ಅಮೆರಿಕಾ ಅಮೆರಿಕಾ 2ಕ್ಕೆ ಮನೋಮೂರ್ತಿ ಮ್ಯೂಸಿಕ್
ನಾಗತಿಹಳ್ಳಿ ಚಂದ್ರಶೇಖರ್(Nagathihalli Chandrashekhar) ಮತ್ತು ಮನೋ ಮೂರ್ತಿ(Mano Murthy) ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಈ ಜೋಡಿ ನೆನಪಿನಲ್ಲಿ ಉಳಿಯುವ ಸಂಗೀತವನ್ನು ನೀಡಿದೆ. ಈಗ ಆ ಪ್ರಿಯ ಜ

ನಾಗತಿಹಳ್ಳಿ ಚಂದ್ರಶೇಖರ್(Nagathihalli Chandrashekhar) ಮತ್ತು ಮನೋ ಮೂರ್ತಿ(Mano Murthy) ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಈ ಜೋಡಿ ನೆನಪಿನಲ್ಲಿ ಉಳಿಯುವ ಸಂಗೀತವನ್ನು ನೀಡಿದೆ. ಈಗ ಆ ಪ್ರಿಯ ಜೋಡಿ ಮತ್ತೆ ಅಮೆರಿಕಾ ಅಮೆರಿಕಾ 2(America America 2) ಮೂಲಕ ಒಂದಾಗುತ್ತಿದೆ. ‘ಫ್ರೆಂಡ್ಶಿಪ್ ಡೇ’ಯಾದ ಆಗಸ್ಟ್ 2ರಂದು ತಮ್ಮ ಸ್ನೇಹದ ನೆನಪನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಅವರು ವಿಶೇಷ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕಾ ಅಮೆರಿಕಾ 2 ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹೇಳಿಕೆ ನೆನಪಿಸಿಕೊಳ್ಳಬೇಕು – ಕಂಗನಾ ರಣಾವತ್ ವಿರುದ್ಧ ರಮ್ಯಾ ಕಿಡಿ ಸ್ನೇಹ ಮತ್ತು ಸೃಜನಶೀಲ ಸಹಯೋಗಕ್ಕೆ ಗೌರವ ಸಲ್ಲಿಸುವಂತೆ ಈ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.