ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳೋಕೆ ರಾಯರ ಮೊರೆ – ಮಠದ ಹುಂಡಿಯಲ್ಲಿ ಪತ್ತೆಯಾಯ್ತು ವಿಚಿತ್ರ ಹರಕೆ ಪತ್ರ
ಬೆಳಗಾವಿ: ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಭಕ್ತರೊಬ್ಬರು ರಾಯರಿಗೆ ಮೊರೆ ಇಟ್ಟಿರುವ ವಿಚಿತ್ರ ಹರಕೆ ಘಟನೆ ಜಿಲ್ಲೆಯ ರಾಮದುರ್ಗ (Ramadurga) ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ (Shri Raghavendra Swamy) ಮಠದಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ರಾಘವೇಂದ್ರ ಮಠದಲ್ಲಿ ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ಈ ವಿಚಿತ್ರ ಹರಕೆ ಪತ್ರ ಪತ್ತೆಯಾಗಿದೆ. ರಾಯರೇ ಆ ಹುಡ

ಬೆಳಗಾವಿ: ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಭಕ್ತರೊಬ್ಬರು ರಾಯರಿಗೆ ಮೊರೆ ಇಟ್ಟಿರುವ ವಿಚಿತ್ರ ಹರಕೆ ಘಟನೆ ಜಿಲ್ಲೆಯ ರಾಮದುರ್ಗ (Ramadurga) ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ (Shri Raghavendra Swamy) ಮಠದಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ರಾಘವೇಂದ್ರ ಮಠದಲ್ಲಿ ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ಈ ವಿಚಿತ್ರ ಹರಕೆ ಪತ್ರ ಪತ್ತೆಯಾಗಿದೆ. ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು ಎಂದು ಭಕ್ತನೋರ್ವ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ: ನನಗೆ ಕರೆದು ಸಚಿವ ಸ್ಥಾನ ಕೊಟ್ಟರು: ಹೆಚ್ಡಿಕೆ ಪರ ಬ್ಯಾಟ್ ಬೀಸಿದ ಶ್ರೀನಿವಾಸ್ ಪತ್ರದಲ್ಲಿ ಏನಿದೆ? ಆರಂಭದಲ್ಲಿ ಶ್ರೀ ಗಣಪತಿಯೇ ನಮಃ ಹಾಗೂ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಬರೆಯಲಾಗಿದೆ. ಮುಂದುವರೆದು, ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು, ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು, ರಾಯರೇ ಈ ಕಷ್ಟದಿಂದ ನಮ್ಮನ್ನು ಕಾಪಾಡು. ನಮ್ಮ ಜೊತೆ ರಾಯರಿದ್ದಾರೆ. ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಕೇಳಿಕೊಳ್ಳುತ್ತಿದ್ದೇನೆ, ಗುರುಗಳೇ ಆದಿಶಕ್ತಿ ದೇವಿ, ತಂದೆ, ತಾಯಿ ಕಾಪಾಡು ಎಂದು ಕೇಳಿಕೊಂಡು ಕೊನೆಗೆ ಧನ್ಯವಾದಗಳು ಎಂದು ಬರೆಯಲಾಗಿದೆ. ಈ ಪತ್ರ ಬರೆದಿರುವ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಪತ್ರದಲ್ಲಿ ಉಲ್ಲೇಖವಾಗಿಲ್ಲ. ಅನಾಮಧೇಯ ಭಕ್ತನ ಈ ಅಪರೂಪದ ಮನವಿ ಪತ್ರ ಮಠದ ಸಿಬ್ಬಂದಿ ಹಾಗೂ ಭಕ್ತರನ್ನು ಚಕಿತಗೊಳಿಸಿದೆ. ಅಷ್ಟೇ ಅಲ್ಲದೇ, ಇದು ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ: ರಾಜೀನಾಮೆ ಹಿಂಪಡೆದ ಯಶವಂತರಾಯ ಗೌಡ ಪಾಟೀಲ್