ಟರ್ಬುಲೆನ್ಸ್: ಏಕಾಏಕಿ ಕೆಳಕ್ಕೆ ಕುಸಿದ ಏರ್ ಇಂಡಿಯಾ ವಿಮಾನ; 12 ಜನರಿಗೆ ಗಾಯ
ನವದೆಹಲಿ: ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳವಾರ ತೀವ್ರ ಟರ್ಬುಲೆನ್ಸ್ಗೆ (ಗಾಳಿಯ ಒತ್ತಡದಲ್ಲಿ ದಿಢೀರ್ ಬದಲಾವಣೆ) ಸಿಲುಕಿದ ಪರಿಣಾಮ ಸಿಬ್ಬಂದಿ ಸೇರಿದಂತೆ 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಘಟನೆಯಲ್ಲಿ ವಿಮಾನಕ್ಕೂ ಸ್ವಲ್ಪ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿದ್ದ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷ

ನವದೆಹಲಿ: ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳವಾರ ತೀವ್ರ ಟರ್ಬುಲೆನ್ಸ್ಗೆ (ಗಾಳಿಯ ಒತ್ತಡದಲ್ಲಿ ದಿಢೀರ್ ಬದಲಾವಣೆ) ಸಿಲುಕಿದ ಪರಿಣಾಮ ಸಿಬ್ಬಂದಿ ಸೇರಿದಂತೆ 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಘಟನೆಯಲ್ಲಿ ವಿಮಾನಕ್ಕೂ ಸ್ವಲ್ಪ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿದ್ದ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿದಿದ್ದಾರೆ.@airindia 2379 Phuket-Delhi encountered clear air turbulence during descentHearing some pax suffered minor injuries and ✈️ also slightly damaged. This yet to be confirmed Awaiting comments from AI pic.twitter.com/Elq5PoEjEK— Saurabh Sinha (@27saurabhsinha) August 4, 2026 ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ ಸಂಸ್ಥೆಯು, ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಎಐ–379 ವಿಮಾನ ಟರ್ಬುಲೆನ್ಸ್ಗೆ ಸಿಲುಕಿ ತಕ್ಷಣಕ್ಕೆ ನೂರಾರು ಅಡಿಗಳಷ್ಟು ಕೆಳಕ್ಕೆ ಕುಸಿಯಿತು ಎಂದು ತಿಳಿಸಿದೆ.ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿರುವ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿಗೆ ನಿಲ್ದಾಣದಲ್ಲಿರುವ ವೈದ್ಯಕೀಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ ಕುಸಿಯಿತು. ಇದರಿಂದ ನನ್ನ ತಲೆ ಚಾವಣಿಗೆ ಬಡಿದು ಕೆಳಕ್ಕೆ ಬಿದ್ದೆ ಎಂದು ಘಟನೆ ಬಗ್ಗೆ ಪ್ರಯಾಣಿಕರೊಬ್ಬರು ಹೇಳಿದ್ದಾರೆ.ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ವಿಮಾನ ಕಂಡರೆ ಭಯವಾಗುತ್ತದೆ: ‘ಏರ್ ಇಂಡಿಯಾ’ ಪತನ ವಿಡಿಯೊ ಸೆರೆ ಹಿಡಿದ ಯುವಕನ ಮಾತುಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಪಾಕ್ ವಾಯು ನೆಲೆ ಪ್ರವೇಶ