ಭಾರತ ಹಿಂದೂ ರಾಷ್ಟ್ರವಾದ್ರೆ ಮತ್ತೆ ಜಾತಿ ಹೆಸರಿನಲ್ಲಿ ಶೋಷಣೆಯಾಗುತ್ತೆ: ಯತೀಂದ್ರ ಸಿದ್ದರಾಮಯ್ಯ
ಬೀದರ್: ಈ ದೇಶ ಹಿಂದೂ ರಾಷ್ಟ್ರವಾದರೆ ಮತ್ತೆ ಜಾತಿಯ ಹೆಸರಿನಲ್ಲಿ ಶೋಷಣೆಯಾಗುತ್ತೆ ಎಂದು ಬೀದರ್ ನಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅಹಿಂದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ ಸಮಾವೇಶದಲ್ಲಿ ಮತನಾಡಿದ ಯತೀಂದ್ರ ಅವರು, ಕೋಮ

ಬೀದರ್: ಈ ದೇಶ ಹಿಂದೂ ರಾಷ್ಟ್ರವಾದರೆ ಮತ್ತೆ ಜಾತಿಯ ಹೆಸರಿನಲ್ಲಿ ಶೋಷಣೆಯಾಗುತ್ತೆ ಎಂದು ಬೀದರ್ ನಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅಹಿಂದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ ಸಮಾವೇಶದಲ್ಲಿ ಮತನಾಡಿದ ಯತೀಂದ್ರ ಅವರು, ಕೋಮುವಾದಿಗಳು ಭಾರತವನ್ನ ಹಿಂದೂ ರಾಷ್ಟ್ರ (Hindu Nation) ಮಾಡಲು ಹೊರಟಿದ್ದು ಒಂದು ವೇಳೆ ಈ ದೇಶ ಹಿಂದೂ ರಾಷ್ಟ್ರವಾದರೆ ಮತ್ತೆ ಜಾತಿಯ ಹೆಸರಿನಲ್ಲಿ ಶೋಷಣೆ ಆರಂಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ʻಭಾರತ ಹಿಂದೂ ರಾಷ್ಟ್ರದ ಆದ್ರೆ ಅದಕ್ಕಿಂತ ದೊಡ್ಡ ಅಪಾಯ ಮೊತ್ತೊಂದಿಲ್ಲಾʼ ಎಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರೇ ಹೇಳಿದ್ದಾರೆ. ಅಹಿಂದ ವರ್ಗದ ದೊಡ್ಡ ಶತ್ರು ಮನುವಾದಿಗಳು ಮತ್ತು ಕೋಮುವಾದಿಗಳಾಗಿದ್ದು ಇವರು ಈ ದೇಶದ ಸಂವಿಧಾನವನ್ನ ವಿರೋಧಿಸುತ್ತಾರೆ. ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯವಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ, ದಾಸರು, ಶರಣರು ಹೋರಾಡಿದರೂ ಅದು ಹೋಗುತ್ತಿಲ್ಲ ಇದಕ್ಕೆ ಕಾರಣ ಹಿಂದೂ ಧರ್ಮ, ಜಾತಿ ವ್ಯವಸ್ಥೆಗೆ ಕೊಟ್ಟಿರುವ ಒಪ್ಪಿಗೆಯ ಮುದ್ರೆ ಎಂದು ಹೇಳಿದ್ದಾರೆ. ಶತಮಾನಗಳಿಂದ ಶೋಷಿತರು ಶೋಷಣೆಗೆ ಒಳಗಾಗುತ್ತಿದ್ದು ಕೆಲವರು ಧರ್ಮದ ಕಟ್ಟುಪಾಡುಗಳನ್ನ ಹೇಳುತ್ತ ನಮ್ಮನ್ನು ಶೋಷಿಸುತ್ತಿದ್ದಾರೆ. ಧರ್ಮವನ್ನು ರಾಜಕೀಯಕ್ಕೆ ತಂದ್ರೆ ಮತ್ತೆ ಜಾತಿ ವ್ಯವಸ್ಥೆ ತಂದಂತೆ, ಧರ್ಮನೇ ಬೇರೆ ರಾಜಕೀಯನೇ ಬೇರೆ. ಹಿಂದೂ ರಾಷ್ಟ್ರವಾದ್ರೆ ಮತ್ತೆ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ ಬರುತ್ತೆ. ಕೋಮುವಾದಿಗಳು ಧರ್ಮ ಹೆಸರಿನಲ್ಲಿ ಅಧಿಕಾರ ಒಡೆದು ಜಾತಿ ವ್ಯವಸ್ಥೆ ತರುತ್ತಾರೆ. ಹೀಗಾಗಿ ನಮ್ಮ ಗುರಿ ಕೋಮುವಾದಿಗಳ ವಿರುದ ಹೋರಾಟ ಮಾಡೋದು ಎಂದಿದ್ದಾರೆ. ಅಹಿಂದ ನಾಯಕರು ಹೋರಾಟ ಮಾಡಿದ್ರೆ ಮಾತ್ರ ನಾವು ನಮ್ಮ ಪ್ರಾತಿನಿಧ್ಯಗಳನ್ನ ಪಡೆಯೋಕೆ ಸಾಧ್ಯ ಎಂದು ಎಚ್ಚರಿಸಿದ್ದಾರೆ.