ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಭೇಟಿ
– ಕಾಡಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ತುಮಕೂರು: ಸಚಿವರಾದ ಬಳಿಕ ತಿಪಟೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ (Kadasiddeshwara Math Nonavinakere) ನೂತನ ಸಚಿವ ವಿಜಯಾನಂದ ಕಾಶಪ್ಪನವರ್ (Vijayananda Kashappanavar) ಭೇಟಿ ನೀಡಿ ಕಾಡಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರಿವೃಷಭ ದೇಸಿಕೇಂದ್ರ ಶಿವಯೋಗಿಗಳ ಆಶೀರ್ವಾದ ಪಡೆದ

– ಕಾಡಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ತುಮಕೂರು: ಸಚಿವರಾದ ಬಳಿಕ ತಿಪಟೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ (Kadasiddeshwara Math Nonavinakere) ನೂತನ ಸಚಿವ ವಿಜಯಾನಂದ ಕಾಶಪ್ಪನವರ್ (Vijayananda Kashappanavar) ಭೇಟಿ ನೀಡಿ ಕಾಡಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರಿವೃಷಭ ದೇಸಿಕೇಂದ್ರ ಶಿವಯೋಗಿಗಳ ಆಶೀರ್ವಾದ ಪಡೆದ ನೂತನ ಸಚಿವರು, ಖುದ್ದು ಆರತಿ ಬೆಳಗಿ ಹರಕೆ ತೀರಿಸಿದರು. ಇದನ್ನೂ ಓದಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡೋ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ: ಬಸವರಾಜ ಹೊರಟ್ಟಿ ಅಜ್ಜಯ್ಯನವರ (Ajjayya) ಸಂಕಲ್ಪದಿಂದ ಆಶೀರ್ವಾದ ಆಗಿದೆ. ಅಜ್ಜಯ್ಯನವರ ಸಂಕಲ್ಪದಿಂದ ನನಗೆ ಅವಕಾಶ ಸಿಕ್ಕಿದೆ. ಹಾಗಾಗಿ ಅಜ್ಜಯ್ಯನ ಗದ್ದಿಗೆಗೆ ಪೂಜೆ ಮಾಡಿದ್ದೇನೆ. ಪೂಜ್ಯರ ಆಶೀರ್ವಾದದಿಂದ ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ಕಾಶಪ್ಪನವರ್ ತಿಳಿಸಿದ್ದಾರೆ. ಕಾಶಪ್ಪನವರ್ ಜೊತೆ ನಿಯೋಜಿತ ಸ್ಪೀಕರ್ ಜಿ.ಎಸ್ ಪಾಟೀಲ ಕೂಡ ಮಠಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಶಕ್ತಿ ದೇವತೆ ಕೋಲಾರಮ್ಮನ ಜನ್ಮದಿನ – ಸಾವಿರಾರು ಭಕ್ತರಿಂದ ತಾಯಿಯ ದರ್ಶನ