ಮಲೆನಾಡು ಭಾಗದಲ್ಲಿ ಮಳೆ ಅಬ್ಬರ, ತುಂಗಭದ್ರಾ ಜಲಾಶಯಕ್ಕೆ1 ಲಕ್ಷ ಕ್ಯೂಸೆಕ್ ನೀರು
ಬೆಂಗಳೂರು: ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಈಗಲೂ ಉಕ್ಕಿ ಹರಿಯುತ್ತಿದ್ದು, ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.ತಿಂಗಳ ಹಿಂದೆಯಷ್ಟೇ ನೀರಿಲ್ಲದೇ ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸುಮಾರು 1ಲಕ್ಷ ಕ್ಯೂಸೆಕ್ ನೀರು ಹರಿದು ಹರಿಯುತ್ತಿದ್ದು, ಜಲಾಶಯ
ಬೆಂಗಳೂರು: ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಈಗಲೂ ಉಕ್ಕಿ ಹರಿಯುತ್ತಿದ್ದು, ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.ತಿಂಗಳ ಹಿಂದೆಯಷ್ಟೇ ನೀರಿಲ್ಲದೇ ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸುಮಾರು 1ಲಕ್ಷ ಕ್ಯೂಸೆಕ್ ನೀರು ಹರಿದು ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟವು ಶೇ 50ರಷ್ಟನ್ನು ತಲುಪಿದೆ.ಜಲಸಂಪನ್ಮೂಲ ಇಲಾಖೆ ಮಾಹಿತಿ ಪ್ರಕಾರ, ತುಂಗಭದ್ರಾ ಜಲಾಶಯಕ್ಕೆ 98468 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಿಗ್ಗೆ 82087 ಕ್ಯೂಸೆಕ್ ಒಳಹರಿವು ಇತ್ತು. ಇದು ಸಂಜೆ ಹೊತ್ತಿಗೆ ಇನ್ನೂ ಹೆಚ್ಚುವ ನಿರೀಕ್ಷೆಯಿದೆ. ಜಲಾಶಯದಿಂದ 1555ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ 1633 ಅಡಿ ನೀರು ಸಂಗ್ರಹಿಸುವ ಅವಕಾಶವಿದೆ. ಈಗ 1617 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 1616 ಅಡಿ ನೀರಿತ್ತು. 80 ಟಿಎಂಸಿ ನೀರನ್ನು ಸಂಗ್ರಹಿಸಲಾಗಿತ್ತು. ಜಲಾಶಯದ ನೀರಿನ ಮಟ್ಟವು ಶೇ 50 ಅನ್ನು ತಲುಪಿದೆ.ಜಲಾಶಯದಲ್ಲಿ ಸದ್ಯ 52.89 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 105. 78 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದಿಂದ ಸತತವಾಗಿ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ. ಇದಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾಗಿ ವರದಾ ನದಿ ಮೂಲಕ ಹೆಚ್ಚಿನ ನೀರು ತುಂಗಭದ್ರಾ ನದಿಗೆ ಸೇರಿ ಜಲಾಶಯ ಸೇರುತ್ತಿದೆ. ತುಂಗಭದ್ರಾ ನದಿ ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ ಜಿಲ್ಲೆಗಳಲ್ಲಿ ಹರಿಯುತ್ತದೆ. ನದಿ ಮೇಲ್ಮಟ್ಟದಲ್ಲಿ ಹರಿಯುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. Tungabhadra stats as on 4th Aug 1PMInflow - 98,468 Cusecs Outflow - 1,555 CusecsStorage - 52.89 /105.788 TMCLevel - 1,616.83 /1633 FeetUpper tunga stats as on 2PMHourly Inflow - 32358.12 cusecsDaily inflow - 50250.64 CusecsOutflow - 40962.89 CusecsStorage -… pic.twitter.com/S2XUBkLBDn— Ballari Tweetz (@TweetzBallari) August 4, 2026