ಬೀದರ್: ನಾಲ್ವರು ಕಳ್ಳರ ಬಂಧನ, ₹2.75 ಲಕ್ಷ ಮೌಲ್ಯದ 55 ಸಿಲಿಂಡರ್ ಜಪ್ತಿ
ಬೀದರ್: ಭಾಲ್ಕಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಸಿಲಿಂಡರ್ ಕಳ್ಳರನ್ನು ಬಂಧಿಸಿ, ಅವರಿಂದ 55 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.ಘಟನೆ ಸಂಬಂಧ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ವಾಹನ ಚಾಲಕ ಗುರುನಾಥ ಶಿವಪುತ್ರ ತಮಸಂಗೆ (29), ಕೂಲಿ ಕಾರ್ಮಿಕರಾಗಿರುವ ಬಸವರಾಜ ನೀಲಕಂಠ ತಮಸಂಗೆ (32), ಸುದೀಪ್ ಶಿವಕುಮಾರ ಮಠಪತಿ (22) ಹಾಗೂ ಭಾಲ್ಕಿಯ ಸಾಯಿ

ಬೀದರ್: ಭಾಲ್ಕಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಸಿಲಿಂಡರ್ ಕಳ್ಳರನ್ನು ಬಂಧಿಸಿ, ಅವರಿಂದ 55 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.ಘಟನೆ ಸಂಬಂಧ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ವಾಹನ ಚಾಲಕ ಗುರುನಾಥ ಶಿವಪುತ್ರ ತಮಸಂಗೆ (29), ಕೂಲಿ ಕಾರ್ಮಿಕರಾಗಿರುವ ಬಸವರಾಜ ನೀಲಕಂಠ ತಮಸಂಗೆ (32), ಸುದೀಪ್ ಶಿವಕುಮಾರ ಮಠಪತಿ (22) ಹಾಗೂ ಭಾಲ್ಕಿಯ ಸಾಯಿನಗರದ ರಫೀಕ್ ರಜಾಕ್ಮಿಯ್ಯಾ (32) ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಬಂಧಿತರಿಂದ ವಿವಿಧ ಗ್ಯಾಸ್ ಕಂಪನಿಯ ₹2.75 ಲಕ್ಷ ಮೌಲ್ಯದ 55 ಸಿಲಿಂಡರ್, ಕೃತ್ಯಕ್ಕೆ ಬಳಸಿದ ₹7 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಆರೋಪಿಗಳು ಕಳವು ಮಾಡಿದ ಸಿಲಿಂಡರ್ ಗಳನ್ನು ನೆರೆಯ ಮಹಾರಾಷ್ಟ್ರದಲ್ಲಿ ಮಾರಾಟಕ್ಕೆ ಯೋಜಿಸಿದ್ದರು. ನಾಲ್ವರು ಕಾರಿನಲ್ಲಿ ಬೀದರ್–ಉದಗೀರ್ ರಸ್ತೆಯ ಮೂಲಕ ತೆರಳುತ್ತಿರುವಾಗ ಬೀರಿ (ಬಿ) ಕ್ರಾಸ್ ಹತ್ತಿರ ವಶಕ್ಕೆ ಪಡೆಯಲಾಗಿದೆ ಎಂದರು.ಭಾಲ್ಕಿ ತಾಲ್ಲೂಕಿನ 27 ಹಳ್ಳಿ, ಹುಮನಾಬಾದ್ ತಾಲ್ಲೂಕಿನ 8, ಬಸವಕಲ್ಯಾಣ ತಾಲ್ಲೂಕಿನ ಒಂದು ಗ್ರಾಮದಲ್ಲಿ ಶಾಲೆಯ ಅಡುಗೆ ಕೋಣೆ ಕೀಲಿ ಕೈ ಮುರಿದು ಸಿಲಿಂಡರ್ ಕಳವು ಮಾಡಿದ್ದರು. ಬಳಿಕ ಅವುಗಳನ್ನು ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ನಲ್ಲಿರುವ ಚಹಾ ಹೋಟೆಲ್ವೊಂದರಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಈ ಸಂಬಂಧ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4, ಮೆಹಕರ್ ಪೊಲೀಸ್ ಠಾಣೆಯಲ್ಲಿ 3 ಹಾಗೂ ಖಟಕಚಿಂಚೋಳಿ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದವು ಎಂದು ತಿಳಿಸಿದರು. ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಡಿವೈಎಸ್ಪಿ ಬಲಪ್ಪ ನಂದಗಾವಿ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ಸಿಪಿಐ ಹಣಮರೆಡ್ಡಪ್ಪ, ಪಿಎಸ್ಐ ಅಶೋಕ ಪಾಟೀಲ, ಸಿಬ್ಬಂದಿ ಭಗವಾನ್, ಗುರುನಾಥ, ಶಾಮ್, ಶರಣಬಸಪ್ಪ, ಬೀರಪ್ಪ, ಉಮರ್ ಪಟೇಲ್, ಪ್ರವೀಣ, ಸಂಗಮೇಶ ಹಾಗೂ ಜಗದೀಶ ಪಾಲ್ಗೊಂಡಿದ್ದರು ಎಂದು ವಿವರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹಾಜರಿದ್ದರು.