ಬೆಂಗಳೂರಿನ ಹಲವು ಭಾಗಗಳಲ್ಲಿ ಸಾಧಾರಣ ಮಳೆ
ಬೆಂಗಳೂರು: ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಇಂದು ಬೆಂಗಳೂರಿನ (Bengaluru) ಹಲವು ಭಾಗಗಳಲ್ಲಿ ಸಾಧಾರಣ (Rain) ಮಳೆಯಾಗಿದೆ. ಸಂಜೆ ಕೆಲಸ ಮುಗಿಸಿ ಹೊರಟಿದ್ದವರಿಗೆ ವರುಣನ ಸಿಂಚನವಾಗಿದೆ. ಮೈಸೂರು ರಸ್ತೆ, ಬ್ಯಾಟರಾಯನಪುರ, ಬಾಪೂಜಿನಗರ, ನಾಯಂಡಹಳ್ಳಿ, ದೀಪಾಂಜಲಿ ನಗರ ಹಾಗೂ ವಿಜಯನಗರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಸುತ್

ಬೆಂಗಳೂರು: ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಇಂದು ಬೆಂಗಳೂರಿನ (Bengaluru) ಹಲವು ಭಾಗಗಳಲ್ಲಿ ಸಾಧಾರಣ (Rain) ಮಳೆಯಾಗಿದೆ. ಸಂಜೆ ಕೆಲಸ ಮುಗಿಸಿ ಹೊರಟಿದ್ದವರಿಗೆ ವರುಣನ ಸಿಂಚನವಾಗಿದೆ. ಮೈಸೂರು ರಸ್ತೆ, ಬ್ಯಾಟರಾಯನಪುರ, ಬಾಪೂಜಿನಗರ, ನಾಯಂಡಹಳ್ಳಿ, ದೀಪಾಂಜಲಿ ನಗರ ಹಾಗೂ ವಿಜಯನಗರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಸುತ್ತಮುತ್ತಲೂ ಸಹ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಅರಿಶಿನಕುಂಟೆ, ಮಾದನಾಯಕನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ತುಂತುರು ಮಳೆ ಸುರಿದು ಬಿಸಿಲಿನ ವಾತಾವರಣಕ್ಕೆ ತಂಪು ತಂದಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಸುಮಾರು ಒಂದು ಗಂಟೆಯ ಕಾಲ ತುಂತುರು ಮಳೆಯಾಗಿದೆ. ವರುಣನ ಆಗಮನದಿಂದ ವಾತಾವರಣ ತಂಪಾಗಿದೆ.ಇದನ್ನೂ ಓದಿ: ಧಾರವಾಡ | ವೈದ್ಯನ ಕೊಂದ ವೈದ್ಯ ಪತ್ನಿ ಆಸ್ಪತ್ರೆಯಿಂದಲೇ ಸೀದಾ ಜೈಲಿಗೆ!
Read the complete story at Public TV Kannada