ನವಮಿ ತಿಥಿ: ಶಿವ–ಪಾರ್ವತಿ ಆರಾಧನೆಯಿಂದ ಸಂತಾನ ದೋಷ ನಿವಾರಣೆ
2026ರ ಆಗಸ್ಟ್ 7ರಂದು ನವಮಿ ತಿಥಿ ಇದ್ದು, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನ ಕೃತ್ತಿಕಾ ನಕ್ಷತ್ರ ಇರುತ್ತದೆ. ಜಾತಕದಲ್ಲಿ ಸಂತಾನ ದೋಷ ಮತ್ತು ವಿವಾಹಕ್ಕೆ ಉಂಟಾಗುವ ಅಡಚಣೆಗಳಿದ್ದರೆ, ಈ ದಿನದ ಪೂಜೆ ಸಲ್ಲಿಸುವುದರಿಂದ ಪರಿಹಾರ ಪಡೆಯಬಹುದು. ಪ್ರತಿಯೊಂದು ಸ್ತ್ರೀಯರಲ್ಲಿಯೂ ದುರ್ಗೆಯ ಅಂಶ ಇರುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ಆಷಾಢ ಮಾಸದ ಶುಕ್ರವಾರದಂದು ಮನ

2026ರ ಆಗಸ್ಟ್ 7ರಂದು ನವಮಿ ತಿಥಿ ಇದ್ದು, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನ ಕೃತ್ತಿಕಾ ನಕ್ಷತ್ರ ಇರುತ್ತದೆ. ಜಾತಕದಲ್ಲಿ ಸಂತಾನ ದೋಷ ಮತ್ತು ವಿವಾಹಕ್ಕೆ ಉಂಟಾಗುವ ಅಡಚಣೆಗಳಿದ್ದರೆ, ಈ ದಿನದ ಪೂಜೆ ಸಲ್ಲಿಸುವುದರಿಂದ ಪರಿಹಾರ ಪಡೆಯಬಹುದು. ಪ್ರತಿಯೊಂದು ಸ್ತ್ರೀಯರಲ್ಲಿಯೂ ದುರ್ಗೆಯ ಅಂಶ ಇರುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ಆಷಾಢ ಮಾಸದ ಶುಕ್ರವಾರದಂದು ಮನೆ ಮಗಳಿಂದ ಲಕ್ಷ್ಮೀ ಪೂಜೆಯನ್ನು ಮಾಡಿಸುವುದು ಹೆಚ್ಚು ಲಾಭಕರವಾಗಿದೆ.ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿಗುರುಪೂರ್ಣಿಮೆ: ಮಿಥುನ, ಕನ್ಯಾ ಲಗ್ನಗಳಲ್ಲಿ ಜನಿಸಿದವರಿಗೆ ವಿಶೇಷ ಫಲಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು, ಶನಿ ಗ್ರಹಗುರು ಗ್ರಹಇದೇ ಕಾರಣದಿಂದಾಗಿ ಶುಕ್ರವಾರ ಮತ್ತು ಮಂಗಳವಾರದಂದು ಸೊಸೆಯನ್ನಾಗಲಿ ಅಥವಾ ಮಗಳನ್ನಾಗಲಿ ಮನೆಯಿಂದ ಬೇರೆಡೆ ಕಳಿಸುವುದಿಲ್ಲ. ಇದೇ ರೀತಿಯಲ್ಲಿ ನವಮಿಯ ದಿನದಂದು ಸ್ತ್ರೀಯರಾಗಲಿ, ಪುರುಷರಾಗಲಿ ಪ್ರಯಾಣ ಮಾಡಬಾರದು. ಅನಿವಾರ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಭಂದ ಇರುವುದಿಲ್ಲ.ಕೃತ್ತಿಕಾ ನಕ್ಷತ್ರದ ದಿನ ಸುಬ್ರಹ್ಮಣ್ಯಸ್ವಾಮಿ ಪೂಜೆಗೆ ಹೆಚ್ಚು ಶ್ರೇಷ್ಠವಾಗಿದೆ. ಸಂತಾನದೋಷವುಳ್ಳ ದಂಪತಿಗಳು ಈ ದಿನದಂದು ಸುಬ್ರಹ್ಮಣ್ಯಸ್ವಾಮಿಯ ಪೂಜೆಯನ್ನು ಮಾಡಿದಲ್ಲಿ, ಕುಂಡಲಿಯಲ್ಲಿನ ಸಂತಾನದೋಷವು ಪರಿಹಾರಗೊಳ್ಳುತ್ತದೆ. ಶಿವ ಪಾರ್ವತಿಯು ಪೂಜೆಯನ್ನು ಮಾಡಿದಲ್ಲಿ, ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಶಿವ ಪರಿವಾರದ ಪೂಜೆಯಿಂದ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ಲಕ್ಷ್ಮೀ ಸಮೇತ ಭಗವಾನ್ ವಿಷ್ಣುವನ್ನು ಆರಾಧಿಸಿದರೆ, ದಂಪತಿಗಳ ನಡುವಿನ ಮನಸ್ತಾಪ ಕೊನೆಗೊಳ್ಳುತ್ತದೆ.ಈ ದಿನದಂದು ಸುಬ್ರಹ್ಮಣ್ಯಸ್ವಾಮಿಗೆ ವಿಭೂತಿಯ ಅಭಿಷೇಕವನ್ನು ಮಾಡಿ ಪಂಚಾಮೃತವನ್ನು ನೇವೇದ್ಯ ಮಾಡಬೇಕು. ಸಾಧ್ಯವಾದರೆ, ಮಾವಿನ ಹಣ್ಣಿನ ರಸವನ್ನು ಬ್ರಹ್ಮಚಾರಿಗಳಿಗೆ ನೀಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಫಲತೆ ಕಂಡುಬರುತ್ತದೆ.ಮಿಥುನ ರಾಶಿಯಲ್ಲಿ ಕುಜ ಸಂಚಾರ: ವ್ಯವಸಾಯ, ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭಗುರುಪೂರ್ಣಿಮೆ: ಮಿಥುನ, ಕನ್ಯಾ ಲಗ್ನಗಳಲ್ಲಿ ಜನಿಸಿದವರಿಗೆ ವಿಶೇಷ ಫಲವಿಷ್ಣುವಿನ ದೇವಾಲಯಕ್ಕೆ ಬೆಣ್ಣೆಯನ್ನು ನೀಡುವುದರಿಂದ ಕಣ್ಣಿನ ದೃಷ್ಠಿಯಿಂದ ಪಾರಾಗಬಹುದು. 10 ವರ್ಷದ ಒಳಗಿನ ಹತ್ತು ಜನ ಹೆಣ್ಣುಮಕ್ಕಳಿಗೆ ಮಲ್ಲಿಗೆ ಹೂ, ಹಸಿರುಬಣ್ಣದ ವಸ್ತ್ರ ಹಾಗೂ ತಾಂಬೂಲವನ್ನು ನೀಡಬೇಕು. ಇದರಿಂದ ಮಕ್ಕಳ ಜೀವನದಲ್ಲಿ ಆರ್ಥಿಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.ಪರಮೇಶ್ವರನಿಗೆ ರುದ್ರಾಭಿಷೇಕವನ್ನು ಮಾಡಿಸಿ, ಬಿಲ್ವಾರ್ಚನೆಯನ್ನು ಮಾಡಬೇಕು. ಇದರಿಂದ ಅಪಮೃತ್ಯು ಪರಿಹಾರವಾಗುತ್ತದೆ. ದೀರ್ಘಕಾಲದಿಂದ ಕಾಡುವ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ. ಪಾರ್ವತಿಯನ್ನು ದುರ್ಗಾಸುಕ್ತದಿಂದ ಪೂಜಿಸಿದಲ್ಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.ಬೆಳಿಗ್ಗೆ 8 ಗಂಟೆಯೊಳಗೆ ಗೋಪೂಜೆ ಅಥವಾ ಗೋದಾನದಿಂದ ವಿಶೇಷ ಫಲಗಳು ದೊರೆಯುತ್ತವೆ. ಸತತವಾಗಿ ಗರ್ಭಸ್ರಾವ ಆಗುತ್ತಿದ್ದಲ್ಲಿ ಉತ್ತಮ ಪರಿಹಾರ ದೊರೆಯುತ್ತದೆ.