ಕೇಂದ್ರ ಸರ್ಕಾರ ಟ್ರಂಪ್ ಮುಂದೆ ಮಂಡಿಯೂರಿದೆ – E20 ಇಂಧನ ವಿರೋಧಿಸಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಭಟನೆ
– ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೇಳಿದ ಕೇಜ್ರಿವಾಲ್ – 30 ಕೋಟಿ ವಾಹನಗಳಿಗೆ ಹಾನಿಯಾಗುವ ಅಪಾಯ; ಧಾಂಡಾ ನವದೆಹಲಿ: ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಿರೋಧಿಸಿ ಸಂಗ್ರಹಿಸಲಾದ 2.30 ಲಕ್ಷಕ್ಕೂ ಅಧಿಕ ಸಹಿ ಮಾಡಿದ ಮನವಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಮಂಗಳವಾರ ಪ್ರಧಾನಿ ನಿವಾಸದತ್ತ ಮೆರವಣಿಗೆ ನಡೆಸಲು ಹೊರಟಿದ್ದ ಎಎಪಿ ರಾಷ

– ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೇಳಿದ ಕೇಜ್ರಿವಾಲ್ – 30 ಕೋಟಿ ವಾಹನಗಳಿಗೆ ಹಾನಿಯಾಗುವ ಅಪಾಯ; ಧಾಂಡಾ ನವದೆಹಲಿ: ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಿರೋಧಿಸಿ ಸಂಗ್ರಹಿಸಲಾದ 2.30 ಲಕ್ಷಕ್ಕೂ ಅಧಿಕ ಸಹಿ ಮಾಡಿದ ಮನವಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಮಂಗಳವಾರ ಪ್ರಧಾನಿ ನಿವಾಸದತ್ತ ಮೆರವಣಿಗೆ ನಡೆಸಲು ಹೊರಟಿದ್ದ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಪಕ್ಷದ ಇತರ ನಾಯಕರನ್ನ ದೆಹಲಿ ಪೊಲೀಸರು ತಡೆದರು. आज हमने E20 के विरोध में जनता की 2 लाख से अधिक petitions लेकर मोदी जी से मिलने की कोशिश की, लेकिन मोदी जी की पुलिस ने हमें रोक दिया। हमने सभी petitions मोदी जी को भेज दी हैं। मोदी जी, हमें अपनी ताकत दिखाने से क्या होगा? आप यही हिम्मत ट्रंप को दिखाइए और देश पर E20 थोपना बंद करिए।… pic.twitter.com/7rRUvLDgND — Arvind Kejriwal (@ArvindKejriwal) August 4, 2026 ದೆಹಲಿ ಪೊಲೀಸರು (Delhi Police) ಪ್ರಧಾನಿ ನಿವಾಸಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಎಎಪಿ ನಾಯಕಿ ಜಾಸ್ಮಿನ್ ಶಾ ಹಾಗೂ ಫಿರೋಜ್ ಶಾ ಸೇರಿದಂತೆ ಇತರ ನಾಯಕರು ರಸ್ತೆಯಲ್ಲಿ ಧರಣಿ ನಡೆಸಿದರು. ಇ20 ಪೆಟ್ರೋಲ್ ವಿರುದ್ಧ ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ 2.30 ಲಕ್ಷಕ್ಕೂ ಹೆಚ್ಚು ಸಹಿ ಮನವಿಗಳನ್ನು ಪ್ರಧಾನಿ ಅವರಿಗೆ ಸಲ್ಲಿಸುವ ಉದ್ದೇಶದಿಂದ ಸುಮಾರು 100 ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎಥೆನಾಲ್ (Ethanol) ಮಿಶ್ರಿತ ಪೆಟ್ರೋಲ್ ವಾಹನಗಳಿಗೆ ಹಾನಿ ಉಂಟುಮಾಡುತ್ತಿದೆ ಎಂದು ಹಲವು ವಾಹನ ಮಾಲೀಕರು ಆರೋಪಿಸುತ್ತಿದ್ದು, ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಈಗಾಗಲೇ ಸ್ಪಷ್ಟನೆ ನೀಡಿದರು. 2.30 ಲಕ್ಷ ಸಹಿ ಮನವಿಗಳೊಂದಿಗೆ ಪ್ರಧಾನಿ ನಿವಾಸದತ್ತ ಮೆರವಣಿಗೆಗೂ ಮುನ್ನ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೇಶದ ವಿವಿಧ ರಾಜ್ಯಗಳ ಜನರು ಸಹಿ ಹಾಕಿರುವ 2.30 ಲಕ್ಷಕ್ಕೂ ಅಧಿಕ ಮನವಿಗಳನ್ನು ಪ್ರಧಾನಿ ಅವರಿಗೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ದೇಶದ ವಿವಿಧ ಭಾಗಗಳಿಂದ 2.30 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿರುವ ಮನವಿಗಳನ್ನು ನಾವು ಪ್ರಧಾನಿ ನಿವಾಸಕ್ಕೆ ಕೊಂಡೊಯ್ಯುತ್ತಿದ್ದೇವೆ. ಇ20 ಪೆಟ್ರೋಲ್ನಿಂದ ತೊಂದರೆ ಅನುಭವಿಸುತ್ತಿರುವ ಕೋಟ್ಯಂತರ ವಾಹನ ಮಾಲೀಕರ ಆತಂಕವನ್ನ ಸರ್ಕಾರ ಆಲಿಸಬೇಕು ಎಂದು ಅವರು ಹೇಳಿದರು. ’30 ಕೋಟಿ ವಾಹನಗಳಿಗೆ ಹಾನಿಯಾಗುವ ಅಪಾಯ’ ಎಎಪಿ ನಾಯಕ ಅನುರಾಗ್ ಧಾಂಡಾ, ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ದೇಶದ ಸುಮಾರು 30 ಕೋಟಿ ವಾಹನಗಳಿಗೆ ಹಾನಿಯಾಗುವ ಅಪಾಯವಿದೆ ಎಂದು ಆರೋಪಿಸಿದರು. ಜನ ತುಂಬಾ ಆತಂಕದಲ್ಲಿದ್ದಾರೆ. ಸುಮಾರು 30 ಕೋಟಿ ವಾಹನಗಳು ಹಾನಿಗೊಳಗಾಗುವ ಪರಿಸ್ಥಿತಿ ಎದುರಿಸುತ್ತಿವೆ. ಆದರೂ ಪ್ರಧಾನಮಂತ್ರಿ ಯಾರ ಮಾತನ್ನೂ ಕೇಳುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಲೇ ಎಥೆನಾಲ್ ಅನ್ನು ದೇಶದ ಮೇಲೆ ಹೇರಲಾಗುತ್ತಿದೆ. ಅಲ್ಲಿನ ಉಳಿದ ಎಥೆನಾಲ್ ಅನ್ನು ಭಾರತಕ್ಕೆ ಕಳಿಸಲಾಗುತ್ತಿದೆ. ಇದು ಸರಿಯಲ್ಲ, ಜನರ ಧ್ವನಿಯನ್ನು ಸರ್ಕಾರ ಆಲಿಸಬೇಕು. ಪ್ರಧಾನಮಂತ್ರಿ ನಮ್ಮನ್ನ ಏಕೆ ಭೇಟಿಯಾಗುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು. ಕೆಲ ದಿನಗಳ ಹಿಂದಷ್ಟೇ ಎಎಪಿ ʻಎಥೆನಾಲ್ ಟೌನ್ಹಾಲ್ʼ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ, ಇ20 ಪೆಟ್ರೋಲ್ ವಿರುದ್ಧ ರಾಷ್ಟ್ರವ್ಯಾಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿತ್ತು. ಇದಕ್ಕೂ ಮುನ್ನ ಇ20 ಪೆಟ್ರೋಲ್ ಕುರಿತು ಚರ್ಚಿಸಲು ಸಮಯ ನೀಡುವಂತೆ ಅರವಿಂದ್ ಕೇಜ್ರಿವಾಲ್ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು.