ಡ್ರೋನ್ ದಾಳಿ–ಪ್ರತಿದಾಳಿ: ರಷ್ಯಾ, ಉಕ್ರೇನ್ನಲ್ಲಿ 10 ಸಾವು
ಮಾಸ್ಕೊ, ರಷ್ಯಾ : ರಷ್ಯಾ ರಾಜಧಾನಿ ಮಾಸ್ಕೊ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಉಕ್ರೇನ್ನ ಡ್ರೋನ್ಗಳು ನಡೆಸಿದ ದಾಳಿಗೆ 5 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ, ರಷ್ಯಾವು ನಡೆಸಿದ ವೈಮಾನಿಕ ದಾಳಿಯಿಂದ ಕನಿಷ್ಠ ಐದು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ತಿಳಿಸಿದ್ದಾರೆ.ನಾಲ್ಕು ವರ್ಷಗಳ ಹಿಂದೆ ರಷ್ಯಾವು ದಾಳಿ ಆರಂಭಿಸಿದ ಬ

ಮಾಸ್ಕೊ, ರಷ್ಯಾ : ರಷ್ಯಾ ರಾಜಧಾನಿ ಮಾಸ್ಕೊ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಉಕ್ರೇನ್ನ ಡ್ರೋನ್ಗಳು ನಡೆಸಿದ ದಾಳಿಗೆ 5 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ, ರಷ್ಯಾವು ನಡೆಸಿದ ವೈಮಾನಿಕ ದಾಳಿಯಿಂದ ಕನಿಷ್ಠ ಐದು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ತಿಳಿಸಿದ್ದಾರೆ.ನಾಲ್ಕು ವರ್ಷಗಳ ಹಿಂದೆ ರಷ್ಯಾವು ದಾಳಿ ಆರಂಭಿಸಿದ ಬಳಿಕ ದೀರ್ಘ ಶ್ರೇಣಿಯ ಡ್ರೋನ್ಗಳನ್ನು ಅಭಿವೃದ್ಧಿಪಡಿಸಿದೆ. ಇದರಿಂದ ರಷ್ಯಾ ನಗರದ ಒಳಗಡೆ ಪ್ರವೇಶಿಸಿ ದಾಳಿ ನಡೆಸಲು ಅನುಕೂಲವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ತೈಲ ಉತ್ಪಾದನಾ ಕೇಂದ್ರಗಳು, ಸಂಗ್ರಹಣಾ ಕೇಂದ್ರಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದೆ.‘ರಷ್ಯಾ ನಡೆಸಿದ ನಿರಂತರ ವೈಮಾನಿಕ ದಾಳಿಗಳಿಂದ ಉಕ್ರೇನ್ನಲ್ಲಿ ಇದುವರೆಗೆ 16 ಸಾವಿರ ನಾಗರಿಕರು ಮೃತಪಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ನಾಗರಿಕರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ’ ಎಂದು ವಿಶ್ವಸಂಸ್ಥೆ ತಿಳಿಸಿದೆ. ಸಾವಿನ ಸಂಖ್ಯೆ 7ಕ್ಕೆ ಏರಿಕೆ: ರಷ್ಯಾದ ಅರ್ಖಿಪೊ– ಒಸಿಪೊವ್ಕಾದ ಬ್ಲ್ಯಾಕ್ ಸೀ ರೆಸಾರ್ಟ್ನ ಮೇಲೆ ಸೋಮವಾರ ರಾತ್ರಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಮೂವರು ಮಕ್ಕಳು ಕೂಡ ಇವರಲ್ಲಿದ್ದಾರೆ. ದಾಳಿಯಲ್ಲಿ 58 ಮಂದಿ ಗಾಯಗೊಂಡಿದ್ದು, 21 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಜನದಟ್ಟಣೆ ಹೊಂದಿದ ಬೀಚ್ನ ಮೇಲೆ ಡ್ರೋನ್ ದಾಳಿ ನಡೆಸಿದ್ದು, ವೇಗವಾಗಿ ಗುಂಡು ಹಾರಿಸಿದಂತೆ ಕೇಳಿಸಿರುವುದು ಆನ್ಲೈನ್ನಲ್ಲಿ ಹರಿದಾಡಿರುವ ವಿಡಿಯೊದಿಂದ ಗೊತ್ತಾಗಿದೆ.ರಷ್ಯಾ ಪ್ರತಿದಾಳಿ: ಉಕ್ರೇನ್ನ ಬಂದರು, ಹಡಗು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿರಿಸಿ ರಷ್ಯಾವು ನಿರಂತರ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.ಉಕ್ರೇನ್ನ ದಕ್ಷಿಣ ಭಾಗದಲ್ಲಿರುವ ಒಡೆಸಾ ಪ್ರಾಂತ್ಯದ ಕ್ರೊನೊಮೊರ್ಸ್ಕ್ ಬಂದರಿನ ಮೇಲೆ ದಾಳಿ ನಡೆಸಿದ್ದು, ಆಟೊಮೊಬೈಲ್ ಬಿಡಿಭಾಗಗಳು, ಟರ್ಮಿನಲ್ಗೆ ತೀವ್ರ ಹಾನಿಯುಂಟಾಗಿದೆ. ಅದೇ ರೀತಿ ಮೈಕೊಲೈವ್ನಲ್ಲಿ ಸೇನೆಯ ಸರಕು ಸಾಗಿಸಲು ಅಣಿಯಾಗಿದ್ದ ಹಡಗಿನ ಮೇಲೂ ದಾಳಿ ನಡೆಸಿದೆ.ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತುಂಬಿದ್ದ ಹಡಗುಗಳ ಮೇಲೆ ದಾಳಿ ನಡೆಸಿದ್ದರಿಂದ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ಉಕ್ರೇನ್ ಖಚಿತಪಡಿಸಿದೆ.