಣ ಮಾಸದ ಮೊದಲ ಸೋಮವಾರದಂದು ಇತಿಹಾಸ ಪ್ರಸಿದ್ಧ ತಾಜ್ ಮಹಲ್ನಲ್ಲಿ ‘ಗಂಗಾ ಜಲಾಭಿಷೇಕ’ ಮಾಡಲು ಮುಂದಾಗಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪದಾಧಿಕಾರಿಗಳ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಹಿಂದೂ ಮಹಾಸಭಾ ಆಗ್ರಾ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ನೇತೃತ್ವದ ಸದಸ್ಯರು ಹಾಗೂ ಬೆಳಿಗ್ಗೆ 7 ಗಂಟೆ ಸುಮಾರಿಗೆ ಗಂಗಾಜಲದೊಂದಿಗೆ ತಾಜ್ಮಹಲ್ಗೆ ಆಗಮಿಸಿದ್ದರು.ಪಶ್ಚಿಮ ದ್ವಾರದ ಬಳಿ ಪೊಲೀಸರು ಅವರನ್ನು ತಡೆದಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.ಬಳಿಕ ಪೊಲೀಸ್ ಭದ್ರತೆಯಲ್ಲಿ ಕನ್ವಾರಿಗಳನ್ನು ರಾಜೇಶ್ವರ ಮಹಾದೇವ ದೇವಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಗಂಗಾಜಲದಿಂದ ಜಲಾಭಿಷೇಕ ನೆರವೇರಿಸಿದರು ಎಂದು ತಾಜ್ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.ಮುಂದಿನ ಮೂರು ವಾರವೂ ಶಿವ ದೇವರಿಗೆ ಜಲಾಭಿಷೇಕ ಮಾಡುವ ಪ್ರಯತ್ನ ಮುಂದುವರಿಯಲಿದೆ ಎಂದು ಮೀರಾ ಪ್ರತಿಕ್ರಿಯಿಸಿದ್ದಾರೆ.ತಾಜ್ ಮಹಲ್ ರಕ್ಷಣೆಗೆ 10 ವರ್ಷಗಳ ಹೋರಾಟ: ಮೆಹ್ತಾ ನಮ್ಮ ನಡುವಿನ ಪರಿಸರವಾದಿ ವಕೀಲಅಫ್ಗಾನಿಸ್ತಾನ ವಿದೇಶಾಂಗ ಸಚಿವರ ತಾಜ್ ಮಹಲ್ ಭೇಟಿ ದಿಢೀರ್ ರದ್ದು