ಚಂಡೀಪುರ ಸೋಂಕು: ಗುಜರಾತ್ನಲ್ಲಿ 22 ಮಕ್ಕಳ ಸಾವು
ಅಹಮದಾಬಾದ್: ಗುಜರಾತ್ನಲ್ಲಿ ಚಂಡೀಪುರ ಸೋಂಕು ಮಾರಕವಾಗಿ ಪರಿಣಮಿಸಿದ್ದು, ಈ ಮುಂಗಾರು ಅವಧಿಯಲ್ಲಿ 22 ಮಕ್ಕಳು ಬಲಿಯಾಗಿದ್ದಾರೆ.‘ಪಸ್ತುತ ಏಳು ಸೋಂಕಿತರು ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ’ ಎಂದು ಗುಜರಾತ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.'ಸೋಮವಾರದವರೆಗೆ 184 ಶಂಕಿತ ಪ

ಅಹಮದಾಬಾದ್: ಗುಜರಾತ್ನಲ್ಲಿ ಚಂಡೀಪುರ ಸೋಂಕು ಮಾರಕವಾಗಿ ಪರಿಣಮಿಸಿದ್ದು, ಈ ಮುಂಗಾರು ಅವಧಿಯಲ್ಲಿ 22 ಮಕ್ಕಳು ಬಲಿಯಾಗಿದ್ದಾರೆ.‘ಪಸ್ತುತ ಏಳು ಸೋಂಕಿತರು ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ’ ಎಂದು ಗುಜರಾತ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.'ಸೋಮವಾರದವರೆಗೆ 184 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 35 ಪ್ರಕರಣಗಳು ದೃಢಪಟ್ಟಿವೆ. 11 ಮಾದರಿಯ ಪರೀಕ್ಷಾ ವರದಿ ಬಂದಿಲ್ಲ’ ಎಂದು ತಿಳಿಸಿದ್ದಾರೆ. ‘ಮರಳುನೊಣ(ಸ್ಯಾಂಡ್ಫ್ಲೈ)ಗಳ ಸಂಖ್ಯೆ ಎಲ್ಲೆಡೆ ಹೆಚ್ಚಾಗಿದೆ. ಇದರ ಕಡಿತವು ಸೋಂಕಿಗೆ ಕಾರಣವಾಗುತ್ತದೆ. ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಮತ್ತು ಔಷಧಗಳು ಇಲ್ಲ. ಸೋಂಕಿನ ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.ಚಂಡೀಪುರ ವೆಸಿಕ್ಯೊಲೊವೈರಸ್ (ಸಿಎಚ್ಪಿವಿ) ಈ ವರ್ಷ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ. 2024ರಲ್ಲಿ 14 ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದರು.
Read the complete story at Prajavani