ಚಿತ್ರದುರ್ಗ: ‘ತಾಳ್ಮೆ’ಮೂರ್ತಿಯ ಅರಸಿ ಬಂದ ಸಚಿವ ಸ್ಥಾನ...
ಚಿತ್ರದುರ್ಗ: ಸರ್ಕಾರಿ ಹುದ್ದೆ ತ್ಯಜಿಸಿ ರಾಜಕಾರಣಕ್ಕೆ ಧುಮುಕಿದ ಟಿ.ರಘುಮೂರ್ತಿ ಅವರಿಗೆ ತಾಳ್ಮೆ, ವಿಶ್ವಾಸ, ಹಾಗೂ ಸರಳತೆ ಗುಣಗಳು ಆಭರಣದಂತಿವೆ. ಇದೇ ಕಾರಣಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನ ಸತತ ಮೂರು ಬಾರಿ ಗೆಲ್ಲಿಸಿ ‘ಹ್ಯಾಟ್ರಿಕ್ ಶಾಸಕ’ ಎಂಬ ಪಟ್ಟ ನೀಡಿದ್ದಾರೆ. ತಿಪ್ಪಣ್ಣ ರಘುಮೂರ್ತಿ ಅವರು ಈಗ ರಾಜ್ಯದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಚು

ಚಿತ್ರದುರ್ಗ: ಸರ್ಕಾರಿ ಹುದ್ದೆ ತ್ಯಜಿಸಿ ರಾಜಕಾರಣಕ್ಕೆ ಧುಮುಕಿದ ಟಿ.ರಘುಮೂರ್ತಿ ಅವರಿಗೆ ತಾಳ್ಮೆ, ವಿಶ್ವಾಸ, ಹಾಗೂ ಸರಳತೆ ಗುಣಗಳು ಆಭರಣದಂತಿವೆ. ಇದೇ ಕಾರಣಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನ ಸತತ ಮೂರು ಬಾರಿ ಗೆಲ್ಲಿಸಿ ‘ಹ್ಯಾಟ್ರಿಕ್ ಶಾಸಕ’ ಎಂಬ ಪಟ್ಟ ನೀಡಿದ್ದಾರೆ. ತಿಪ್ಪಣ್ಣ ರಘುಮೂರ್ತಿ ಅವರು ಈಗ ರಾಜ್ಯದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿ ಉಳಿದಂತೆ ಎಲ್ಲಾ ಪಕ್ಷದವರನ್ನೂ ವಿಶ್ವಾಸದಿಂದ ಕಾಣುವ ರಘುಮೂರ್ತಿ ಅವರು ಜಿಲ್ಲೆಯಾದ್ಯಂತ ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಳ್ಳುತ್ತಾರೆ. ಚಳ್ಳಕೆರೆ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೇ ಜಿಲ್ಲೆಯ ಹಲವು ಅಭಿವೃದ್ಧಿ ಕೆಲಸಗಳಿಗೆ ರಘುಮೂರ್ತಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಿಲ್ಲೆಗೆ ಭದ್ರಾ ಯೋಜನೆ ತರುವಲ್ಲಿ ಮೂಲದಿಂದಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಸ್ವತಃ ಎಂಜಿನಿಯರ್ ಆಗಿರುವ ಕಾರಣ ಯೋಜನೆ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಚಳ್ಳಕೆರೆ ಕ್ಷೇತ್ರದಾದ್ಯಂತ ಶಿಕ್ಷಣ ಕ್ಷೇತ್ರಕ್ಕೆ ಕ್ರಾಂತಿಕಾರಕ ಕೊಡುಗೆ ನೀಡಿರುವ ಅವರು ಖಾಸಗಿ ಶಾಲಾ, ಕಾಲೇಜುಗಳಿಗೆ ಸಡ್ಡು ಹೊಡೆಯುವ ಕೆಲಸ ಮಾಡಿದ್ದಾರೆ. ವಿಧಾನಸೌಧ, ವಿಕಾಸಸೌಧ ಕಟ್ಟಡ ಹೋಲುವ ಶಾಲಾ, ಕಾಲೇಜು ಕಟ್ಟಡ ನಿರ್ಮಿಸಿ ಮಾದರಿಯಾಗಿದ್ದಾರೆ. ಕಟ್ಟಡದ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಮಾರ್ಟ್ ತರಗತಿ ರೂಪಿಸಿ ಇಡೀ ರಾಜ್ಯದಕ್ಕೆ ಮಾರ್ಗದರ್ಶಿಯಾಗಿದ್ದಾರೆ.ಚಳ್ಳಕೆರೆ ಪಟ್ಟಣದ ಸೌಂದರ್ಯಕ್ಕೆ ಪ್ರಮುಖ ಆದ್ಯತೆ ನೀಡಿರುವ ಅವರು ಪ್ರಮುಖ ರಸ್ತೆಯನ್ನು ಚತುಷ್ಪಥವನ್ನಾಗಿಸಿ ಹೊಸ ರೂಪ ನೀಡಿದ್ದಾರೆ. ಜಿಲ್ಲಾ ಕೇಂದ್ರಕ್ಕೂ ಮಿಗಿಲಾಗಿ ಚಳ್ಳಕೆರೆ ಪಟ್ಟಣ ಇಂದು ಬೆಳೆದು ನಿಂತಿದೆ. ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ರಘುಮೂರ್ತಿ ಅವರ ಕಚೇರಿ ಸಾರ್ವಜನಿಕರು ಹಾಗೂ ಶಾಸಕರ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತದೆ. ಇಲ್ಲಿ ಯಾರೇ ಬಂದು ಮನವಿ ಕೊಟ್ಟರೂ ಕೆಲವೇ ದಿನಗಳಲ್ಲಿ ಅದಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ.ರಾಜಕಾರಣ ಹಾಗೂ ಅಭಿವೃದ್ಧಿಯ ಮ್ಯೂಸಿಯಂ ರೂಪದಲ್ಲಿ ಕಚೇರಿ ಸೃಷ್ಟಿಸಿದ್ದಾರೆ. ದೇಶ, ರಾಜ್ಯವನ್ನಾಳಿದ ಪ್ರಧಾನಿ, ಮುಖ್ಯಮಂತ್ರಿಗಳು, ರಾಷ್ಟ್ರಪತಿ, ರಾಜ್ಯಪಾಲ, ಸ್ಪೀಕರ್ ಮುಂತಾದವರ ಭಾವಚಿತ್ರಗಳನ್ನು ಕಚೇರಿಯಲ್ಲಿ ಕಾಣಬಹುದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗದ ಈ ಕಚೇರಿ ಪಕ್ಷ ತಾರತಮ್ಯವನ್ನು ಮೀರಿದೆ. ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಪ್ರತಿದಿನ ಊಟ, ತಿಂಡಿ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ರಾಜೀನಾಮೆ ನೀಡಿದ ಸಂದರ್ಭದಲ್ಲೇ ರಘುಮೂರ್ತಿ ಅವರು ಸಚಿವರಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವರಾಗುವ ಅವಕಾಶ ಅವರಿಗೆ ಸಂದಿದೆ. ಮುಂದೆ ಹಿರಿಯೂರು ಉಪ ಚುನಾವಣೆ, 2028ರ ಸಾರ್ವತ್ರಿಕ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ಸಾಹಮೂರ್ತಿಯಂತಿರುವ ರಘುಮೂರ್ತಿ ಅವರಿಗೆ ಸಚಿವರಾಗುವ ಅವಕಾಶ ನೀಡಲಾಗಿದೆ ಎಂದೇ ಜಿಲ್ಲೆಯಾದ್ಯಂತ ಬಣ್ಣಿಸಲಾಗುತ್ತಿದೆ. ಎಂಥದ್ದೇ ಸಂದರ್ಭದಲ್ಲಿ ತಾಳ್ಮೆಗೆಡದ ಅವರು ಎಲ್ಲರನ್ನು ವಿಶ್ವಾಸದಿಂದ ಮುನ್ನಡೆಯುತ್ತಾರೆ ಎಂಬ ಭರವಸೆಯೂ ಅವರನ್ನು ಸಚಿವ ಸ್ಥಾನದವರೆಗೆ ತಂದು ನಿಲ್ಲಿಸಿದೆ.ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಎನ್ಟಿಸಿ), ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳು, ಎಲ್ಲಾ ಜಾತಿಯವರಿಗೂ ಸಮುದಾಯ ಭವನ, ಆಸ್ಪತ್ರೆ, ಯಾತ್ರಿ ನಿವಾಸ, ಉದ್ಯಾನ, ಬಸ್ ನಿಲ್ದಾಣ, ಬ್ಯಾರೇಜ್ ಮುಂತಾದ ಕೆಲಸಗಳು ಕ್ಷೇತ್ರದಲ್ಲಿ ಮನೆಮಾತಾಗಿವೆ.ಚಿತ್ರದುರ್ಗ ತಾಲ್ಲೂಕು (ಚಳ್ಳಕೆರೆ ವಿಧಾನಸಭಾ ಕ್ಷೇತ್ರ) ಕಡಬನಕಟ್ಟೆ ಗ್ರಾಮದ ಟಿ.ತಿಪ್ಪಯ್ಯ– ಬಸಮ್ಮ ದಂಪತಿಯ ಪುತ್ರರಾದ ರಘುಮೂರ್ತಿ ಸಿವಿಲ್ ಎಂಜಿನಿಯರ್ ಪದವೀಧರ. ಭೂಸೇನಾ ನಿಗಮದ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಅವರು ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಧುಮುಕಿದ್ದರು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ, ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.ರಘುಮೂರ್ತಿ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ‘ಅಭಿವೃದ್ಧಿಯ ಕನಸುಗಾರ– ಜನ ಮಾದರಿಯ ದೊರೆ’ ಪುಸ್ತಕ ಪ್ರಕಟಗೊಂಡಿದೆ. ರಾಜಕಾರಣದಲ್ಲಿ ಅವರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಭಗೀರಥ ಪ್ರಶಸ್ತಿ, ಕರ್ಪೂರಿ ಠಾಕೂರ್ ಪ್ರಶಸ್ತಿಗಳು ಸಂದಿವೆ.ಟಿ.ರಘುಮೂರ್ತಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಸಹಿ ಮಾಡುತ್ತಿರುವುದುಕಡಬನಕಟ್ಟೆಯಿಂದ 2ನೇ ಸಚಿವ ಹಲವು ರಾಜಕಾರಣಿಗಳಿಗೆ ಜನ್ಮನೀಡಿರುವ ಕಡಬನಕಟ್ಟೆ ಗ್ರಾಮದಿಂದ 2ನೇಯವರಾಗಿ ರಘುಮೂರ್ತಿ ಸಚಿವರಾಗಿದ್ದಾರೆ. ಮೊದಲು ಗ್ರಾಮ ಜಗಳೂರು ಕ್ಷೇತ್ರವ್ಯಾಪ್ತಿಯಲ್ಲಿತ್ತು. ಜಗಳೂರು ಕ್ಷೇತ್ರದಿಂದ ಗೆದ್ದಿದ್ದ ಜಿ.ಎಚ್.ಅಶ್ವತ್ಥ ರೆಡ್ಡಿ ಅವರು ಗುಂಡೂರಾವ್ ಸರ್ಕಾರದಲ್ಲಿ ಇಂಧನ ಸಚಿವ ಬಂಗಾರಪ್ಪ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. 6 ಬಾರಿ ಶಾಸಕರಾಗಿರುವ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕೂಡ ಇದೇ ಗ್ರಾಮದವರು. ಚಳ್ಳಕೆರೆ ತಾಲ್ಲೂಕಿನಿಂದಲೂ ರಘುಮೂರ್ತಿ ಅವರು 2ನೇಯವರಾಗಿ ಸಚಿವರಾಗಿದ್ದಾರೆ. ಜನತಾ ಪರಿವಾರದಿಂದ ಗೆಲುವು ಸಾಧಿಸಿದ್ದ ತಿಪ್ಪೇಸ್ವಾಮಿ ಅವರು ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು.ಕಾಲೇಜು ಉಳಿವಿಗಾಗಿ ಪಾದಯಾತ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆಯಿಂದ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಆಗ ರಘುಮೂರ್ತಿ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಶಕ್ತಿಯಾಗಿದ್ದರು. ಬಿಜೆಪಿ ಅವಧಿಯಲ್ಲಿ ಚಳ್ಳಕೆರೆಗೆ ಮಂಜೂರಾಗಿದ್ದ ಪದವಿ ಕಾಲೇಜು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಹೋಗಿತ್ತು. ಇದರ ವಿರುದ್ಧ ಬಂಡೆದಿದ್ದ ರಘುಮೂರ್ತಿ ಅವರು ಬೃಹತ್ ಹೋರಾಟವನ್ನೇ ರೂಪಿಸಿದ್ದರು. ಸಂಘಟನೆ ಸಾರ್ಜಜನಿಕರು ವಿದ್ಯಾರ್ಥಿಗಳು ಸ್ವಾಮೀಜಿಗಳು ಹೋರಾಟಕ್ಕೆ ಸಾಥ್ ಕೊಟ್ಟಿದ್ದರು. ಬೆಂಗಳೂರಿಗೆ ಪಾದಯಾತ್ರೆ ತೆರಳುವುದಾಗಿ ಘೋಷಿಸಿದ್ದರು. ಪಾದಯಾತ್ರೆ ಆರಂಭವಾಗುವಷ್ಟರಲ್ಲಿ ಬಿಜೆಪಿ ಸರ್ಕಾರ ಕಾಲೇಜನ್ನು ಮರಳಿ ಚಳ್ಳಕೆರೆಗೆ ನೀಡಿತ್ತು. ಇದು ಜಿಲ್ಲೆಯಲ್ಲಿ ಒಂದು ದಾಖಲೆಯಾಗಿ ಉಳಿದಿದೆ.ಟಿ.ರಘುಮೂರ್ತಿ, ಸಚಿವಕ್ಷೇತ್ರದ ಜಿಲ್ಲೆಯ ಜನರ ಆಶಯದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವನಾಗಿದ್ದೇನೆ. ಅವಧಿ ಕಡಿಮೆ ಇದ್ದರೂ ಎಲ್ಲರ ಭರವಸೆ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ