ಉಜನಿ ಅಣೆಕಟ್ಟೆಯಿಂದ ಭೀಮಾ ನದಿಗೆ ನೀರು ಬಿಡುಗಡೆ
ಅಫಜಲಪುರ : ಮಹಾರಾಷ್ಟ್ರದ ಉಜನಿ ಅಣೆಕಟ್ಟೆಯ ಸ್ಪಿಲ್ವೇಯಿಂದ ಭೀಮಾ ನದಿಗೆ ಮಂಗಳವಾರ ರಾತ್ರಿ 8 ಗಂಟೆ ಹೊತ್ತಿಗೆ 1 ಲಕ್ಷ ಕ್ಯೂಸೆಕ್ ನೀರುಹರಿಸಲಾಗಿದೆ.ಈ ಬೆನ್ನಲ್ಲೆ ಜಿಲ್ಲೆಯಲ್ಲಿ ಭೀಮಾನದಿ ಪಾತ್ರ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ನದಿಯ ಜಲಾನಯನ ಪ್ರದೇಶದಲ್ಲಿ ಯಾವುದೇ ವಸ್ತುಗಳು ಅಥವಾ ಪ್ರಾಣಿಗಳು ಇದ್ದರೆ, ಅವುಗಳನ್ನು ಸುರಕ್ಷಿತ ಜಾಗಕ್ಕ

ಅಫಜಲಪುರ : ಮಹಾರಾಷ್ಟ್ರದ ಉಜನಿ ಅಣೆಕಟ್ಟೆಯ ಸ್ಪಿಲ್ವೇಯಿಂದ ಭೀಮಾ ನದಿಗೆ ಮಂಗಳವಾರ ರಾತ್ರಿ 8 ಗಂಟೆ ಹೊತ್ತಿಗೆ 1 ಲಕ್ಷ ಕ್ಯೂಸೆಕ್ ನೀರುಹರಿಸಲಾಗಿದೆ.ಈ ಬೆನ್ನಲ್ಲೆ ಜಿಲ್ಲೆಯಲ್ಲಿ ಭೀಮಾನದಿ ಪಾತ್ರ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ನದಿಯ ಜಲಾನಯನ ಪ್ರದೇಶದಲ್ಲಿ ಯಾವುದೇ ವಸ್ತುಗಳು ಅಥವಾ ಪ್ರಾಣಿಗಳು ಇದ್ದರೆ, ಅವುಗಳನ್ನು ಸುರಕ್ಷಿತ ಜಾಗಕ್ಕೆ ತಕ್ಷಣವೇ ಸ್ಥಳಾಂತರಿಸಬೇಕು ಎಂದು ಸಲಹೆ ನೀಡಿದೆ.ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಉಜನಿ ಜಲಾಶಯದ ಮುಖಾಂತರ ಭೀಮಾನದಿಗೆ 1.43 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಆ ನೀರನ್ನು ಸೊನ್ನ ಸಮೀಪದ ಭೀಮಾ ಬ್ಯಾರೇಜ್ದಿಂದ ಒಂಬತ್ತು ಗೇಟ್ಗಳ ಮೂಲಕ ನದಿ ಪಾತ್ರಕ್ಕೆ ಹರಿಸಲಾಗಿತ್ತು.ಇದೀಗ ಮತ್ತೆ 1 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದ್ದು, ಮೈದುಂಬಿ ಹರಿಯುತ್ತಿರುವ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಭೀಮಾ ಏತ ನೀರಾವರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ್ ಕೋರಿದ್ದಾರೆ.
Read the complete story at Prajavani