ಮುಸ್ಲಿಮ್ ಗುರಿಯಾಗಿಸಿ ಬುಲ್ಡೋಜರ್ ಕ್ರಮ: 'ಸಂವಿಧಾನಕ್ಕೆ ಅಪಮಾನ' ಎಂದ ಕಾಂಗ್ರೆಸ್
ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ 'ಬುಲ್ಡೋಜರ್ ಕಾರ್ಯಾಚರಣೆ' ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇದು ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಎಸಗಿದ 'ಅಪಮಾನ'ವಾಗಿದೆ ಎಂದು ಟೀಕಿಸಿದೆ. ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ತೆರವು ಕಾ

ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ 'ಬುಲ್ಡೋಜರ್ ಕಾರ್ಯಾಚರಣೆ' ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇದು ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಎಸಗಿದ 'ಅಪಮಾನ'ವಾಗಿದೆ ಎಂದು ಟೀಕಿಸಿದೆ. ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ತೆರವು ಕಾರ್ಯಾಚರಣೆಗೆ ಕಾರಣರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದೂ ಒತ್ತಾಯಿಸಿದೆ.ಮಧ್ಯಪ್ರದೇಶದಲ್ಲಿ 2022ರ ರಾಮನವಮಿ ಮೆರವಣಿಗೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ 11 ಮಂದಿಯನ್ನು ಸ್ಥಳೀಯ ನ್ಯಾಯಾಲಯವು ಇತ್ತೀಚೆಗೆ ಖುಲಾಸೆಗೊಳಿಸಿತ್ತು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದ್ದು, ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ. 'ನ್ಯಾಯಾಲಯವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಮೊದಲೇ ನರೋತ್ತಮ್ ಮಿಶ್ರಾ ಅವರ 'ಬುಲ್ಡೋಜರ್ ನ್ಯಾಯ'ದ ಶೈಲಿಯು ಶಿಕ್ಷೆಯನ್ನು ಅನುಭವಿಸುವಂತೆ ಮಾಡಿದೆ' ಎಂದು ಟೀಕಿಸಿದ್ದಾರೆ. अप्रैल 2022 में खरगोन में रामनवमी जुलूस के दौरान हिंसा भड़कने के अगले ही दिन जिला प्रशासन ने बुलडोजर कार्रवाई करते हुए शहर के पाँच मुस्लिम बहुल इलाकों में 16 मकानों और 29 दुकानों को ध्वस्त कर दिया था।तत्कालीन मध्य प्रदेश के गृह मंत्री नरोत्तम मिश्रा ने कहा था-"जिस घर से पत्थर…— Jairam Ramesh (@Jairam_Ramesh) August 4, 2026 ಕುಟುಂಬ ಸದಸ್ಯರ ತಪ್ಪೇನು?: ಕಾಶ್ಮೀರದಲ್ಲಿ ಬುಲ್ಡೋಜರ್ ಕ್ರಮ ಖಂಡಿಸಿದ ಮುಫ್ತಿಡ್ರಗ್ಸ್ ಮಾಫಿಯಾ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ