ಸಾಯಿ ಪಲ್ಲವಿ ಮಾಡ್ರನ್ ಸೀತೆ ಅಂತ ಟ್ರೋಲ್ – ರಾಮಾಯಣ ಕಾಸ್ಟ್ಯೂಮ್ ಡಿಸೈನರ್ಸ್ ಹೇಳಿದ್ದೇನು?
ರಾಮಾಯಣ ಚಿತ್ರದ ಟ್ರೈಲರ್ನಲ್ಲಿ (Ramayana Film) ಸಾಯಿ ಪಲ್ಲವಿಯ (Sai Pallavi) ಉಡುಗೆಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಬಾರೀ ಟ್ರೋಲ್ ಕೇಳಿಬರುತ್ತಿದ್ದು, ಈ ಕುರಿತು ಸ್ವತಃ ಸಿನಿಮಾದ ಕಾಸ್ಟ್ಯೂಮ್ ಡಿಸೈನರ್ಗಳಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ. ಟ್ರೈಲರ್ ಬಿಡುಗಡೆಯಾದ ಬಳಿಕ ಸಾಯಿ ಪಲ್ಲವಿ ಮತ್ತು ಲಾರಾ ದತ್ತ ಅವರ

ರಾಮಾಯಣ ಚಿತ್ರದ ಟ್ರೈಲರ್ನಲ್ಲಿ (Ramayana Film) ಸಾಯಿ ಪಲ್ಲವಿಯ (Sai Pallavi) ಉಡುಗೆಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಬಾರೀ ಟ್ರೋಲ್ ಕೇಳಿಬರುತ್ತಿದ್ದು, ಈ ಕುರಿತು ಸ್ವತಃ ಸಿನಿಮಾದ ಕಾಸ್ಟ್ಯೂಮ್ ಡಿಸೈನರ್ಗಳಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ. ಟ್ರೈಲರ್ ಬಿಡುಗಡೆಯಾದ ಬಳಿಕ ಸಾಯಿ ಪಲ್ಲವಿ ಮತ್ತು ಲಾರಾ ದತ್ತ ಅವರ ಪಾತ್ರಗಳ ಉಡುಗೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಧರಿಸಿರುವ ಉಡುಗೆ ಆಧುನಿಕ ಶೈಲಿಯಲ್ಲಿದೆ ಎಂದು ಹಲವರು ಟೀಕೆ ಮಾಡಿದ್ದರು. ಕೆಲವರು ಈ ಲುಕ್ ಪೌರಾಣಿಕ ಪಾತ್ರಕ್ಕೆ ಹೊಂದಿಕೆಯಾಗಿಲ್ಲ ಎಂದೂ ಕಾಮೆಂಟ್ ಮಾಡಿದ್ದರು. ಇದೀಗ ಈ ಟೀಕೆಗಳಿಗೆ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಗಳಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ಮೊದಲೇ ಗೊತ್ತಿತ್ತು. ಆದರೆ, ನಾವು ಪಾರಂಪರ್ಯತೆಗೆ ಧಕ್ಕೆ ಬಾರದಂತೆ ಸಾಕಷ್ಟು ಅಧ್ಯಯನ ಮಾಡಿ ಉಡುಗೆಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಸೀತೆಯ ಉಡುಗೆ ಬಗ್ಗೆ ಮಾತನಾಡಿದ ರಿಂಪಲ್, ಪುರಾಣಗಳಲ್ಲಿ ಇರುವ ಚಿತ್ರಗಳನ್ನು ಮಾತ್ರ ನೋಡಲಿಲ್ಲ. ನಾನು ಪೂಜಿಸುವ ಸೀತಾ ದೇವಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ವಿನ್ಯಾಸ ಮಾಡಿದ್ದೇನೆ. ಹೊಸತನ ತರಬೇಕು ಎನ್ನುವ ಉದ್ದೇಶದಿಂದಲೇ ಈ ಲುಕ್ ರೂಪಿಸಿದ್ದೇವೆʼ ಎಂದು ಹೇಳಿದರು. ಸಂಶೋಧನೆಯೇ ನಮ್ಮ ಕೆಲಸದ ಅಡಿಪಾಯ. ಆದರೆ, ಅದರ ಜೊತೆ ಕಲಾತ್ಮಕ ದೃಷ್ಟಿಕೋನವೂ ಮುಖ್ಯ. ರಾಮಾಯಣವನ್ನು ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ನಮ್ಮ ದೃಷ್ಟಿಕೋನದ ರಾಮಾಯಣ ಎಂದು ವಿವರಿಸಿದರು.ಇದನ್ನೂ ಓದಿ: ಸನಾತನ ಧರ್ಮ ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ – ಉದಯನಿಧಿ ಬಂಧನಕ್ಕೆ ಕುಟುಕಿದ ಅಮಿತ್ ಮಾಳವೀಯ ಕೈಕೇಯಿ ಪಾತ್ರದ ಉಡುಗೆಗೂ ಟ್ರೋಲ್ ಬಂದಿರುವ ಬಗ್ಗೆ ಮಾತನಾಡಿದ ಹರ್ಪ್ರೀತ್, ಕೈಕೇಯಿಯ ಉಡುಗೆಯ ಪ್ರತಿಯೊಂದು ಬಣ್ಣಕ್ಕೂ ಅರ್ಥವಿದೆ. ಹಸಿರು ಬಣ್ಣ ತಾಯ್ತನವನ್ನು ಸೂಚಿಸುತ್ತದೆ. ಗಾಢ ಮೆರೂನ್ ಬಣ್ಣ ಆಕೆಯ ಮನಸ್ಸಿನ ಸಂಘರ್ಷವನ್ನು ತೋರಿಸುತ್ತದೆ. ಪ್ರತಿಯೊಂದು ವಿನ್ಯಾಸದ ಹಿಂದೆ ಒಂದು ಆಲೋಚನೆ ಇದೆ. ಅದನ್ನು ಅರ್ಥಮಾಡಿಕೊಳ್ಳುವ ಮುನ್ನವೇ ಕೆಲವರು ಟೀಕೆ ಮಾಡುತ್ತಿದ್ದಾರೆ ಎಂದರು. ಪ್ರಾಚೀನ ಕಥೆಯನ್ನು ಇಂದಿನ ಪೀಳಿಗೆಗೆ ಹೊಸ ರೀತಿಯಲ್ಲಿ ತಲುಪಿಸುವ ಪ್ರಯತ್ನ ಇದು. ಸಿನಿಮಾ ನೋಡದೆ ತೀರ್ಮಾನ ಮಾಡಬೇಡಿ. ಮೊದಲು ಸಿನಿಮಾ ನೋಡಿ, ನಂತರ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಅವರು ಮನವಿ ಮಾಡಿದರು. ಜುಲೈ 30ರಂದು ಬಿಡುಗಡೆಯಾದ ರಾಮಾಯಣ ಚಿತ್ರದ ಟ್ರೇಲರ್ನಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಪಾತ್ರಗಳ ಉಡುಗೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮುಂದುವರಿದಿದೆ.ಇದನ್ನೂ ಓದಿ: ಅಮೆರಿಕಾ ಅಮೆರಿಕಾ 2ಕ್ಕೆ ಮನೋಮೂರ್ತಿ ಮ್ಯೂಸಿಕ್