ನಟಿ ತ್ರಿಷಾ ವಿರುದ್ಧ ಹೇಳಿಕೆ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ, ಬಿಡುಗಡೆ
ಚೆನ್ನೈ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಾಗೂ ಅವರ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ತಮಿಳುನಾಡು ವಿರೋಧ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದರು.ವಿಚಾರಣೆಯ ನಂತರ ರಾತ್ರಿ 8ರ ಸುಮಾರಿಗೆ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಘಟನೆಯು ತಮಿಳುನಾಡಿನಲ್ಲಿ ವಿವಾದ ಸೃಷ್ಟಿ

ಚೆನ್ನೈ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಾಗೂ ಅವರ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ತಮಿಳುನಾಡು ವಿರೋಧ ಪಕ್ಷದ ನಾಯಕ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದರು.ವಿಚಾರಣೆಯ ನಂತರ ರಾತ್ರಿ 8ರ ಸುಮಾರಿಗೆ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಘಟನೆಯು ತಮಿಳುನಾಡಿನಲ್ಲಿ ವಿವಾದ ಸೃಷ್ಟಿಸಿದೆ.ಉದಯನಿಧಿ ಅವರನ್ನು ಬಂಧಿಸಲು ಬಂದ ಪೊಲೀಸ್ ಕ್ರಮವನ್ನು ವಿರೋಧಿಸಿ ಡಿಎಂಕೆ ಕಾರ್ಯಕರ್ತರು ಇಲ್ಲಿನ ನೀಲಾಂಗರೈನಲ್ಲಿರುವ ಅವರ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಬೆಳಿಗ್ಗೆ ಗೊಂದಲದ ವಾತಾವರಣ ನಿರ್ಮಾಣವಾಯಿತು.ತಂಜಾವೂರು ಪೊಲೀಸರು ಉದಯನಿಧಿ ಅವರ ನಿವಾಸಕ್ಕೆ ಬಂದ ತಕ್ಷಣವೇ ಡಿಎಂಕೆ, ಮದ್ರಾಸ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿತು. ಆದರೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುವ ಮೊದಲೇ ಉದಯನಿಧಿ ಅವರನ್ನು ಬಂಧಿಸಲಾಯಿತು.ಉದಯನಿಧಿ ಸ್ಟಾಲಿನ್ರನ್ನು ಇಂದೇ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮಕ್ಕೆ SC ನಕಾರಏನಿದು ಪ್ರಕರಣ?ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಪ್ರತಿಭಟನೆಯಲ್ಲಿ ಉದಯನಿಧಿ ಮಾತನಾಡಿದ್ದರು. ಈ ವೇಳೆ ತ್ರಿಷಾ ವಿರುದ್ಧ ಅವಹೇಳನಕಾರಿ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಂಜಾವೂರು ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಎಸ್.ಬೈರವಿ ಅವರು ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಉದಯನಿಧಿ ವಿರುದ್ಧ ದೂರು ನೀಡಿದ್ದರು.‘ಆ.3ರಂದು ನಡೆದ ಪ್ರತಿಭಟನೆಯಲ್ಲಿ ಉದಯನಿಧಿ ಅವರು ಭಾಷಣ ಮಾಡುತ್ತಿದ್ದಾಗ ಕೆಲವರು ‘ತ್ರಿಷಾ, ತ್ರಿಷಾ’ ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ಉದಯನಿಧಿ ದ್ವಂದ್ವಾರ್ಥದ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಮಹಿಳಾ ಆಯೋಗಕ್ಕೂ ದೂರು: ಟಿವಿಕೆ ರಾಷ್ಟ್ರೀಯ ವಕ್ತಾರ ಪಿ.ಸೆಲ್ವಕುಮಾರ್ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಅಧಿಕೃತ ದೂರು ಸಲ್ಲಿಸಿದ್ದಾರೆ. ಉದಯನಿಧಿ ಅವರಿಂದ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸುವಂತೆ ಹಾಗೂ ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸುವಂತೆ ಆಡಳಿತ ಪಕ್ಷವು ಆಯೋಗವನ್ನು ಕೋರಿದೆ.‘ನ್ಯಾಯಾಲಯವೇ ನಿರ್ಧರಿಸಲಿ’ಪೊಲೀಸರು ಬಂಧಿಸಿ ಕರೆದೊಯ್ದ ವೇಳೆ ಉದಯನಿಧಿ ಅವರು ಅಲ್ಲಿ ಸೇರಿದ್ದ ಪತ್ರಕರ್ತರಿಗೆ ‘ಎಲ್ಲವನ್ನೂ ನ್ಯಾಯಾಲಯವೇ ನಿರ್ಧರಿಸುತ್ತದೆ’ ಎಂದು ಹೇಳಿದರು.‘ತಂಜಾವೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ನಾನು ಬೇರೆ ಯಾರ ಹೆಸರನ್ನಾದರೂ ಪ್ರಸ್ತಾಪಿಸಿದ್ದೇನೆಯೇ? ಹಾಗಾದರೆ ಇದೆಲ್ಲಾ (ಬಂಧನ) ಏಕೆ ನಡೆಯುತ್ತಿದೆ ಎಂದು ನೀವು ಭಾವಿಸುವಿರಿ? ನ್ಯಾಯಾಲಯವೇ ನಿರ್ಧರಿಸಲಿ’ ಎಂದರು.