ಶೇರ್ಚಾಟ್ನ ‘ಕ್ವಿಕ್ಟಿವಿ’ಯಿಂದ ಭಾರತದ ಮೊದಲ ಎಐ ಆಧಾರಿತ ಮೈಕ್ರೋಡ್ರಾಮಾ ಸರಣಿ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಮನರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಭಾರತೀಯ ಪ್ರೀಮಿಯಂ ಕಿರು-ಮನರಂಜನಾ ಕ್ಷೇತ್ರದಲ್ಲಿ ಶೇರ್ಚಾಟ್ ಮತ್ತು ಮೋಜ್ ಸಂಸ್ಥೆಯ ‘ಕ್ವಿಕ್ ಟಿವಿ’ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.ಕ್ವಿಕ್ ಟಿವಿಯ 'ಮೈ ಅಮರ್ ಹೂನ್' ಎಐ ಮೈಕ್ರೋಡ್ರಾಮಾ ಯಶಸ್ವಿಯಾದ ನಂತರ, ಇದೀಗ ಆಗಸ್ಟ್ ತಿಂಗಳಿನಲ್

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಮನರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಭಾರತೀಯ ಪ್ರೀಮಿಯಂ ಕಿರು-ಮನರಂಜನಾ ಕ್ಷೇತ್ರದಲ್ಲಿ ಶೇರ್ಚಾಟ್ ಮತ್ತು ಮೋಜ್ ಸಂಸ್ಥೆಯ ‘ಕ್ವಿಕ್ ಟಿವಿ’ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.ಕ್ವಿಕ್ ಟಿವಿಯ 'ಮೈ ಅಮರ್ ಹೂನ್' ಎಐ ಮೈಕ್ರೋಡ್ರಾಮಾ ಯಶಸ್ವಿಯಾದ ನಂತರ, ಇದೀಗ ಆಗಸ್ಟ್ ತಿಂಗಳಿನಲ್ಲಿ ಆರು ನೂತನ ಎಐ-ಆಧಾರಿತ ಮೈಕ್ರೋಡ್ರಾಮಾ ಸರಣಿಗಳನ್ನು ಬಿಡುಗಡೆ ಮಾಡಲು ಸಂಸ್ಥೆ ಸಜ್ಜಾಗಿದೆ.ಇದರ ಜೊತೆಗೆ ಎಐ-ಚಾಲಿತ ಡಿಜಿಟಲ್ ಮನರಂಜನೆಯನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಮುಂದಿನ ಒಂದು ವರ್ಷದಲ್ಲಿ ₹100 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಸಂಸ್ಥೆಯ ಮಾತೃ ಸಂಸ್ಥೆ ಮೊಹಲ್ಲಾ ಟೆಕ್ ಘೋಷಿಸಿದೆ.ಅತ್ಯಾಧುನಿಕ ಎಐ ತಂತ್ರಜ್ಞಾನ, ಎಐ ಕ್ಷೇತ್ರದಲ್ಲಿ ಅತ್ಯುನ್ನತ ಪ್ರತಿಭೆಗಳನ್ನು ಸಂಸ್ಥೆಗೆ ತರುವುದು, ಕಲಾವಿದರ ನೈಜ ಭಾವನಾತ್ಮಕ ಅಭಿನಯಕ್ಕೆ ಧಕ್ಕೆಯಾಗದಂತೆ ದೃಶ್ಯ ವೈಭವವನ್ನು ಹೆಚ್ಚಿಸುವುದು ಈ ಹೂಡಿಕೆಯ ಉದ್ದೇಶವಾಗಿದೆ.'ಮೈ ಅಮರ್ ಹೂನ್' ಯಶಸ್ಸು: ಜೂನ್ನಲ್ಲಿ ಪ್ರಸಾರವಾದ 'ಮೈ ಅಮರ್ ಹೂನ್' ಸರಣಿಯು ಲೈವ್-ಆಕ್ಷನ್ ಶೂಟಿಂಗ್, ಮೋಷನ್ ಕ್ಯಾಪ್ಚರ್, ವಿಎಫ್ಎಕ್ಸ್ ಮತ್ತು ಜನರೇಟಿವ್ ಎಐ ತಂತ್ರಜ್ಞಾನಗಳನ್ನು ಸಂಯೋಜಿಸಿ ನಿರ್ಮಿಸಲಾದ ಭಾರತದ ಪ್ರಥಮ ಎಐ ಮೈಕ್ರೋಡ್ರಾಮಾ ಎನಿಸಿಕೊಂಡಿತ್ತು. ಈ ಸರಣಿಯು 20ನೇ ಸಂಚಿಕೆಯ ವೇಳೆಯೂ ಶೇ. 50 ರಷ್ಟು ವೀಕ್ಷಣೆ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.ಆಗಸ್ಟ್ನಲ್ಲಿ ಪ್ರಸಾರವಾಗಲಿರುವ 6 ಹೊಸ ಎಐ ಮೈಕ್ರೋಡ್ರಾಮಾ ಸರಣಿಗಳು:ಪಶು ಸಮ್ರಾಟ್: ಮಹಾದೇವನ ದಿವ್ಯ ಶಕ್ತಿಯನ್ನು ಹೊಂದಿರುವ ‘ದೇವ್’ ಎಂಬ ಸಾಮಾನ್ಯ ರೈತನ ಮಹಾಕಾವ್ಯ ಮಾದರಿಯ ಸಾಹಸಮಯ ಫ್ಯಾಂಟಸಿ ಕಥಾನಕ.ಬಾದ್ಶಾ ಬೆನಾಕಬ್: ರಾಜ್ಯವನ್ನು ಕುತಂತ್ರಗಳಿಂದ ರಕ್ಷಿಸಲು ರಹಸ್ಯ ಯೋಧನಾಗುವ ‘ಧೀರೇಂದ್ರ’ ಎಂಬ ವಿದ್ವಾಂಸನ ರಾಜಮನೆತನದ ರೋಚಕ ಕಥೆ.ಪೋರ್ಟ್ ಕಾ ಕಿಂಗ್: ಗೋವಾದ ಬಡ ಮೀನುಗಾರ ‘ಶಿವ’ನಿಗೆ ಅಪರೂಪದ ಕಡಲ ನಿಧಿ ಸಿಕ್ಕ ನಂತರ ಆತ ಶಕ್ತಿಶಾಲಿ ಉದ್ಯಮಿಯಾಗಿ ಬೆಳೆಯುವ ಕಥಾನಕ.ಒಡಿಯಾನ್: ಭಾರತೀಯ ಜಾನಪದ ಕಥೆಯಿಂದ ಪ್ರೇರಿತಗೊಂಡಿದ್ದು, ‘ಸಮರ್’ ಎಂಬ ಯುವಕನ ರೂಪಾಂತರ ಶಕ್ತಿಯ ಸಾಹಸಮಯ ಪ್ರಯಾಣ.ಜಾದೂಗಾರ್ ರಾಜಕುಮಾರ್: ಮಾಂತ್ರಿಕ ಶಕ್ತಿಯನ್ನು ಬಳಸಿ ರಾಜಮನೆತನದ ಪಿತೂರಿಗಳನ್ನು ಮೆಟ್ಟಿ ನಿಲ್ಲುವ ರಾಜಕುಮಾರ ‘ರುದ್ರಾಂಶ್’ನ ಸಾಹಸ.ಹಮಾರಿ ಲಕ್ಕಿ ಜಿಯಾ: ಪವಾಡದ ಶಮನ ಶಕ್ತಿಯಿರುವ ‘ಜಿಯಾ’ ಎಂಬ ಬಾಲಕಿಯ ಪ್ರೀತಿ, ಹೋರಾಟ ಮತ್ತು ಕುಟುಂಬದ ಭಾವನಾತ್ಮಕ ಕಥೆ.ಈ ಎಲ್ಲಾ ಸರಣಿಗಳು ಆಗಸ್ಟ್ ತಿಂಗಳ ಪೂರ್ತಿ 'ಕ್ವಿಕ್ಟಿವಿ' ಪ್ಲಾಟ್ಫಾರ್ಮ್ನಲ್ಲಿ ಪ್ರತ್ಯೇಕವಾಗಿ ಪ್ರಸಾರವಾಗಲಿವೆ.