ಧಾರವಾಡ | ವೈದ್ಯನ ಕೊಂದ ವೈದ್ಯ ಪತ್ನಿ ಆಸ್ಪತ್ರೆಯಿಂದಲೇ ಸೀದಾ ಜೈಲಿಗೆ!
ಧಾರವಾಡ: ಇಲ್ಲಿನ ವೈದ್ಯ (Doctor) ಕಿರಣ್ ಹೊನ್ನಣ್ಣವರ ಕೊಲೆ ಮಾಡಿದ್ದ ಪತ್ನಿ ಈಗ ಜೈಲುಪಾಲಾಗಿದ್ದಾಳೆ. ಕಳೆದ ಜುಲೈ 15 ರ ರಾತ್ರಿ ಧಾರವಾಡ ನಗರದ (Dharwad City) ಬಾರಾಕೋಟ್ರಿ ಬಳಿಯ ರಂಕಾ ಸ್ಟೇಲ್ಲೊ ಅಪಾರ್ಟ್ಮೆಂಟ್ ನಲ್ಲಿ ವೈದ್ಯ ಕಿರಣ್ ಪತ್ನಿ ಪ್ರಿಯಾಂಕಾ ಕೊಲೆ ಮಾಡಿದ್ದಳು. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯಲು ಪ್ರಯತ್ನ ಪಟ್ಟಿದ್ದಳು. ಇದನ್ನೂ ಓದಿ: ಕ

ಧಾರವಾಡ: ಇಲ್ಲಿನ ವೈದ್ಯ (Doctor) ಕಿರಣ್ ಹೊನ್ನಣ್ಣವರ ಕೊಲೆ ಮಾಡಿದ್ದ ಪತ್ನಿ ಈಗ ಜೈಲುಪಾಲಾಗಿದ್ದಾಳೆ. ಕಳೆದ ಜುಲೈ 15 ರ ರಾತ್ರಿ ಧಾರವಾಡ ನಗರದ (Dharwad City) ಬಾರಾಕೋಟ್ರಿ ಬಳಿಯ ರಂಕಾ ಸ್ಟೇಲ್ಲೊ ಅಪಾರ್ಟ್ಮೆಂಟ್ ನಲ್ಲಿ ವೈದ್ಯ ಕಿರಣ್ ಪತ್ನಿ ಪ್ರಿಯಾಂಕಾ ಕೊಲೆ ಮಾಡಿದ್ದಳು. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯಲು ಪ್ರಯತ್ನ ಪಟ್ಟಿದ್ದಳು. ಇದನ್ನೂ ಓದಿ: ಕಾರು ಅಪಘಾತದಲ್ಲಿ ಯುವತಿ ಸಾವು – ಬರ್ತ್ಡೇ ಆಚರಣೆಗೆ ಕರೆದು ರೇಪ್ಗೆ ಯತ್ನಿಸಿ ಕೊಲೆ ಆರೋಪ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಕಿರಣ್ನ ಪತ್ನಿ ಪ್ರಿಯಾಂಕಾ, ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾದರು. ಪೊಲೀಸರು ಕೊನೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (Hubli KIMS Hospital) ಚಿಕಿತ್ಸೆಗೆ ದಾಖಲಿಸಿದ್ದರು. ಸದ್ಯ ಪತಿಯ ಕೊಲೆ ಮಾಡಿದ್ದ ಪ್ರಿಯಾಂಕಾ ಆರೋಗ್ಯ ಸುಧಾರಿಸಿದ ಹಿನ್ನೆಲೆ ಜೈಲಿಗಟ್ಟಿದ್ದಾರೆ. ಪತಿ ಕಿರಣ್ ಕೊಲೆ ಆರೋಪದ ಮೇಲೆ ಪತ್ನಿಗೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಆದರೆ ಪತಿಯ ಕೊಲೆ ಹೇಗೆ ಮಾಡಿದಳು ಎಂದು ಬಾಯಿ ಬಿಡದ ಪ್ರಿಯಾಂಕಾ, ತಾನೂ ಎರಡು ತೊಡೆಗೆ ಮತ್ತು ಹೊಟ್ಟೆಗೆ ಇನ್ಸುಲಿನ್ ತೆಗೆದುಕೊಂಡು ಸಾವನ್ನಪ್ಪಲು ಪ್ರಯತ್ನ ಮಾಡಿದ ಬಗ್ಗೆ ಮಾತ್ರ ಬಾಯಿ ಬಿಟ್ಟಿದ್ದಾಳೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿತ್ತು. ಇದನ್ನೂ ಓದಿ: CRPF ಕ್ಯಾಂಪ್ನಲ್ಲಿ ಗುಂಡಿನ ಚಕಮಕಿ: ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಸೈನಿಕ ಆತ್ಮಹತ್ಯೆ