ಸಹಸ್ರಾರು ನೃತ್ಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೀಶ್ವರ್
ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ (Dhyan Yogishwar) ನಾಯಕನಾಗಿ ಅಭಿನಯಿಸುತ್ತಿರುವ ‘ಕರ್ಣಾಟಬಲಂ ಅಜೇಯಂ’ಮ (Karnatabalam Ajeyam) ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಬಾದಾಮಿಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ವಿಶೇಷ ಚಿತ್ರೀಕರಣ ವೀಕ್ಷಿಸಲು ಚಿತ್ರತಂಡ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿತ್ತು. ಬಾದಾಮಿ ಕೋ

ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ (Dhyan Yogishwar) ನಾಯಕನಾಗಿ ಅಭಿನಯಿಸುತ್ತಿರುವ ‘ಕರ್ಣಾಟಬಲಂ ಅಜೇಯಂ’ಮ (Karnatabalam Ajeyam) ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಬಾದಾಮಿಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ವಿಶೇಷ ಚಿತ್ರೀಕರಣ ವೀಕ್ಷಿಸಲು ಚಿತ್ರತಂಡ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿತ್ತು. ಬಾದಾಮಿ ಕೋಟೆಯ ಐತಿಹಾಸಿಕ ಸೊಬಗಿನಲ್ಲಿ ‘ಬಾದಾಮಿ ಸೀಮೆಯಿದು ಎಂಥ ಸೊಬಗು…’ ಹಾಡಿನ ಚಿತ್ರೀಕರಣ ನಡೆಯಿತು. ಈ ಹಾಡಿನಲ್ಲಿ ಧ್ಯಾನ್ ಯೋಗೀಶ್ವರ್ ಸಾವಿರಕ್ಕೂ ಹೆಚ್ಚು ನೃತ್ಯ ಕಲಾವಿದರು ಮತ್ತು ಸಹ ಕಲಾವಿದರೊಂದಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಯಕ್ಷಗಾನ, ವೀರಗಾಸೆ, ನಂದಿಕೋಲು ಸೇರಿದಂತೆ ಹಲವು ಜನಪದ ಕಲಾ ತಂಡಗಳು ಭಾಗವಹಿಸಿದ್ದು ಹಾಡಿನ ವಿಶೇಷ ಆಕರ್ಷಣೆಯಾಗಿತ್ತು. ಚಿತ್ರದ ಸಾಹಿತ್ಯವನ್ನು ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದು, ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಹಾಡನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಆರು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹೇಳಿಕೆ ನೆನಪಿಸಿಕೊಳ್ಳಬೇಕು – ಕಂಗನಾ ರಣಾವತ್ ವಿರುದ್ಧ ರಮ್ಯಾ ಕಿಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ. ಯೋಗೀಶ್ವರ್, ‘ಕರ್ಣಾಟಬಲಂ ಅಜೇಯಂ’ ಅಪ್ಪಟ ಕನ್ನಡ ಮಣ್ಣಿನ ಕಥೆಯ ಸಿನಿಮಾ ಎಂದು ಹೇಳಿದರು. ಚಾಲುಕ್ಯರ ಇತಿಹಾಸದ ಜೊತೆಗೆ ಇಂದಿನ ರೈತರ ಸಮಸ್ಯೆಗಳನ್ನು ಕೂಡ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಪುಲಕೇಶಿ ಕಾಲದಿಂದ ಇಂದಿನ ಕರ್ನಾಟಕದವರೆಗಿನ ಕಥೆಯನ್ನು ಯುವಜನರಿಗೆ ತಲುಪಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಚಿತ್ರದ ಶೀರ್ಷಿಕೆ ‘ಕರ್ಣಾಟಬಲಂ’ ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರಿನಿಂದ ಪ್ರೇರಿತವಾಗಿದೆ. ರೈತರ ಸಮಸ್ಯೆ, ಮಹಾದಾಯಿ ಹೋರಾಟ ಮತ್ತು ಕರ್ನಾಟಕದ ನೀರಿನ ಪ್ರಶ್ನೆಗಳೂ ಚಿತ್ರದ ಕಥೆಯಲ್ಲಿ ಪ್ರಮುಖವಾಗಿವೆ. ಈಗಾಗಲೇ ಚಿತ್ರದ ಸುಮಾರು 35% ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವುದಾಗಿ ಹೇಳಿದರು. ನಿರ್ದೇಶಕ ನಾಗಣ್ಣ ಮಾತನಾಡಿ, ಇದು ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಹೊಂದಿರುವ ಸಿನಿಮಾ ಎಂದು ಹೇಳಿದರು. ಆರನೇ ಶತಮಾನದ ಕಥೆ ಮತ್ತು ಇಂದಿನ ಯುವಪೀಳಿಗೆಯ ಬದುಕನ್ನು ಒಟ್ಟಿಗೆ ಜೋಡಿಸುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಹಾಡಿನ ಚಿತ್ರೀಕರಣದಲ್ಲಿ ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೀರೋ ಆದ ಮ್ಯೂಸಿಕ್ ಮಾಂತ್ರಿಕ ಡಿಎಸ್ಪಿ- ಯಲ್ಲಮ್ಮ ಸಿನಿಮಾ ಫಸ್ಟ್ ಲುಕ್ ರಿಲೀಸ್ ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನರ ಪ್ರೀತಿ ಮರೆಯಲಾಗದು ಎಂದರು. ಬಾಲ್ಯದಿಂದಲೇ ನಟನಾಗುವ ಕನಸು ಇತ್ತು. ಈಗ ಆ ಕನಸು ನನಸಾಗುತ್ತಿರುವುದು ಸಂತೋಷ ತಂದಿದೆ. ‘ಕರ್ಣಾಟಬಲಂ ಅಜೇಯಂ’ ಸಿನಿಮಾ ಮುಂದಿನ ವರ್ಷದ ಜನವರಿ 15ರ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಿದರು.