ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿ ರೀ ಓಪನ್? ಕೆಲವೇ ಗಂಟೆಗಳಲ್ಲಿ ಅಮೆರಿಕ–ಇರಾನ್ ಒಪ್ಪಂದ ಸಾಧ್ಯ
– ಟ್ರಂಪ್ ಆಡಳಿತದ ಅಧಿಕಾರಿಯಿಂದ ಬಿಗ್ ಅಪ್ಡೇಟ್ ವಾಷಿಂಗ್ಟನ್/ಟೆಹ್ರಾನ್: ಅಮೆರಿಕ – ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವ ನಡುವೆಯೇ ಗುಡ್ನ್ಯೂಸ್ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯನ್ನ (Strait of Hormuz) ಪುನಃ ತೆರೆಯಲು ಅಮೆರಿಕ ಮತ್ತು ಇರಾನ್ ನಡುವೆ ಮಂಗಳವಾರ ಅಥವಾ ಬುಧವಾರದೊಳಗೆ ಮಹತ್ವದ ಒಪ್ಪಂದವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಖಜಾ

– ಟ್ರಂಪ್ ಆಡಳಿತದ ಅಧಿಕಾರಿಯಿಂದ ಬಿಗ್ ಅಪ್ಡೇಟ್ ವಾಷಿಂಗ್ಟನ್/ಟೆಹ್ರಾನ್: ಅಮೆರಿಕ – ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವ ನಡುವೆಯೇ ಗುಡ್ನ್ಯೂಸ್ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯನ್ನ (Strait of Hormuz) ಪುನಃ ತೆರೆಯಲು ಅಮೆರಿಕ ಮತ್ತು ಇರಾನ್ ನಡುವೆ ಮಂಗಳವಾರ ಅಥವಾ ಬುಧವಾರದೊಳಗೆ ಮಹತ್ವದ ಒಪ್ಪಂದವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (Scott Bessent) ತಿಳಿಸಿದ್ದಾರೆ. ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳು ಮುಂದುವರಿದಿದ್ದು, ಕೆಲವೇ ದಿನಗಳಲ್ಲಿ ಮಹತ್ವದ ಪ್ರಗತಿ ಕಾಣಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು. ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ ನಾವು ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಇಂದು ಅಥವಾ ನಾಳೆಯೊಳಗೆ ಜಲಸಂಧಿ ತೆರೆಯುವ ಹಾಗೂ ಈ ಸಂಘರ್ಷ ಸಾಮಾನ್ಯ ಸ್ಥಿತಿಯತ್ತ ಕೊಂಡೊಯ್ಯುವ ಒಪ್ಪಂದ ಸಾಧ್ಯತೆ ಇದೆ. ಒಪ್ಪಂದದ ಭಾಗವಾಗಿ ಇರಾನ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಂದ ಟೋಲ್ (ಶುಲ್ಕ) ವಸೂಲಿ ಮಾಡಲು ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಒಪ್ಪಂದವು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ (Freedom of Movement) ಅವಕಾಶ ಕಲ್ಪಿಸುತ್ತದೆ ಎಂದರು. ತೈಲ ಬೆಲೆಯಲ್ಲಿ ಇಳಿಕೆ ಬೆಸೆಂಟ್ ಅವರ ಹೇಳಿಕೆಯ ಬಳಿಕ ಅಮೆರಿಕದ ಕಚ್ಚಾ ತೈಲ (US Crude) ಭವಿಷ್ಯ ವಹಿವಾಟಿನ ಬೆಲೆ ಸುಮಾರು 3 ಶೇಕಡಾ ಇಳಿದು, ಪ್ರತಿ ಬ್ಯಾರೆಲ್ಗೆ 78 ಡಾಲರ್ಗಿಂತ ಕೆಳಗೆ ತಲುಪಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿರುವ ವಾಣಿಜ್ಯ ಹಡಗುಗಳು ಮತ್ತೆ ಸಂಚಾರ ಆರಂಭಿಸಿದರೆ ತೈಲ ಮಾತ್ರವಲ್ಲದೆ ಹಲವು ಉತ್ಪನ್ನಗಳ ಬೆಲೆಯಲ್ಲೂ ಮತ್ತಷ್ಟು ಇಳಿಕೆ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು. ಮಾತುಕತೆಗಾಗಿ ದಾಳಿ ಮುಂದೂಡಿದ್ದ ಟ್ರಂಪ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಮಾತನಾಡಿ, ಹಾರ್ಮುಜ್ ಜಲಸಂಧಿ ಪುನಃ ತೆರೆಯುವ ಕುರಿತು ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇರಾನ್ ಮೇಲಿನ ಪ್ರಮುಖ ದಾಳಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾಗಿ ತಿಳಿಸಿದ್ದರು.