E20: ಎಥೆನಾಲ್ ಮಿಶ್ರಿತ ಇಂಧನ ನೀತಿ ವಿರೋಧಿಸಿ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ
ಚಂಡೀಗಢ: ಕೇಂದ್ರ ಸರ್ಕಾರದ ಇ20 ಎಥೆನಾಲ್ ಮಿಶ್ರಿತ ಇಂಧನ ನೀತಿ ವಿರೋಧಿಸಿ ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಅಂಗೀಕರಿಸಿದ್ದು, ಈ ಇಂಧನಕ್ಕೆ ಹೊಂದಿಕೊಳ್ಳದ ವಾಹನಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ.ಪಂಜಾಬ್ ವಿಧಾನಸಭೆಯ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು

ಚಂಡೀಗಢ: ಕೇಂದ್ರ ಸರ್ಕಾರದ ಇ20 ಎಥೆನಾಲ್ ಮಿಶ್ರಿತ ಇಂಧನ ನೀತಿ ವಿರೋಧಿಸಿ ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಅಂಗೀಕರಿಸಿದ್ದು, ಈ ಇಂಧನಕ್ಕೆ ಹೊಂದಿಕೊಳ್ಳದ ವಾಹನಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ.ಪಂಜಾಬ್ ವಿಧಾನಸಭೆಯ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಸದನದಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ.‘2030ಕ್ಕೆ ಜಾರಿಗೊಳಿಸಲು ಉದ್ದೇಶಿಸಿದ್ದ ಇ20 ಎಥೆನಾಲ್ ಮಿಶ್ರಿತ ಇಂಧನ ನೀತಿಯನ್ನು ಏಕಾಏಕಿ ಜಾರಿಗೆ ತಂದಿದ್ದೇಕೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಚೀಮಾ ಗುಡುಗಿದ್ದಾರೆ.‘ವಿಶ್ವದಲ್ಲೇ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸುವ ಅಮೆರಿಕದ ಮುಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಲೆಬಾಗಿದ್ದು, ಅದಕ್ಕಾಗಿ ಇ20 ಇಂಧನ ನೀತಿಯನ್ನು ಜಾರಿಗೆ ತಂದಿದೆ’ ಎಂದೂ ಚೀಮಾ ದೂರಿದ್ದಾರೆ.ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಭಗವಂತ್ ಮಾನ್, ‘ತಜ್ಞರ ಶಿಫಾರಸು ಇಲ್ಲದೆಯೇ ದೇಶದ ಜನರ ಮೇಲೆ ಇ20 ಇಂಧನ ನೀತಿಯನ್ನು ಹೇರಲಾಗಿದೆ’ ಎಂದು ಆರೋಪಿಸಿದ್ದಾರೆ.‘ಇ20 ಇಂಧನ ಬಳಕೆಯ ಕುರಿತು ತಜ್ಞರ ಅಧ್ಯಯನ ನಡೆದಿಲ್ಲ. ಈ ಇಂಧನ ಬಳಸುವುದರಿಂದ ವಾಹನಗಳು ಬೇಗ ಹಾಳಾಗುತ್ತಿವೆ. ಈ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರುವ ಅಗತ್ಯವೆನಿತ್ತು’ ಎಂದು ಮಾನ್ ಗುಡುಗಿದ್ದಾರೆ.ವಾಹನ ಮಾಲೀಕರಿಗೆ ತಮಗೆ ಬೇಕಾದ್ದನ್ನು (ಇ20 ಇಂಧನ ಮತ್ತು ಶುದ್ಧ ಪೆಟ್ರೋಲ್) ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಮಾನ್ ಒತ್ತಾಯಿಸಿದ್ದಾರೆ.